ಮನೆ ನಾಯಿಗೂ ಚಿನ್ನದ ಸರ ಹಾಕ್ಸಿದ್ದಾರೆ ಬಿಗ್ಬಾಸ್ ಸ್ಪರ್ಧಿ ʼಗೋಲ್ಡ್ ಸುರೇಶ್..! 45 ಗ್ರಾಂ ಬಂಗಾರ ತೊಟ್ಟ ʼಆʼ lucky dogʼ ಹೇಗಿದೆ ನೋಡಿ
ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ಈಗಾಗಲೇ ಆರಂಭವಾಗಿದೆ. 17 ಸ್ಪರ್ಧಿಗಳಲ್ಲಿ ಒಬ್ಬರಿಂದ ಒಬ್ಬರು ಪಂಟರು ಎನ್ನುವಂತಿದ್ದಾರೆ. ಆದರೆ ಇಷ್ಟು ಸ್ಪರ್ಧಿಗಳಲ್ಲಿ ಭಾರೀ ಗಮನಸೆಳೆದಿದ್ದು ಗೋಲ್ಡ್ ಸುರೇಶ್.
ಬಿಗ್ ಬಾಸ್ ಸೀಸನ್ 11ರಲ್ಲಿ ಕಾಣಿಸಿಕೊಂಡ ಗೋಲ್ಡ್ ಸುರೇಶ್ ತಮ್ಮ ಮೈ ಮೇಲೆ ಬರೋಬ್ಬರಿ 1 ರಿಂದ 2 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಧರಿಸಿಕೊಂಡಿದ್ದಾರೆ.
ಗೋಲ್ಡ್ ಸುರೇಶ್ ಉತ್ತರ ಕರ್ನಾಟಕ ಮೂಲದವರು. ಓದಿರುವುದು 10ನೇ ತರಗತಿವರೆಗೆ. ಏನಾದರೂ ಸಾಧಿಸಬೇಕೆಂಬ ಛಲದಿಂದ ಹುಟ್ಟೂರು ಬಿಟ್ಟು ಬೆಂಗಳೂರಿಗೆ ಬಂದ ಸುರೇಶ್ ಇದೀಗ ಕೋಟ್ಯಾಧಿಪತಿಯಾಗಿ ಮೆರೆಯುತ್ತಿದ್ದಾರೆ.
ಸುರೇಶ್ ಅವರು RSS ಸಂಘಟನೆಯ ಕಾರ್ಯಕರ್ತ ಸಹ ಹೌದು. ಇನ್ನು ಇವರು ಕ್ರಿಯೇಟಿವ್ ಇಂಟೀರಿಯರ್ ಸಂಸ್ಥೆ ಸ್ಥಾಪನೆ ಮಾಡಿದ್ದ, ಅವರ ಸಾಧನೆಗೆ ಜೀ ಕನ್ನಡ ನ್ಯೂಸ್ ʼಯುವರತ್ನ ಅವಾರ್ಡ್ʼ ನೀಡಿ ಗೌರವಿಸಿದೆ.
ಇನ್ನು ಇವರು ತಮ್ಮ ಪ್ರೀತಿಯ ನಾಯಿಗೂ ಚಿನ್ನದ ಸರ ಹಾಕಿದ್ದಾರೆ. ಗೋಲ್ಡ್ ಸುರೇಶ್ ಅವರು ತುಂಬಾ ಪ್ರೀತಿಯಿಂದ ಸಾಕಿರುವ ಆ ನಾಯಿಗೆ ಕ್ಯಾಪ್ಟನ್ ಅಂತ ಹೆಸರಿಟ್ಟಿದ್ದಾರೆ. ಈ ಸಾಕುನಾಯಿಗೆ 45 ಗ್ರಾಂ ತೂಕದ ಚಿನ್ನದ ಸರ ಹಾಕಿದ್ದಾರೆ. ಅದರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