Bigg Boss House: ಬೆರಗುಗೊಳಿಸುವ ವಾಸದ ಕೋಣೆ, ಬೆಡ್ ರೂಂ, ಗಾರ್ಡನ್; ಹೇಗಿದೆ ನೋಡಿ ಐಷಾರಾಮಿ ಸೌಲಭ್ಯ..!
ಬಿಗ್ ಬಾಸ್ ಮನೆಯ ಅಡುಗೆ ಮನೆಯನ್ನು ಬಿದಿರಿನಿಂದ ಸಿದ್ಧಪಡಿಸಲಾಗಿದೆ. ಇದು ಸ್ಪರ್ಧಿಗಳ ನೆಚ್ಚಿನ ಸ್ಥಗಳಲ್ಲಿ ಒಂದಾಗಿದೆ.
ಬಿಗ್ ಬಾಸ್ ಮನೆಯ ಶೌಶಗೃಹ ಪ್ರದೇಶ ನೋಡಲು ಸುಂದರವಾಗಿ ಕಾಣುತ್ತಿದೆ. ಗೋಡೆಗಳನ್ನು ಬಿದಿರಿನಿಂದ ಮತ್ತು ಹೂವಿನ ಚಿತ್ರಗಳಿಂದ ಅಲಂಕರಿಸಲಾಗಿದೆ.
ಬಿಗ್ ಬಾಸ್ ಮನೆಯ ವಾಸದ ಕೋಣೆಗಳು ಎಲ್ಲ ಸ್ಪರ್ಧಿಗಳಿಗೆ ಅತ್ಯಂತ ಮುಖ್ಯವಾದ ಪ್ರದೇಶ. ಸ್ಪರ್ಧಿಗಳಿಗೆ ಅನುಕೂಲವಾಗುವಂತೆ ಸಕಲ ಸೌಲಭ್ಯಗಳನ್ನು ಹೊಂದಿರುವ ವಾಸದ ಕೋಣೆ ನೋಡುಗರಿಗೆ ಬೆರಗು ಮೂಡಿಸುವಂತಿದೆ.
ಬಿಗ್ ಬಾಸ್ ಮನೆಯಲ್ಲಿನ ಎಲ್ಲ ಸ್ಪರ್ಧಿಗಳು ತಮ್ಮ ಚಿಂತೆಗಳನ್ನು ಪಕ್ಕಕ್ಕಿಟ್ಟು ಈ ಸುಂದರವಾದ ಉದ್ಯಾನ ಪ್ರದೇಶದಲ್ಲಿ ವಿಶ್ರಾಂತಿ ಪಡೆಯಬಹುದು.
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಿಗೆ ಅನುಕೂಲಕ್ಕೆ ತಕ್ಕಹಾಗೆ ಮಲಗುವ ಕೋಣೆಗಳನ್ನು ಸಜ್ಜುಗೊಳಿಸಲಾಗಿದೆ. ಆರಾಮದಾಯಕ ಹಾಸಿಗೆಗಳು, ಮೃದುವಾದ ಕುಳಿತುಕೊಳ್ಳುವ ಚೇರ್ ಗಳು, ಲೈಟಿಂಗ್ ವ್ಯವಸ್ಥೆ ಇನ್ನೂ ಅನೇಕ ಸೌಲಭ್ಯಗಳನ್ನು ಇದು ಒಳಗೊಂಡಿದೆ.
ಬಿಗ್ ಬಾಸ್ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಊಟದ ಸ್ಥಳವನ್ನು ಉದ್ಯಾನ ಪ್ರದೇಶದಲ್ಲಿ ಮಾಡಲಾಗಿದೆ. ಈ ಮೊದಲು ಮನೆಯ ಒಳಗಿನ ಕೋಣೆಯಲ್ಲಿ ಊಟದ ಸ್ಥಳವನ್ನು ನಿರ್ಮಿಸಲಾಗುತ್ತಿತ್ತು.
ಈ ಸುಂದರ ಪ್ರದೇಶವು ಸ್ಪರ್ಧಿಗಳಿಗೆ ಶೌಚಗೃಹ ಮತ್ತು ತಪ್ಪೊಪ್ಪಿಗೆ(Confession)ಕೊಠಡಿಯನ್ನು ಸಂಪರ್ಕಿಸುತ್ತದೆ.
ಈ ಬಾರಿ ಈಜುಕೊಳದ ಪ್ರದೇಶವನ್ನು ಡ್ರಾಪ್ ಶಾಪ್ ನಲ್ಲಿ ಮಾಡಲಾಗಿದ್ದು, ಅದರ ಸುತ್ತಲೂ ಸಾಕಷ್ಟು ಹಸಿರು ಇರುವಂತೆ ನೋಡಿಕೊಳ್ಳಲಾಗಿದೆ.
ಬಿಗ್ ಮನೆಯಲ್ಲಿ ಸ್ಪರ್ಧಿಗಳು ವರ್ಕೌಟ್ ಮಾಡಲು ಅನುಕೂಲವಾಗುವಂತೆ ಜಿಮ್ ಪ್ರದೇಶವನ್ನು ಸಜ್ಜುಗೊಳಿಸಲಾಗಿದೆ. ಯಾವಾಗ ಬೇಕಾದರೂ ಸ್ಪರ್ಧಿಗಳು ಜಿಮ್ ಕಸರತ್ತು ಮಾಡಬಹುದಾಗಿದೆ.