ಬಿಗ್‌ಬಾಸ್ ಮನೆಯಿಂದ ಮೊದಲು ಔಟ್ ಆದ ಯಮುನಾ ಶ್ರೀನಿಧಿ ಅವರ ಪತಿ ಹಾಗೂ ಮಕ್ಕಳು ಯಾರು ಗೊತ್ತಾ?ಇವರು ಕೂಡ ಫೇಮಸ್
Yamuna Srinidhi: ಬಿಗ್‌ಬಾಸ್ 11 ಸ್ಪರ್ಧಿ ಯಮುನಾ ಶ್ರೀನಿಧಿ ಕುರಿತು ಹಲವರಿಗೆ ಗೊತ್ತಿಲ್ಲ, ಈಕೆ ಒಬ್ಬ ಭರತನಾಟ್ಯ ನೃತ್ಯಗಾರ್ತಿಯಾಗಿದ್ದು, ನಟಿಯೂ ಕೂಡ ಹೌದು.
ನಟಿ ಹಾಗೂ ನೃತ್ಯಗಾರ್ತಿ ಯಮುನಾ ಶ್ರೀನಿಧಿ ಅವರು ಆರನೇ ವಯಸ್ಸಿನವರಿದ್ದಾಗ ಅವರಿಗೆ ಭರತನಾಟ್ಯದ ಮೇಲೆ ಒಲವು ಶುರುವಾಯಿತು. ಅಂದಿನಿಂದ ಅವರು ಭರತನಾಟ್ಯ ನೃತ್ಯವನ್ನು ಆಡುವುದಕ್ಕೆ ಆರಂಭಿಸಿದರು.
1997ರಲ್ಲಿ ಅಮೇರಿಕಾಕ್ಕೆ ಹೋಗಿದ್ದ ಯಮುನಾ ಶ್ರೀನಿಧಿ ಅವರು 2012ರಲ್ಲಿ ಅಲ್ಲಿಂದ ವಾಪಸ್ ಆದರು.
ಅಮೆರಿಕಾದಲ್ಲಿರುವಾಗಲೇ ನಟಿಗೆ ಅವರ ಪತಿ ಪರಿಚಯವಾಗಿದ್ದರು, ಅವರ ಪತಿ ಹಾಗೂ ಯಮುನಾ ಅವರ ಪರಿಚಯ ಅಮೇರಿಕಾದಲ್ಲಿಯೇ ಆಗಿತ್ತು, ನಂತರ ಈ ಜೋಡಿ ಮೈಸೂರಿಗೆ ವಾಪಸ್ ಆಗಿ ಮದುವೆಯಗಿದ್ದರು.
ಭಾರತದಿಂದ ಅಮೆರಿಕಾಕ್ಕೆ ಹೋಗಿದ್ದ ಯಮುನಾ ಅವರಿಗೆ ಅಮೇರಿಕಾಕ್ಕೆ ಹೋದಾಗ 23 ವಯಸ್ಸು. ವಿದೇಶಕ್ಕೆ ಹೋಗಿದ್ದ ಈಕೆ ಅಲ್ಲಿ ಕನ್ನಡ ಸಂಘದ ಅಧ್ಯಕ್ಷರಾಗಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಅಮೆರಿಕಾಕ್ಕೆ ಹೋಗಿದ್ದ ಯಮುನಾ ಅವರು ಅಲ್ಲಿ ನೃತ್ಯ ಶಾಲೆ ನಡೆಸುತ್ತಿದ್ದರು, ಅಲ್ಲಿ ಅವರ ಬಳಿ ನೃತ್ಯ ಕಲಿಯಲು ಬರುತ್ತಿದ್ದವರು ಇಲ್ಲಿಯೇ ಇರಿ ನಮಗೆ ನೃತ್ಯ ಕಲಿಸಿ ಎಂದು ಬಲವಂತ ಮಾಡಿದ ಕಾರಣಕ್ಕೆ ಭಾರತಕ್ಕೆ ಬರಲು ತಡವಾಯಿತು ಎಂದು ಯಮುನಾ ಈ ಹಿಂದೆ ಹೇಳಿಕೊಂಡಿದ್ದಾರೆ.
ಎನ್‌ಸಿಸಿ ಅಭ್ಯರ್ಥಿಗಳಿಗೆ ಯಮುನಾ ಅವರು ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ತಮ್ಮ ಕೈಯಲ್ಲಾದ ಸಹಾಯ ಮಾಡುತ್ತಿದ್ದಾರೆ.
ಈವರೆಗೂ ಯಮುನಾ ಅವರು 6000ಕ್ಕೂ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳಿಗೆ ಹಾಗೂ 10000 ಎನ್‌ಸಿಸಿ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ.