ಬಿಗ್ ಬಾಸ್ ಮನೆಗೆ ಬೋಲ್ಡ್ ಬ್ಯೂಟಿ ವೈಲ್ಡ್ ಕಾರ್ಡ್ ಎಂಟ್ರಿ... ಆಟಕ್ಕೆ ತಿರುವು ನೀಡಲಿರುವ ಈ ಗ್ಲಾಮರಸ್ ಗರ್ಲ್ ಯಾರು ಗೊತ್ತಾ?
ಪ್ರಸಿದ್ಧ ರಿಯಾಲಿಟಿ ಶೋ ಬಿಗ್ ಬಾಸ್ ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರನ್ನು ಸಾಕಷ್ಟು ರಂಜಿಸುತ್ತಿದೆ. ಇತ್ತೀಚೆಗಷ್ಟೇ ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಇದರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಮನೆ ಪ್ರವೇಶಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ವೈಲ್ಡ್ ಕಾರ್ಡ್ ಸ್ಪರ್ಧಿಯ ಹೆಸರಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಈ ಮಹಿಳಾ ಸ್ಪರ್ಧಿ ಬಿಗ್ ಬಾಸ್ ಮನೆಗೆ ಪ್ರವೇಶಿಸಬಹುದು ಎನ್ನಲಾಗಿದೆ. ಇವರ ಹೆಸರು ಅದಿತಿ ಮಿಸ್ತ್ರಿ.
ಅದಿತಿ ಮಿಸ್ತ್ರಿ ಬಿಗ್ ಬಾಸ್ ಮನೆಗೆ ಬರುತ್ತಿರುವ ಮೂರನೇ ವೈಲ್ಡ್ ಕಾರ್ಡ್ ಸ್ಪರ್ಧಿ. ವೃತ್ತಿಯಲ್ಲಿ ಮಾಡೆಲ್ ಮತ್ತು ಸೋಶಿಯಲ್ ಮೀಡಿಯಾ ಪ್ರಭಾವಿ ಆಗಿದ್ದಾರೆ.
ಈ ಗ್ಲಾಮರಸ್ ಗರ್ಲ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫ್ಯಾನ್ ಫಾಲೋವರ್ಸ್ ಕೂಡ ಹೊಂದಿದ್ದಾರೆ. Instagram ನಲ್ಲಿ 2.4 ಮಿಲಿಯನ್ ಜನ ಫಾಲೋವರ್ಸ್‌ಇದ್ದಾರೆ.
ಇದಲ್ಲದೆ, ಅವರು ತಮ್ಮ ಫಿಟ್ನೆಸ್ ನಿಂದಲೂ ಜನರ ಮನಗೆದ್ದವರು. ಆಕೆಯ ಇನ್ಸ್ಟಾಗ್ರಾಮ್ ಪ್ರೊಫೈಲ್ ಪ್ರಕಾರ, ಅದಿತಿ ಒಂದು ಅಪ್ಲಿಕೇಶನ್ ಅನ್ನು ಹೊಂದಿದ್ದಾರೆ. ಅದರ ಮೂಲಕ ಅಭಿಮಾನಿಗಳ ಜೊತೆಗೆ ಮಾತನಾಡಬಹುದು.
ವರದಿಗಳ ಪ್ರಕಾರ ಅದಿತಿ ಮಿಸ್ತ್ರಿ ಬಾಲಿವುಡ್ ನಟ ಸಾಹಿಲ್ ಖಾನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇಬ್ಬರ ವೆಕೆಷನ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾಗುತ್ತಿವೆ.
ಅದಿತಿ ಮತ್ತು ಸಾಹಿಲ್ ಬಹಳ ಸಮಯದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೂ ಇದನ್ನು ಅದಿತಿ ಎಂದಿಗೂ ಬಹಿರಂಗಪಡಿಸಲಿಲ್ಲ.
ಅದಿತಿ ಮಿಸ್ತ್ರಿ ಸ್ವಂತ ಉದ್ಯಮ ನಡೆಸುತ್ತಿದ್ದಾರೆ. 24 ವರ್ಷದ ಅದಿತಿ ಯಾವಾಗಲೂ ಹೊಸ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಆನ್‌ಲೈನ್ ಆರ್ಟ್ ಕೋರ್ಸ್ ಅನ್ನು ಸಹ ಪ್ರಾರಂಭಿಸಿದ್ದಾರೆ.