ಆಗ ಬಿಗ್‌ಬಾಸ್‌ಗೆ ಹೋಗೋಕೆ ಡಿಮ್ಯಾಂಡ್‌ ಇಟ್ಟು.. ಈಗ ನನ್ನ ಕರ್ಕೊಳ್ಳಿ ಪ್ಲೀಸ್‌ ಅಂತೀದಾಳೆ ಸುಂದರಿ..!

Wed, 24 Jul 2024-10:15 pm,

ಆ್ಯಂಕರ್ ವಿಷ್ಣು ಪ್ರಿಯಾ ಸೋಷಿಯಲ್ ಮೀಡಿಯಾದ ಸೆನ್ಸೇಷನ್. Instagram ನಲ್ಲಿ ಈ ಚೆಲುವೆ ಹಾಕುವ ಫೋಟೋಸ್‌ ಹಲ್‌ಚಲ್‌ ಸೃಷ್ಟಿಸುತ್ತವೆ.. ವಿಷ್ಣು ತನ್ನ ಗ್ಲಾಮರ್ ಶೋ ಮೂಲಕ ಸಾಕಷ್ಟು ಫ್ಯಾನ್‌ ಫಾಲೋಯಿಂಗ್‌ ಹೊಂದಿದ್ದಾರೆ.. ಇದೀಗ ಸುಂದರಿಯ ಕುರಿತು ಹೊಸ ವಿಚಾರವೊಂದು ಮುನ್ನಲೆಗೆ ಬಂದಿದೆ..  

ಬಿಗ್ ಬಾಸ್ ಶೋಗೆ ವಿಷ್ಣು ಪ್ರಿಯಾ ಬರುತ್ತಾರೆ ಎಂಬ ಪ್ರಚಾರ ನಡೆಯುತ್ತಿದೆ. ಕಳೆದ ಎರಡು ಸೀಸನ್‌ಗಳಿಂದ ಆಕೆಯ ಹೆಸರು ಕೇಳಿಬರುತ್ತಿದೆ. ಆದರೆ ಅವಳು ಪ್ರತಿ ಬಾರಿ ನಿರಾಶೆಗೊಳ್ಳುತ್ತಾಳೆ. ಈ ಬಾರಿಯೂ ಆಕೆಯ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಆದ್ರೆ ಅದು ಸಸ್ಪೆನ್ಸ್.   

ಈ ಹಿನ್ನೆಲೆಯಲ್ಲಿ ವಿಷ್ಣು ಪ್ರಿಯಾಗೆ ಸಂಬಂಧಿಸಿದ ಒಂದು ಕುತೂಹಲಕಾರಿ ಸಂಗತಿ ಹೊರಬಿದ್ದಿದೆ. ಕಳೆದ ಸೀಸನ್ ನಲ್ಲಿಯೇ ವಿಷ್ಣು ಪ್ರಿಯಾಗೆ ಆಫರ್ ಬಂದಿತ್ತು. ಆದರೆ ಇದಕ್ಕಿಂತ ಬಿಗ್‌ ಆಫರ್‌ ಬಂದ್ರೆ ಕೈಕೊಟ್ಟು ಹೋಗ್ತಾಳೆ ಅಂತ ಬಿಗ್‌ಬಾಸ್‌ ಮ್ಯಾನೆಜ್‌ಮೆಂಟ್‌ ಈಕೆಯನ್ನ ಕೈಬಿಟ್ಟರು ಎನ್ನಲಾಗಿದೆ..   

ಅಲ್ಲದೆ, ಬಿಗ್ ಬಾಸ್ 7 ರಲ್ಲಿ ಭಾಗವಹಿಸಲು ಈಕೆ ಹೆಚ್ಚು ಸಂಭಾವನೆಗೆ ಬೇಡಿಕೆ ಇಟ್ಟಿದ್ದಳಂತೆ. ಬಿಗ್ ಬಾಸ್ ಆಯೋಜಕರು ದಿನಕ್ಕೆ 30 ಸಾವಿರ ನೀಡುತ್ತಾರೆ. ಆದ್ರೆ ಈ ಹಾಟ್ ಬ್ಯೂಟಿ ಕೇಳಿದ್ದು 70 ರಿಂದ 80 ಸಾವಿರ ರೂ.. ವಾಸ್ತವವಾಗಿ ಈ ಶೋನಲ್ಲಿ ಭಾಗವಹಿಸುವ ಯಾವುದೇ ಸ್ಪರ್ಧಿಗೆ ಅಷ್ಟು ಹಣ ನೀಡುತ್ತಿಲ್ಲ.  

ಸಧ್ಯ ಬಿಗ್‌ ಬಾಸ್‌ ಸೀಸನ್‌ 8 ತೆಲುಗು ರಿಲೀಸ್‌ಗೆ ರೆಡಿಯಾಗುತ್ತಿದೆ.. ಅದಕ್ಕೆ ಈ ಬಾರಿ ಚೆಲುವೆ ಚೌಕಾಸಿಗೆ ಬಂದಿದ್ದಳಂತೆ. ಮ್ಯಾನೆಜ್‌ಮೆಂಟ್‌ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದಾಳೆ ಎನ್ನುವ ಮಾತು ಸಹ ಹರಿದಾಡುತ್ತಿದೆ.. ಆದರೆ ಇದು ಅಧಿಕೃತವಲ್ಲ..  

ವಿಷ್ಣು ಪ್ರಿಯಾ `ಪೋವೆ ಪೋರಾ' ತೆಲುಗು ಕಾರ್ಯಕ್ರಮದ ಮೂಲಕ ನಿರೂಪಕರಾದರು. ಈ ಕಾರ್ಯಕ್ರಮ ಆಕೆಗೆ ಒಳ್ಳೆಯ ಮನ್ನಣೆ ತಂದುಕೊಟ್ಟಿತು. ಅದರ ನಂತರ ಅವರು ಅನೇಕ ಟಿವಿ ಶೋಗಳಲ್ಲಿ ಕಾಣಿಸಿಕೊಂಡರು. ಕಿರುಚಿತ್ರಗಳ ಮೂಲಕ ಮುನ್ನೆಲೆಗೆ ಬಂದರು.. ವಾಂಟೆಡ್ ಪಾಂಡುಗಡ ಮತ್ತು ದಯಾ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ...   

ZEENEWS TRENDING STORIES

By continuing to use the site, you agree to the use of cookies. You can find out more by Tapping this link