ಬಿಗ್ ಬಾಸ್ ಬಿಗ್ ಅಪ್‌ಡೇಟ್: 14 ಸ್ಪರ್ಧಿಗಳ ಪಟ್ಟಿ ರಿಲೀಸ್... ದೊಡ್ಮನೆಗೆ ಸೇರುವವರು ಇವರೇ ನೋಡಿ
ಬಿಗ್ ಬಾಸ್ ಕನ್ನಡ ಪ್ರಾರಂಭವಾಗಲಿದೆ ಎಂಬ ಮಾತು ಈಗಾಗಲೇ ಭಾರೀ ಸದ್ದು ಮಾಡುತ್ತಿದೆ, ಈ ಬೆನಲ್ಲೇ ತೆಲುಗು ಭಾಷೆಯಲ್ಲಿ ಬಿಗ್ ಬಾಸ್ ಸೀಸನ್ 8 ಅದ್ಧೂರಿಯಾಗಿ ಆರಂಭವಾಗಿದೆ. ನಾಗಾರ್ಜುನ ಹೋಸ್ಟ್ ಆಗಿ ಮತ್ತೊಮ್ಮೆ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಈ ಸೀಸನ್ ವಿಭಿನ್ನವಾಗಿರಲಿದೆ ಎಂದು ನಾಗಾರ್ಜುನ ಹೇಳಿಕೊಂಡಿದ್ದಾರೆ
ಅಂದಹಾಗೆ ಈ ಬಿಗ್ ಬಾಸ್ ಮನೆಗೆ ಎಂಟ್ರಿಕೊಟ್ಟ 14 ಮಂದಿ ಯಾರೆಂಬುದು ರಿವೀಲ್ ಆಗಿದೆ. ಎಲ್ಲರನ್ನೂ ಸ್ವಾಗತಿಸಿದ ನಾಗಾರ್ಜುನ, ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಏನಿದೆ ಎಂಬುದನ್ನು ತೋರಿಸಿದ್ದಾರೆ. ಈ ಬಾರಿ ವಿಶೇಷ ಕೊಠಡಿ ಅಲಿಯಾಸ್ ಇನ್ಫಿನಿಟಿ ರೂಂಮ ಜೊತೆಗೆ ಗೋಲ್ಡನ್ ರೂಮ್ (ಟಾಸ್ಕ್ ಆಡುವ ಕೋಣೆ), ಹಂಸ ಕೊಠಡಿ, ಪೀಕಾಕ್ ರೂಮ್, ಜೀಬ್ರಾ ರೂಮ್ ಸೇರಿದಂತೆ ವಿಶೇಷ ವ್ಯವಸ್ಥೆಯನ್ನು ಒಳಗೊಂಡಿದೆ.
ಮೊದಲ ಸ್ಪರ್ಧಿಯಾಗಿ ನಟಿ ಯಶ್ಮಿ ಗೌಡ ಎಂಟ್ರಿಕೊಟ್ಟಿದ್ದಾರೆ. ಇವರು ಕನ್ನಡದ ಚೆಲುವೆ, ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ನನಗೆ ನಟನೆ ಇಷ್ಟ. ಮನೆಯಲ್ಲಿ ಎಲ್ಲರಿಗೂ ಇಷ್ಟವಾಗುವುದಿಲ್ಲ. ಆದರೆ, ಕನ್ನಡ ವಾಹಿನಿಯೊಂದರಲ್ಲಿ ಧಾರಾವಾಹಿಯ ಆಡಿಷನ್ ನಡೆಯುತ್ತಿದೆ ಎಂದು ತಿಳಿದಾಗ ಅಲ್ಲಿ ಅವಕಾಶಕ್ಕಾಗಿ ಪ್ರಯತ್ನಿಸಿ ಮೊದಲ ಆಡಿಷನ್ʼನಲ್ಲಿ ಅವಳು ಆಯ್ಕೆಯಾದೆ ಎಂದು ಅವರು ಹೇಳಿಕೊಂಡಿದ್ದಾರೆ.
