ಸ್ಯಾಂಡಲ್ ವುಡ್ ಪುಡಿಪುಡಿ ಮಾಡಲು ಹಾಲಿವುಡ್ ರೇಂಜಿಗೆ ಹಾಟ್ ಹಾಟ್ ಆಗಿ ಫೋಸ್ ಕೊಟ್ಟಿರುವ ಸಾನ್ಯ ಅಯ್ಯರ್!
ಸ್ಯಾಂಡಲ್ ವುಡ್ ಅನ್ನು ತನ್ನ ಮೋಹಕ್ ಮೈಮಾಟದಿಂದ ಪುಡಿಪುಡಿ ಮಾಡಬೇಕೆಂದು ಪಣತೊಟ್ಟಿರುವ ಬಿಗ್ ಬಾಸ್ ಸುಂದರಿ ಸಾನ್ಯ ಅಯ್ಯರ್ ಈಗ ಹಾಲಿವುಡ್ ರೇಂಜಿಗೆ ಹಾಟ್ ಫೋಟೋಗಳನ್ನು ಹರಿಯಬಿಟ್ಟಿದ್ದಾರೆ. ಸಾನ್ಯ ಅಯ್ಯರ್ ಬೋಲ್ಡ್ ಫೋಟೋಗಳಿಗೆ ಅಭಿಮಾನಿಗಳು ಫಿಧಾ ಆಗದೆ ವಿಧಿನೇ ಇಲ್ಲ.
ತಮ್ಮ ಇನ್ಸ್ತ್ರಾಗ್ರ್ಯಾಮ್ ನಲ್ಲಿ ಸದಾ ಹಾಟ್ ಲುಕ್ ಫೋಟೋಗಳನ್ನು ಅಪ್ಲೋಡ್ ಮಾಡಿ ಅಭಿಮಾನಿಗಳನ್ನು ತಮ್ಮ ಖಾತೆಗೆ ಡೌನ್ ಲೋಡ್ ಮಾಡಿಕೊಳ್ಳುವ ಸ್ಟೈಲಿಶ್ ಸುಂದರಿ ಸಾನ್ಯಾ ಅಯ್ಯರ್ ಇದೀಗ ಹೊಸ ಫೋಟೋ ಶೂಟ್ ಮೂಲಕ ಇನ್ನಷ್ಟು ಬೆಚ್ಚಿ ಬೀಳಿಸುವ ರೀತಿಯ ಬೋಲ್ಡ್ ಫೋಟೋಗಳನ್ನು ಬಿಚ್ಚಿಟ್ಟಿದ್ದಾರೆ.
ಕಿರುತೆರೆಯಲ್ಲಿ ಪುಟ್ಟಗೌರಿ ಪಾತ್ರ ಮಾಡಿ ಕರುನಾಡ ಮನೆಮನೆ ಮಾತಾಗಿದ್ದ ಸಾನ್ಯ ಅಯ್ಯರ್ ಹಿರಿತೆರೆಯಲ್ಲೂ ಮಿರಿಮಿರಿ ಮಿಂಚಲು ಹೊಂಚು ಹಾಕುತ್ತಿದ್ದಾರೆ. ಹಾಗಾಗಿ ಬಿಗ್ ಸ್ಕ್ರೀನ್ ಗೆ ಬೇಕಾಗಬಹುದಾದ ಬೋಲ್ಡ್ ಅಪ್ರೋಚ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ಸದಾ ಸ್ಟೈಲಿಷ್ ಅಪ್ರೋಚ್ ಗೆ ಹೆಸರುವಾಸಿಯಾಗಿದ್ದ ಸಾನ್ಯ ಅಯ್ಯರ್ ಹೊಸ ಫೋಟೋ ಶೂಟ್ ನಲ್ಲಿ ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಬೇಬಿ ಬಾಪ್ ಏರ ಸ್ಟೈಲ್ ಬಾಪ್ರೆಬಾಪ್ ಎನ್ನುವಂತಿದೆ.
ಸಾನ್ಯ ಅಯ್ಯರ್ ಅವರ ಹೊಸ ಲುಕ್ ಹಾಟ್ ಹಾಟ್ ಜೊತೆಗೆ ಕ್ಯೂಟ್ ಕ್ಯೂಟ್ ಕೂಡ. ಅವರ ಜುಟ್ಟು, ಮೈಕಟ್ಟು ಎಲ್ಲವೂ ಅಭಿಮಾನಿಗಳ ಪಾಲಿಗೆ ಕ್ರೆಡಿಟ್ಟು…
ಈಗಾಗಲೇ ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಲಂಕೇಶ್ ಗೆ ನಾಯಕಿಯಾಗಿ ಆಯ್ಕೆಯಾಗಿರುವ ಸಾನ್ಯ ಅಯ್ಯರ್ ಸ್ಯಾಂಡಲ್ ವುಡ್ ನಲ್ಲಿ ಇನ್ನೂ ಹಲವು ಅವಕಾಶಗಳಿಗಾಗಿ ಕಾಯುತ್ತಿದ್ದಾರೆ.