BBK 10: ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್-ನಮ್ರತಾ ವಿವಾಹ!? ಮುದ್ದಾದ ಜೋಡಿಯ ಫೋಟೋಸ್ ಇಲ್ಲಿವೆ
ಕಾರ್ತಿಕ್ ಮತ್ತು ನಮ್ರತಾ ಮದುವೆ ಆದ್ರಾ… ಅಂತ ಶಾಕ್ ಆಯ್ತಾ?? ಈ ಜೋಡಿ ತುಂಬಾ ಕ್ಯೂಟ್ ಆಗಿದೆ ಅಂತೆಲ್ಲಾ ಹೇಳ್ತಿದ್ದೋರಿಗೆ ಈ ಫೋಟೋಸ್ ನೋಡಿದ್ರೆ ಖುಷಿಯಾಗೋದು ಖಂಡಿತ. ಅಂದಹಾಗೆ ಈ ಫೋಟೋಗಳ ಹಿಂದಿನ ಅಸಲಿಯತ್ತೇನು ಎಂಬುದನ್ನು ಈ ವರದಿಯಲ್ಲಿ ತಿಳಿಸಿಕೊಡಲಿದ್ದೇವೆ.
ಕಾರ್ತಿಕ್ ವರನ ಉಡುಗೆಯಲ್ಲಿ ಫೋಸ್ ಕೊಡ್ತಿದ್ರೆ, ನಮ್ರತಾ ಮುದ್ದಾದ ವಧುವಿನಂತೆ ಕಣ್ಮನ ಸೆಳೆಯುತ್ತಿದ್ದಾರೆ. ಆದರೆ ಇವರಿಬ್ಬರು ನಿಜ ಜೀವನದಲ್ಲಿ ಮದುವೆಯಾಗಿಲ್ಲ. ಇದೊಂದು ಜಾಹೀರಾತಿನ ಶೂಟಿಂಗ್ ಅಷ್ಟೇ.
ಈ ಜಾಹೀರಾತಿನಲ್ಲಿ ಮದುಮಗಳಾಗಿ ನಮ್ರತಾ ಗೌಡ ಮಿಂಚಿದರೆ, ವರನಾಗಿ ಕಾರ್ತಿಕ್ ಕಾಣಿಸಿಕೊಂಡಿದ್ದಾರೆ. ಸದ್ಯ ಇವರಿಬ್ಬರ ಮುದ್ದಾದ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಅಂದಹಾಗೆ ಈ ಜಾಹೀರಾತಿನಲ್ಲಿ ಕನ್ನಡದ ಪ್ರಖ್ಯಾತ ನಟಿ ಪ್ರೇಮಾ ಕೂಡ ಇದ್ದು, ಅವರ ಜೊತೆ ಕಾರ್ತಿಕ್ ಮತ್ತು ನಮ್ರತಾ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಬಿಗ್ ಬಾಸ್’ನಿಂದಲೇ ಕಾರ್ತಿಕ್ ಮತ್ತು ನಮ್ರತಾ ನಡುವೆ ಉತ್ತಮ ಸ್ನೇಹ ಇತ್ತು. ಒಂದೊಮ್ಮೆ, ನನಗೆ ಕಾರ್ತಿಕ್’ನಿಂದ ಯಾವತ್ತೂ ಅನ್’ಕಂಫರ್ಟೇಬಲ್ ಫೀಲ್ ಆಗಿಲ್ಲ ಎಂದು ಸ್ವತಃ ನಮ್ರತಾನೇ ಹೇಳಿಕೊಂಡಿದ್ದರು.