ಇನ್ನು ಈ ಸೀಸನ್ʼನಲ್ಲಿ ಯಾರೆಲ್ಲಾ ಕಂಟೆಸ್ಟೆಂಟ್ʼಗಳಿದ್ದಾರೆ ಎಂಬುದನ್ನು ಮುಂದೆ ತಿಳಿಯೋಣ. ನಿಖಿಲ್ ಮಲಯಕ್ಕಲ್ ಎರಡನೇ ಸ್ಪರ್ಧಿ, ಮೂರನೇ ಸ್ಪರ್ಧಿಯಾಗಿ ಅಭಯ್ ನವೀನ್, ನಾಲ್ಕನೇ ಸ್ಪರ್ಧಿಯಾಗಿ ಪ್ರೇರಣಾ, ಐದನೇ ಸ್ಪರ್ಧಿಯಾಗಿ ಆದಿತ್ಯ ಓಂ, ಆರನೇ ಸ್ಪರ್ಧಿಯಾಗಿ ಸೋನಿಯಾ, ಏಳನೇ ಸ್ಪರ್ಧಿಯಾಗಿ ಮಧು ನೆಕ್ಕಂಟಿ (ಬೆಜವಾಡ ಬೇಬಕ್ಕ), ಎಂಟನೇ ಸ್ಪರ್ಧಿಯಾಗಿ ಆರ್ ಜೆ ಶೇಖರ್ ಭಾಷಾ, ಒಂಬತ್ತನೇ ಸ್ಪರ್ಧಿಯಾಗಿ ಕಿರಕ್ ಸೀತಾ, ಹತ್ತನೇ ಸ್ಪರ್ಧಿಯಾಗಿ ನಾಗಮಣಿಕಂಠ, ಹನ್ನೊಂದನೇ ಸ್ಪರ್ಧಿಯಾಗಿ ಪೃಥ್ವಿರಾಜ್, ವಿಷ್ಣುಪ್ರಿಯಾ ಹನ್ನೆರಡನೇ ಸ್ಪರ್ಧಿ, ಹದಿಮೂರನೇ ಸ್ಪರ್ಧಿಯಾಗಿ ನೈನಿಕಾ ಮತ್ತು ನಬೀಲ್ ಅಫ್ರಿದಿ ಹದಿನಾಲ್ಕನೇ ಸ್ಪರ್ಧಿಯಾಗಿ ಪ್ರವೇಶ ಪಡೆದಿದ್ದಾರೆ.
ಇನ್ನು ಈ ಸೀಸನ್ʼನಲ್ಲಿ ನಿರೂಪಕ ನಾಗಾರ್ಜುನ ಶಾಕಿಂಗ್ ಸಂಗತಿಯೊಂದನ್ನು ರಿವೀಲ್ ಮಾಡಿದ್ದಾರೆ. ಅದೇನೆಂದರೆ ಈ ಸೀಸನ್ʼನಲ್ಲಿ ನಾಯಕ ಇರುವುದಿಲ್ಲ. ರೇಷನ್ ಪಡೆಯಬೇಕಾದರೆ ಟಾಸ್ಕ್ʼಗಳಲ್ಲಿ ಗೆಲ್ಲಲೇಬೇಕು ಎಂದು ಹೇಳಿದ್ದಾರೆ.
ಕೊನೆಗೆ ಗೆಸ್ಟ್ ಅಪಿಯರೆನ್ಸ್ ನೀಡಿದ ನಿರ್ದೇಶಕ ಅನಿಲ್ ರಾವಿಪುಡಿ ಕೊನೆಯ ಎರಡು ಜೋಡಿಗಳ ಜೊತೆ ಆಟ ಆಡಿ ಹೊರಟು ಹೋಗಿದ್ದಾರೆ.