ಬಿಗ್’ಬಾಸ್ ಆನೆ ವಿನಯ್ ಗೌಡ ಪ್ರತಿ ಎಪಿಸೋಡ್’ಗೆ ಪಡೆಯುವ ಸಂಭಾವನೆ ಎಷ್ಟು ಲಕ್ಷ ಗೊತ್ತಾ?

Tue, 21 Nov 2023-7:18 pm,

ವಿನಯ್ ಗೌಡ ಹುಟ್ಟಿದ್ದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ. ಸ್ಯಾಂಡಲ್ವುಡ್’ನಲ್ಲಿ ಸಖತ್ ಹೆಸರು ಮಾಡಿರುವ ವಿನಯ್ ಇದೀಗ ಬಿಗ್ ಬಾಸ್ ಮನೆಯಲ್ಲೂ ಅದ್ಭುತವಾಗಿ ಆಟವಾಡಿದ್ದು, ಮನೆಯ ‘ಆನೆ’ ಎಂಬ ಹಣೆಪಟ್ಟಿ ಪಡೆದುಕೊಂಡಿದ್ದಾರೆ.

ಹರ ಹರ ಮಹಾದೇವ ಧಾರಾವಾಹಿಯಲ್ಲಿ ಮಹಾಶಿವನಾಗಿ ಬಣ್ಣ ಹಚ್ಚಿದ್ದ ವಿನಯ್ ಗೌಡ ಅವರು, ನಟನಾ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ‘ಸಿಐಡಿ ಕರ್ನಾಟಕ’ ಕಾರ್ಯಕ್ರಮದ ಮೂಲಕ ಕಿರುತೆರೆ ನಟರಾಗಿ ಖ್ಯಾತಿ ಪಡೆದಿದ್ದರು ವಿನಯ್ ಗೌಡ. ಇನ್ನು ನಟನೆಯ ಹೊರತಾಗಿ, ಅವರು ಅಥ್ಲೆಟಿಕ್ಸ್‌’ನಲ್ಲಿ ರಾಷ್ಟ್ರೀಯ ಚಾಂಪಿಯನ್ ಕೂಡ ಹೌದು.

ವಿನಯ್ ಗೌಡ ಅವರ ಪತ್ನಿ ಅಕ್ಷತಾ ಕೂಡ ನಟಿ. ಈ ಕಪಲ್, ಕನ್ನಡದ ಖ್ಯಾತ ರಿಯಾಲಿಟಿ ಶೋ 'ಸೂಪರ್ ಜೋಡಿ' ಶೋನಲ್ಲಿ ಭಾಗವಹಿಸಿದ್ದರು. ಅಂದಹಾಗೆ ಈ ದಂಪತಿಗೆ ರಿಷಬ್ ಎಂಬ ಮಗನಿದ್ದಾನೆ.

ವಿನಯ್ ಗೌಡ ಅವರ ಒಟ್ಟಾರೆ ಆಸ್ತಿ ವಿವರದ ಬಗ್ಗೆ ಸ್ಪಷ್ಟನೆ ಇಲ್ಲ. ಆದರೆ ಅವರ ವಾರ್ಷಿಕ ಆದಾಯವು ರೂ. 5 ಕೋಟಿ ಎಂದು ವರದಿಯಾಗಿದೆ. ಈ ಆದಾಯದ ಮೂಲಕ ವಿನಯ್ ಗೌಡ ಅವರು, ಮನರಂಜನಾ ಉದ್ಯಮದಲ್ಲಿ ಎಷ್ಟರ ಮಟ್ಟಿಗೆ ಯಶಸ್ಸನ್ನು ಸಾಧಿಸಿದ್ದಾರೆ ಎಂಬುದನ್ನು ಪ್ರತಿಬಿಂಬಿಸುತ್ತದೆ.

ಇನ್ನು ಮಾಸಿಕ ಆಧಾರದ ಮೇಲೆ ವಿನಯ್ ರೂ. 80,000 ರಿಂದ ರೂ 1 ಲಕ್ಷದವರೆಗೆ ಗಳಿಸುತ್ತಾರೆ. ಕೆಲವು ವರದಿಗಳ ಪ್ರಕಾರ ವಿನಯ್ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಪ್ರತೀ ವಾರಕ್ಕೆ ಒಂದು ಲಕ್ಷ ರೂ, ಸಂಭಾವನೆ ಪಡೆಯುತ್ತಾರಂತೆ. ಈ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ಬಿಗ್ ಬಾಸ್ ಮನೆಯಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವವರಲ್ಲಿ ವಿನಯ್ ಕೂಡ ಒಬ್ಬರು ಎಂದು ಹೇಳಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link