ರಶ್ಮಿಕಾ ಮಂದಣ್ಣ ಅವರ ಕುಚಿಕು ಗೆಳತಿ ಕನ್ನಡ ಬಿಗ್ ಬಾಸ್‌ನ ಈ ಸ್ಪರ್ಧಿ! ನ್ಯಾಷನಲ್ ಕ್ರಶ್ ಆಳ ಅರಿತಿರುವ ಆ ಕ್ಯೂಟ್ ಬೆಡಗಿ ಯಾರು ಗೊತ್ತಾ..?
ಬಹುನಿರೀಕ್ಷಿತ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ 2 ವಾರಗಳು ಸಮೀಪಿಸುತ್ತಿವೆ. ಸದ್ಯ ಒಬ್ಬರಿಗಿಂತ ಒಬ್ಬರು ಚಾಲಾಕಿಗಳೇ ಎನ್ನುವಂತಿರುವ ಸ್ಪರ್ಧಿಗಳ ಮಧ್ಯೆ ನಟಿ ರಶ್ಮಿಕಾ ಮಂದಣ್ಣ ಅವರ ಬೆಸ್ಟ್ ಫ್ರೆಂಡ್ ಕೂಡ ಇದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜವೇ? ನಿಜವಾಗಿದ್ದರೆ ಆಕೆ ಯಾರು? ಎಂಬ ವಿಚಾರದ ಬಗ್ಗೆ ಈ ವರದಿಯಲ್ಲಿ ತಿಳಿದುಕೊಳ್ಳೋಣ.
ಬಿಗ್ ಬಾಸ್ ಮನೆಯೊಳಗೆ ನಟಿ ರಶ್ಮಿಕಾ ಮಂದಣ್ಣ ಅವರ ಬೆಸ್ಟ್ ಫ್ರೆಂಡ್ ಆಗಮಿಸಿದ್ದು ನಿಜ. ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಆದರೆ ಅದು ಕನ್ನಡ ಸೀಸನ್‌ಗೆ ಅಲ್ಲ, ಬದಲಾಗಿ ತೆಲುಗು ಸೀಸನ್‌ಗೆ. ಆದರೆ ಈ ಸ್ಪರ್ಧಿ ಹಿಂದೊಮ್ಮೆ ಕನ್ನಡ ಬಿಗ್‌ಬಾಸ್‌ನ ಮಿನಿ ಸೀಸನ್‌ನಲ್ಲಿ ಭಾಗಿಯಾಗಿದ್ದರು.
ಅಷ್ಟಕ್ಕೂ ಅವರು ಯಾರು ಎಂಬ ಗೊಂದಲ ನಿಮ್ಮಲ್ಲಿ ಮೂಡಿರಬಹುದು. ಆಕೆ ಬೇರಾರು ಅಲ್ಲ, ಪ್ರೇರಣಾ.
ಬಿಗ್ ಬಾಸ್ ತೆಲುಗು 8 ಸೀಸನ್ ಪ್ರಾರಂಭದ ದಿನ, ನಟಿ ಪ್ರೇರಣಾ ಅವರು ಈ ಬಗ್ಗೆ ವೇದಿಕೆಯಲ್ಲೇ ಹೇಳಿಕೆ ನೀಡಿದ್ದಾರೆ. ಕೃಷ್ಣ ಮುಕುಂದ ಮುರಾರಿ ಧಾರಾವಾಹಿ ನಾಯಕಿಯಾಗಿ ಕೃಷ್ಣನ ಪಾತ್ರದಲ್ಲಿ ಖ್ಯಾತಿ ಗಳಿಸಿದ ಪ್ರೇರಣಾ, ರಶ್ಮಿಕಾ ಜೊತೆಗಿನ ಒಡನಾಟದ ಬಗ್ಗೆ ಹೇಳಿಕೊಂಡಿದ್ದಾರೆ.
"ನನ್ನ ಸ್ನೇಹಿತೆಯ ಹೆಸರು ರಶ್ಮಿಕಾ. ನಾವು ಒಟ್ಟಿಗೆ ತುಂಬಾ ಮೋಜು ಮಾಡುತ್ತಿದ್ದೆವು. ಸುತ್ತಾಡುತ್ತಿದ್ದೆವು. ಆಕೆ ತುಂಬಾ ಗ್ರೇಟ್. ಇಷ್ಟು ದೊಡ್ಡ ಹೀರೋಯಿನ್ ಆಗಿದ್ದರೂ ನನ್ನೊಂದಿಗೆ ಈಗಲೂ ಮುದ್ದು ಮುದ್ದಾಗಿ ಮಾತನಾಡುತ್ತಾ ಇರುತ್ತಾಳೆ" ಎಂದು ಹೇಳಿದ್ದಾರೆ.
“ಒಮ್ಮೆ ಮಧ್ಯರಾತ್ರಿ ಎರಡು ಗಂಟೆಗೆ ಲಗೇಜ್ ಹಿಡಿದುಕೊಂಡು ಸ್ಕೂಟಿ ಪೆಪ್‌ನಲ್ಲಿ ಮಾಡೆಲಿಂಗ್‌ಗೆ ಹೋಗಿದ್ದೆವು, ಆಗ ಮಾಡೆಲಿಂಗ್ ಸಮಯ. ಅಲ್ಲಿಗೆ ಹೋಗುವಾಗ ಲಗೇಜ್ ಕೆಳಗೆ ಬಿತ್ತು. ನಾವು ಅದರಲ್ಲಿ ಹೀಲ್ಸ್ ಮತ್ತು ಬಟ್ಟೆಗಳನ್ನು ಹಾಕುತ್ತಿದ್ದೆವು. ಆದರೆ ಈಗ ಅವೆಲ್ಲವನ್ನೂ ನೆನಪಿಸಿಕೊಂಡರೆ ತುಂಬಾ ಖುಷಿಯಾಗುತ್ತದೆ" ಎಂದು ಪ್ರೇರಣಾ ಹೇಳಿದ್ದಾರೆ.