ಬಿಗ್ ಬಾಸ್‌ ಮತ್ತೆ ಆರಂಭ: ಇವರೇ ನೋಡಿ ದೊಡ್ಡಮನೆ ಪ್ರವೇಶಿಸಲಿರುವ ಸ್ಟಾರ್‌ಗಳು!

Tue, 05 Jul 2022-1:52 pm,

ಟೀನಾ ದತ್ತಾ: ಟಿವಿಯ ಜನಪ್ರಿಯ ಕಾರ್ಯಕ್ರಮ ಉತ್ತರನ್ ಮೂಲಕ ಮನೆ ಮನೆ ಪ್ರಸಿದ್ಧಿ ಪಡೆದ ಟೀನಾ ದತ್ತಾ ಇಂದು ಕಿರುತೆರೆ ಪ್ರಪಂಚದಿಂದ ಸ್ವಲ್ಪ ದೂರವಿದ್ದಾರೆ. ತಮ್ಮ ಮನಮೋಹಕ ಶೈಲಿಯಿಂದ ಚರ್ಚೆಯಲ್ಲಿದ್ದಾರೆ. ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಳ್ಳುವಂತೆ ಟೀನಾಗೆ ಆಹ್ವಾನ ಬಂದಿರುವುದರಿಂದ ಈ ಬಾರಿಯ ಶೋನಲ್ಲಿ ಟೀನಾ ಕೂಡ ಕಾಣಿಸಿಕೊಳ್ಳಬಹುದು ಎಂದು ವರದಿಯಾಗಿದೆ.  

ಮುನ್ಮುನ್ ದತ್ತಾ ಸದಾ ಸುದ್ದಿಯಲ್ಲಿರುವ ವ್ಯಕ್ತಿ. ಮಾಧ್ಯಮ ವರದಿಗಳ ಆಧಾರದಲ್ಲಿ ಹೇಳುವುದಾದರೆ ಮುನ್ಮುನ್ ಕಾರ್ಯಕ್ರಮದಲ್ಲಿ ಭಾಗಿಯಾಗಬಹುದು. ಕಳೆದ ಸೀಸನ್‌ನಲ್ಲೂ ವಿಶೇಷ ಸಂಚಿಕೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು ಈ ಬಾರಿ ಸ್ಪರ್ಧಿಯಾಗಿ ಕಾರ್ಯಕ್ರಮಕ್ಕೆ ಆಗಮಿಸಬಹುದು ಎಂದು ಹೇಳಲಾಗುತ್ತಿದೆ. ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾದಲ್ಲಿ ಮುನ್ಮುನ್ ದತ್ತಾ ಬಬಿತಾ ಜಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ಪೂನಂ ಪಾಂಡೆ: ಈ ನಟಿ ತನ್ನ ಗ್ಲಾಮರಸ್ ಮತ್ತು ಬೋಲ್ಡ್ ವಿಚಾರದಿಂದಲೇ ಯಾವಾಗಲೂ ಚರ್ಚೆಯಲ್ಲಿರುತ್ತಾರೆ. ಇತ್ತೀಚೆಗೆ, ಪೂನಂ ಪಾಂಡೆ ಕಂಗನಾ ರಣಾವತ್ ಅವರ ಲಾಕಪ್‌ನಲ್ಲಿ ಭಾಗವಹಿಸಿ, ಸುದ್ದಿಯಾಗಿದ್ದರು. ಆಕೆಯ ದಿಟ್ಟ ಶೈಲಿ ಮತ್ತು ಅವರ ಮಾತಿನಿಂದಲೇ ಹೆಚ್ಚಾಗಿ ವಿವಾದದ ಸುಳಿಗೆ ಸಿಲುಕಿಕೊಳ್ಳುತ್ತಾರೆ. ಈಗ ಈ ಕಾರಣಕ್ಕಾಗಿ ಬಿಗ್ ಬಾಸ್ ಆಯೋಜಕರು ಅವರನ್ನು ಶೋನಲ್ಲಿ ಭಾಗವಹಿಸುವಂತೆ ಆಫರ್ ಮಾಡಿದ್ದಾರೆ ಎನ್ನಲಾಗಿದೆ.

ಜನ್ನತ್ ಜುಬೈರ್ ಸಣ್ಣ ಪರದೆಯಲ್ಲಿ ಕಾಣಿಸಿಕೊಂಡರೂ ಸಹ ದೊಡ್ಡ ಮಟ್ಟಿನಲ್ಲಿ ಹೆಸರು ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಈ ಸುಂದರಿ ಪ್ರಾಬಲ್ಯ ಮೆರೆದಿದ್ದಾರೆ. ಜನ್ನತ್ ಅವರು ಖತ್ರೋನ್ ಕೆ ಕಿಲಾಡಿಯಲ್ಲಿ ಸದ್ದು ಮಾಡುತ್ತಿದ್ದು, ಇದಾದ ನಂತರ ಅವರು ಬಿಗ್ ಬಾಸ್ 16 ರಲ್ಲೂ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ಶಿವಾಂಗಿ ಜೋಶಿ: ʼಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈʼ ಕಾರ್ಯಕ್ರಮದ ನೈರಾ ಜನಪ್ರಿಯರಾಗಿದ್ದಾರೆ. ಪ್ರಸ್ತುತ, ಹಲವು ವರ್ಷಗಳಿಂದ ಈ ಕಾರ್ಯಕ್ರಮದ ಭಾಗವಾಗಿದ್ದ ಅವರು ನಂತರದ ದಿನಗಳಲ್ಲಿ ವಿದಾಯ ಹೇಳಿದರು. ಆದರೆ ಶಿವಾಂಗಿಗೆ ಈಗಲೂ ಅನೇಕ ಮಂದಿ ಅಭಿಮಾನಿಗಳಿದ್ದಾರೆ. ಅಷ್ಟೇ ಅಲ್ಲದೆ, ಮೊಹ್ಸಿನ್ ಖಾನ್ ಜೊತೆಗೆ ಅವರು ಸಂಬಂಧ ಹೊಂದಿದ್ದಾರೆ ಎಂಬ ವಿಚಾರದಿಂದ ಅವರು ಸುದ್ದಿಯಲ್ಲಿದ್ದಾರೆ. ಇದೀಗ ಅವರು ಬಿಗ್ ಬಾಸ್ 16 ರಲ್ಲಿ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

ದಿವ್ಯಾಂಕಾ ತ್ರಿಪಾಠಿ: ಟಿವಿ ಸೀರಿಯಲ್‌ನಲ್ಲಿಅಭಿನಯಿಸಿದ್ದ ಅವರು, ಆದರ್ಶ ಸೊಸೆಯ ಪಾತ್ರ ಮಾಡಿದ್ದರು. ಇದಲ್ಲದೇ, ಖತ್ರೋನ್ ಕೆ ಕಿಲಾಡಿಯ ಕೊನೆಯ ಸೀಸನ್‌ನಲ್ಲಿ ದಿವ್ಯಾಂಕ ಸಾಕಷ್ಟು ಸುದ್ದಿ ಮಾಡಿದ್ದರು. ಇದೀಗ ಬಿಗ್ ಬಾಸ್‌ಗೆ ಅವರನ್ನು ಆಹ್ವಾನಿಸಲಾಗಿದೆ ಎಂಬ ಸುದ್ದಿ ಹರಿದಾಡಿದೆ

ZEENEWS TRENDING STORIES

By continuing to use the site, you agree to the use of cookies. You can find out more by Tapping this link