BBK10: ಸಿರಿ ಚಿಕ್ಕವರಿದ್ದಾಗ ನಡೆದ ಆ ಘಟನೆಯೇ ಮದುವೆ ಆಗದಿರಲು ಕಾರಣವಾಯ್ತಾ?
ನಟಿ ಸಿರಿ ಕನ್ನಡ, ತಮಿಳು, ತೆಲುಗಿನಲ್ಲಿ ನಟಿಸಿ ಖ್ಯಾತಿ ಪಡೆದವರು. ನಟಿ ಸಿರಿ ಅವರು ಬರೋಬ್ಬರಿ 30 ಸೀರಿಯಲ್ ಗಳಲ್ಲಿ ನಟಿಸಿದ್ದಾರೆ.
ಹಲವು ದಶಕಗಳಿಂದ ಸಿನಿ ಬದುಕಿನಲ್ಲಿ ತೊಡಗಿಸಿಕೊಂಡಿರುವ ಸಿರಿ ಅವರು 40 ವರ್ಷ ವಯಸ್ಸಾದರೂ ಯಾಕೆ ಮದುವೆ ಆಗಿಲ್ಲ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.
ನಟಿ ಸಿರಿ ಅವರು ನಟನೆಯತ್ತ ಸಾಕಷ್ಟು ಆಸಕ್ತಿ ಹೊಂದಿದ್ದರು. ಇದರಿಂದಾಗಿ ಮದುವೆ ತಮ್ಮ ವೃತ್ತಿಜೀವನಕ್ಕೆ ಅಡ್ಡಿಯಾಗಬಾರದೆಂದು ಬಯಸಿದ್ದರಂತೆ.
ನಟಿ ಸಿರಿ ತನ್ನ ವೃತ್ತಿ ಬದುಕಿಗೆ ಸಾಕಷ್ಟು ಪ್ರಾಮುಖ್ಯತೆ ನೀಡಿದ್ದರು. ಪ್ರತಿಯೊಂದು ಹೆಜ್ಜೆಯಲ್ಲಿಯು ಸಪೋರ್ಟ್ ಮಾಡುವ ಸಂಗಾತಿ ಬೇಕೆಂದು ಬಯಸಿದ್ದರು ಎನ್ನಲಾಗಿದೆ.
ಯೌವನದಲ್ಲಿದ್ದಾಗಲೇ ಸಿರಿ ಇಂಥದ್ದೊಂದು ನಿರ್ಧಾರಕ್ಕೆ ಬಂದರು ಎನ್ನಲಾಗುತ್ತದೆ. ವೃತ್ತಿ ಬದುಕಿಗೆ ಸಪೋರ್ಟ್ ಮಾಡುವ ತಕ್ಕ ವರ ಸಿಕ್ಕರೆ ಮಾತ್ರ ಮದುವೆಯಾಗುತ್ತೇನೆ ಎಂದು ನಿರ್ಧರಿಸಿದರಂತೆ.
ಕೆಲವು ವರದಿಗಳ ಪ್ರಕಾರ, ಚಿಕ್ಕ ವಯಸ್ಸಿನಲ್ಲಿ ತಮ್ಮ ಅಕ್ಕನ ಮದುವೆಯ ಜೀವನ ಕಂಡು ಸಿರಿ ಬೇಸತ್ತಿದ್ದರಂತೆ. ಇದರಿಂದ ಸಿರಿ ಭಾವನೆಗಳಿಗೆ ಘಾಸಿಯಾಗಿ ಅವರು ಮದುವೆ ಜೀವನದ ಮೇಲೆ ಇಂಟರೆಸ್ಟ್ ಕಳೆದು ಕೊಂಡರಂತೆ ಎನ್ನಲಾಗಿದೆ.
ಸೋದರಿಯ ವೈವಾಹಿಕ ಜೀವನ ಹಾಳಾಗಿದ್ದೇ ಸಿರಿಯವರು ಮದುವೆ ಆಗದೇ ಇರುವುದಕ್ಕೆ ಕಾರಣ ಎಂದು ಕೆಲವು ವರದಿಗಳು ಹೇಳುತ್ತವೆ. ಆದರೆ ಸಿರಿಯಾಗಲಿ ಅವರ ಮನೆಯವರಾಗಲಿ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ.