ಬಿಗ್‌ಬಾಸ್‌ಗೆ ಇಬ್ಬರು ಹಾಟ್ ಬ್ಯೂಟೀಸ್ ಎಂಟ್ರಿ..! ಇವಾಗ್ಲೇ ಮೈ ಮೇಲೆ ಬಟ್ಟೆ ನಿಲ್ಲಲ್ಲ, ಇನ್ನು ದೊಡ್ಮನೆ ಒಳಗೆ.?.
ಹೌದು.. ಇದೀಗ ಬಿಗ್ ಬಾಸ್ ತೆಲುಗು 8ನೇ ಸೀಸನ್ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ. ಇದಕ್ಕಾಗಿ ಅನ್ನಪೂರ್ಣ ಸ್ಟುಡಿಯೋದಲ್ಲಿ ಸೆಟ್ ವರ್ಕ್ ಕೂಡ ಭರದಿಂದ ಸಾಗುತ್ತಿದೆ. ಅಲ್ಲದೆ, ತಯಾರಕರು ಇತ್ತೀಚೆಗೆ ಎಂಟನೇ ಸೀಸನ್ ಕುರಿತು ಪ್ರೋಮೋವನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೆ ಟೈಟಲ್ ಲೋಗೋ ಕೂಡ ಹೊಸದಾಗಿ ವಿನ್ಯಾಸ ಮಾಡಲಾಗಿದೆ.
ಕಿರುತೆರೆ ಪ್ರೇಕ್ಷಕರಿಗೆ ಫುಲ್ ಮನರಂಜನೆ ನೀಡಲು ಮತ್ತೊಮ್ಮೆ ಬಿಗ್ ಬಾಸ್ ಕಿರುತೆರೆಗೆ ಬರಲಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಬಿಗ್ ಬಾಸ್ ತೆಲುಗು ಎಂಟನೇ ಸೀಸನ್ ಬಗ್ಗೆಯೇ ಚರ್ಚೆ ನಡೆಯುತ್ತಿದ್ದು, ಈಗಾಗಲೇ 7 ಸೀಸನ್ ಗಳನ್ನು ಯಶಸ್ವಿಯಾಗಿ ಮುಗಿಸಿರುವ ಈ ಶೋ ಇದೀಗ 8ನೇ ಸೀಸನ್ ಮೂಲಕ ಪ್ರೇಕ್ಷಕರನ್ನು ರಂಜಿಸಲು ರೆಡಿಯಾಗಿದೆ.
ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಸ್ಪರ್ಧಿಗಳ ಹೆಸರುಗಳು ಹರಿದಾಡುತ್ತಿವೆ. ಬ್ಯಾರೆಲಕ್ಕ, ಅಬ್ಬಾಸ್, ರಾಜ್ ತರುಣ್, ಕುಮಾರಿ ಆಂಟಿ, ಯಾದಮ್ಮ ರಾಜು, ರಿತು ಚೌಧರಿ, ವಿಷ್ಣುಪ್ರಿಯಾ, ಬುಲೆಟ್ ಭಾಸ್ಕರ್, ಟಾಲಿವುಡ್ ಹಿರಿಯ ನಟಿ ಸನಾ, ರೋಹಿತ್ ಮುಂತಾದವರ ಹೆಸರು ಈ ಬಾರಿ ಪ್ರಮುಖವಾಗಿ ಕೇಳಿ ಬರುತ್ತಿದೆ.
ಇವರಲ್ಲಿ ಇಬ್ಬರ ಹೆಸರನ್ನು ಬಿಗ್ ಬಾಸ್ ಸ್ಪರ್ಧಿಗಳು ಎಂದು ಖಚಿತಪಡಿಸಲಾಗಿದೆ ಎಂದು ವರದಿಯಾಗಿದೆ. ಅವರೇ ಸ್ಟಾರ್ ಆ್ಯಂಕರ್‌ಗಳಾದ ವಿಷ್ಣು ಪ್ರಿಯಾ ಮತ್ತು ರಿತು ಚೌಧರಿ. ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಈ ಸುಂದರಿಯರು ಬಿಗ್ ಬಾಸ್ ಎಂಟ್ರಿ ಬಗ್ಗೆ ಕುತೂಹಲಕಾರಿ ಕಾಮೆಂಟ್ ಮಾಡಿದ್ದಾರೆ
'ಬಿಗ್ ಬಾಸ್ ತೆಲುಗು ಎಂಟನೇ ಸೀಸನ್ ಬರುತ್ತಿದೆ... ಹೋಗುತ್ತೀರಾ?' ಎಂಬ ಪ್ರಶ್ನೆಗೆ ವಿಷ್ಣು ಪ್ರಿಯಾ ಕುತೂಹಲಕಾರಿ ಉತ್ತರ ನೀಡಿದ್ದಾರೆ. ಬಿಗ್ ಬಾಸ್‌ಗೆ ಯಾಕೆ ಹೋಗಬೇಕು ಎಂದು ಕೇಳಿದಾಗ, 10 ಕೆಜಿ ತೂಕವನ್ನು ಕಳೆದುಕೊಳ್ಳಬಹುದು ಎಂದು ಪ್ರತಿಕ್ರಿಯಿಸಿದ್ದಾರೆ. ಈ ಎಲ್ಲಾ ಕಾಮೆಂಟ್‌ಗಳನ್ನು ನೋಡಿದ ನಂತರ ಅವರು ಬಿಗ್ ಬಾಸ್ ಮನೆಗೆ ಪ್ರವೇಶಿಸಲು ಸಿದ್ಧ ಎಂದು ಹೇಳಿದ್ದಾರೆ.
ಮತ್ತೋರ್ವ ಜಬರ್ದಸ್ತ್ ನಟಿ ರಿತು ಚೌಧರಿ ಕೂಡ ವಿಷ್ಣು ಪ್ರಿಯಾ ಅವರ ಕಾಮೆಂಟ್ ಕಾಪಿ ಪೇಸ್ಟ್ ಮಾಡಿದ್ದಾರೆ. ಹಾಗಾಗಿ ನನಗೂ ಬಿಗ್ ಬಾಸ್ ಮನೆ ಪ್ರವೇಶಿಸಲು ಆಸಕ್ತಿ ಇದೆ ಎಂದು ಹೇಳಿದ್ದಾರೆ. ವಿಷ್ಣು ಪ್ರಿಯಾ-ರೀತು ಚೌಧರಿ ಈಗಾಗಲೇ ಹಲವು ಟಿವಿ ಶೋಗಳಲ್ಲಿ ಬಜ್ ಕ್ರಿಯೇಟ್ ಮಾಡುತ್ತಿದ್ದಾರೆ. ಅಲ್ಲದೇ ಈ ಆತ್ಮೀಯ ಗೆಳೆಯರು ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರೆ ಗಲಾಟೆ ಮಾಮೂಲಿ ಆಗೋದಿಲ್ಲ ಅಂತಾರೆ ಬಿಗ್ ಬಾಸ್ ಅಭಿಮಾನಿಗಳು.