ಲುಕ್‌ ನೋಡಿ ಯಾರನ್ನು ಅಳೆಯಬಾರದು ಗುರು..! ಹೇಗಿದ್ದಳು... ಹೇಗಾದ್ಳು ನೋಡಿ ಬಿಗ್‌ಬಾಸ್‌ ಬ್ಯೂಟಿ..

Sun, 22 Sep 2024-5:31 pm,

ಈ ಮೇಲೆ ಫೋಟೋದಲ್ಲಿರುವ ಹುಡುಗಿ ಆ್ಯಂಕರ್ ಕೂಡ. ತೆರೆಯ ಮೇಲೆ ತನಗೊಂದು ವಿಶೇಷವಾದ ಐಡೆಂಟಿಟಿ ಕ್ರಿಯೇಟ್‌ ಮಾಡಿಕೊಂಡಿದ್ದಾಳೆ. ಒಂದೆಡೆ ರಿಯಾಲಿಟಿ ಶೋಗಳಲ್ಲಿ ನಿರೂಪಕರಾಗಿ, ಆಲ್ಬಂ ಸಾಂಗ್‌ ಮತ್ತು ಸಿನಿಮಾಗಳಲ್ಲಿ ನಿರತರಾಗಿದ್ದಾಳೆ. ಅಲ್ಲದೆ, ತಮ್ಮ ಸೌಂದರ್ಯ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡ್‌ ಕ್ರಿಯೇಟ್‌ ಮಾಡುತ್ತಿದ್ದಾಳೆ..  

ಆ್ಯಂಕರ್‌ಗಳು ತೆರೆಯ ಮೇಲೆ ತಮ್ಮ ಸೌಂದರ್ಯ ಮತ್ತು ಮಾತುಗಾರಿಕೆಯಿಂದ ಪ್ರೇಕ್ಷಕರನ್ನು ರಂಜಿಸುತ್ತಾರೆ. ತೆಲುಗಿನಲ್ಲಿ ಸುಮಾ ಕನಕಲಾ ಮತ್ತು ಪ್ರದೀಪ್ ಮಾಚಿರಾಜು ಅವರ ಆ್ಯಂಕರಿಂಗ್ ಬಗ್ಗೆ ಹೇಳಬೇಕಾಗಿಲ್ಲ. ಕಾರ್ಯಕ್ರಮಗಳಲ್ಲಿ ತಮ್ಮದೇ ಆದ ಕಾಮಿಡಿ ಆ್ಯಕ್ಟ್‌ ಮತ್ತು ಮಾತುಗಳಿಂದ ನಗು ತರಿಸುತ್ತಾರೆ.  

ಅಲ್ಲದೆ ಇನ್ನು ಕೆಲವು ಆ್ಯಂಕರ್ ಗಳೂ ತಮ್ಮದೇ ಶೈಲಿಯಲ್ಲಿ ಮನರಂಜನೆ ನೀಡುತ್ತಾರೆ. ಈ ಪೈಕಿ ಮೇಲೆ ಫೊಟೋದಲ್ಲಿರುವ ಹುಡುಗಿ ಸಧ್ಯ ಬಿಗ್ ಬಾಸ್ ತೆಲುಗು ರಿಯಾಲಿಟಿ ಶೋನಲ್ಲಿ ಸ್ಪರ್ಧಿ.. ಹೆಸರು ಆಂಕರ್ ವಿಷ್ಣುಪ್ರಿಯಾ. ಆರಂಭದಲ್ಲಿ ವಿಷ್ಣುಪ್ರಿಯಾ ಕಿರುಚಿತ್ರಗಳನ್ನು ಮಾಡುತ್ತಿದ್ದರು. ನಂತರ ಕಿರುತೆರೆಯಲ್ಲಿ ಆ್ಯಂಕರ್ ಆಗಿ ಪ್ರೇಕ್ಷಕರನ್ನು ರಂಜಿಸಿದರು.   

ಪೋವೆ ಪೋರ ಶೋ ಮೂಲಕ ಆ್ಯಂಕರ್ ಆಗಿ ಕೆರಿಯರ್ ಆರಂಭಿಸಿದ ವಿಷ್ಣು ಕಡಿಮೆ ಸಮಯದಲ್ಲಿ ಬಹಳ ಫೇಮಸ್ ಆದರು. ಆ ನಂತರ ಹಲವು ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ತೆಲುಗು ಜನರಿಗೆ ಹತ್ತಿರವಾದರು. ಜೊತೆಗೆ ಇದೀಗ ನಾಯಕಿಯಾಗಿಯೂ ಅವಕಾಶಗಳನ್ನು ಗಿಟ್ಟಿಸಿಕೊಂಡಿದ್ದಾರೆ.  

ಇತ್ತೀಚೆಗೆ ಅವರು ಸಂತೋಷ್ ಶೋಭನ್ ಅಭಿನಯದ ಬೇಕರ್ ಮತ್ತು ಬ್ಯೂಟಿ ಚಿತ್ರದಲ್ಲಿ ನಟಿಸಿದ್ದರು. ಇನ್ನೊಂದೆಡೆ ಆ್ಯಂಕರಿಂಗ್ ಮಾಡುತ್ತಿರುವ ವಿಷ್ಣು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ. ಅಲ್ಲದೆ, ಕೆಲವು ಆಲ್ಬಂ ಸಾಂಗ್‌ಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.   

ವಿಷ್ಣು ಸದ್ಯ ಬಿಗ್ ಬಾಸ್ ಸೀಸನ್ 8 ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ. ತನ್ನ ಆಟದ ಶೈಲಿ ಮತ್ತು ನಡವಳಿಕೆಯಿಂದ ಉತ್ತಮ ಪೈಪೋಟಿ ನೀಡುತ್ತಿದ್ದಾಳೆ. ಈ ಸೀಸನ್‌ನ ಬಹುಬೇಡಿಕೆಯ ಸ್ಪರ್ಧಿಗಳಲ್ಲಿ ವಿಷ್ಣು ಸಹ ಒಬ್ಬರು ಎಂದು ಹೇಳಲಾಗುತ್ತಿದೆ..   

ವರದಿಗಳ ಪ್ರಕಾರ, ಈ ಸೀಸನ್‌ನಲ್ಲಿ ವಿಷ್ಣು ಅತಿ ಹೆಚ್ಚು ಸಂಭಾವನೆ ಪಡೆಯುವ ಸ್ಪರ್ಧಿ ಕೂಡ. ಆಕೆಗೆ ವಾರಕ್ಕೆ 5.5 ಲಕ್ಷ ಸಂಭಾವನೆ ನೀಡಲಾಗುತ್ತಿದೆಯಂತೆ. ವಿಷ್ಣುವಿಗೆ ಪ್ರೇಕ್ಷಕರ ಬೆಂಬಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಷ್ಟೇ ಅಲ್ಲ.. ಈ ಸೀಸನ್ ನ ಟಾಪ್ 5 ಸ್ಪರ್ಧಿ ಕೂಡ ಅವರೇ ಎನ್ನಲಾಗುತ್ತಿದೆ. ಇದೇ ವೇಳೆ ವಿಷ್ಣು ಬಾಲ್ಯದ ಫೋಟೋ ಈಗ ಟ್ರೆಂಡಿಂಗ್ ಆಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link