ಇಷ್ಟು ವಯಸ್ಸಾದರೂ ಮೋಕ್ಷಿತಾ ಮದುವೆ ಆಗಿಲ್ಲ ಯಾಕೆ.. ಬಿಕ್ಕಿ ಬಿಕ್ಕಿ ಅಳುತ್ತ ಅಸಲಿ ಕಾರಣ ಬಿಚ್ಚಿಟ್ಟ ಪಾರು !
)
ನಟಿ ಮೋಕ್ಷಿತಾಗೆ 29 ವರ್ಷ ವಯಸ್ಸು. ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿಯಾಗಿದ್ದಾರೆ. ಇದೀಗ ಮೋಕ್ಷಿತಾ ಮದುವೆ ಆಗದಿರುವ ಕಾರಣವನ್ನು ಬಿಗ್ ಬಾಸ್ ಮನೆಯಲ್ಲಿ ಬಿಚ್ಚಿಟ್ಟಿದ್ದಾರೆ.
)
ಮೋಕ್ಷಿತಾಗೆ ಅವರ ಅಪ್ಪ ಒಂದು ವರ್ಷದಿಂದ ಮದುವೆಗೆ ಒತ್ತಾಯ ಮಾಡುತ್ತಿದ್ದಾರಂತೆ. ನನ್ನ ತಮ್ಮ ಫಿಸಿಕಲಿ ಚಾಲೆಂಜಿಂಗ್ ಆಗಿದ್ದಾನೆ. ನನ್ನ ಮನೆಗೆ ನಾನೇ ಮಗ, ಮಗಳು ಎಲ್ಲ.
)
ನಾನೇನಾದರೂ ಮದುವೆ ಆದರೆ ಮನೆಯ ಯಾರು ನೋಡಿಕೊಳ್ಳುತ್ತಾರೆ ಎಂಬುದು ನನ್ನ ದೊಡ್ಡ ಚಿಂತೆಯಾಗಿದೆ. ಇದೇ ಚಿಂತೆ ನನಗೆ ಕಾಡುತ್ತಿದೆ. ಈ ಒಂದು ಕಾರಣಕ್ಕೆ ನನಗೆ ಮದುವೆ ಆಗೋದು ಇಷ್ಟ ಇಲ್ಲ.
ಮದುವೆ ಬಗ್ಗೆ ತುಂಬಾ ಗೊಂದಲದಲ್ಲಿ ನಾನಿದ್ದೇನೆ. ಮದುವೆ ಆದ್ಮೇಲೆ ನಿಮ್ಮಿಂದ ದೂರ ಆಗ್ತೀನೋ ಎನ್ನುವ ಭಯ ನನ್ನಲ್ಲಿ ಇದೆ.
ಇದರಿಂದ ಮದುವೆ ಮುಂದಕ್ಕೆ ಹಾಕುತ್ತಿದ್ದೇನೆ. ನಿಮಗೆ ನೋವು ಕೊಟ್ಟಿದ್ದೇನೆ ಎಂದು ಮೋಕ್ಷಿತಾ ಕಣ್ಣಿರಿಡುತ್ತಾ ಹೇಳಿಕೊಂಡಿದ್ದಾರೆ.