ರೆಡಿಯಾಯಿತು ಬಿಗ್ ಬಾಸ್ 11ರ ಪ್ರೋಮೋ ! ಈ ಬಾರಿ ಕಾರ್ಯಕ್ರಮ ನಡೆಸಿಕೊಡುವವರು ಇವರೇ! ಈ ದಿನದಿಂದ ಆಟ ಶುರು

Wed, 14 Aug 2024-10:34 am,

ಪ್ರತಿಯೊಬ್ಬರೂ ಕಾತರದಿಂದ ಕಾಯುತ್ತಿರುವ ರಿಯಾಲಿಟಿ ಷೋ ಬಿಗ್ ಬಾಸ್. ಒಂದು ಸೀಸನ್ ಮುಗಿಯುತ್ತಿದ್ದಂತೆ ಮುಂದಿನ ಸೀಸನ್ ಯಾವಾಗ ಎನ್ನುವ ನೀರೀಕ್ಷೆಯಲ್ಲಿ ಇರುತ್ತಾರೆ ಪ್ರೇಕ್ಷಕರು. 

ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಸೀಸನ್ 11 ಆರಂಭವಾಗಲಿದೆ. ಇದಕ್ಕೆ ಅಗತ್ಯವಿರುವ ಎಲ್ಲಾ ತಯಾರಿಯನ್ನು ಸಂಬಂಧ ಪಟ್ಟ ಚಾನೆಲ್ ಈಗಾಗಲೇ ನಡೆಸಿದೆ. 

ವರದಿಗಳ ಪ್ರಕಾರ ಸೆಪ್ಟೆಂಬರ್ 29ರಿಂದ ಬಿಗ್ ಬಾಸ್ ಆರಂಭವಾಗಲಿದೆ. ಈಗಾಗಲೇ ಈ ಬಾರಿ ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆ ಕೂಡಾ ಆರಂಭವಾಗಿದೆ.  

ಇನ್ನು ಈ ಬಾರಿ ಎಲ್ಲರ ಕುತೂಹಲ ಇರುವುದು ಕಾರ್ಯಕ್ರಮ ಯಾರು ನಡೆಸಿಕೊಡುತ್ತಾರೆ ಎನ್ನುವ ಬಗ್ಗೆ. ಈ ಬಾರಿ ಕಿಚ್ಚ  ಸುದೀಪ ಬಿಗ್ ಬಾಸ್ ನಿಂದ ದೂರ ಉಳಿಯುತ್ತಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು.   

ಕಿಚ್ಚನ ಬದಲಿಗೆ ರಿಷಬ್ ಶೆಟ್ಟಿ ಅಥ್ವಾ ರಮೇಶ್ ಅರವಿಂದ್ ಕಾರ್ಯಕ್ರಮ ನಡೆಸಿಕೊಡುತ್ತಾರೆ ಎನ್ನುವ ಗುಸು ಗುಸು ಕೂಡಾ ಹರಡಿತ್ತು.   

ಆದರೆ ಇದೀಗ 11 ನೆ ಸೀಸನ್ ಪ್ರೊಮೊ ಶೂಟ್  ಹೈದರಾಬಾದ್ ನಲ್ಲಿ ಮುಕ್ತಾಯವಾಗಿದ್ದು, ಇದಕ್ಕಾಗಿ ಸುದೀಪ್ ಮುತ್ತಿನ ನಗರಿ ತಲುಪಿದ್ದರು.   

ಹಾಗಾಗಿ ಈ ಬಾರಿ ಕೂಡಾ ಕಿಚ್ಚನೇ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಿಚ್ಚನ ಪಂಚಾಯತಿಯಲ್ಲಿಯೀ ಸ್ಪರ್ಧಿಗಳು ಕಟಕಟೆಯಲ್ಲಿ ನಿಲ್ಲಲ್ಲಿದ್ದಾರೆ ಎನ್ನಲಾಗಿದೆ.

ಇನ್ನು ಕಿಚ್ಚ ಸುದೀಪ ಅಲ್ಲದೆ ಬೇರೆ ಯಾರೇ ಕಾರ್ಯಕ್ರಮ ನಿರೂಪಿಸಿದರೂ ಪ್ರೇಕ್ಷಕರು ಅದನ್ನು ಒಪ್ಪಿಕೊಳ್ಳುವುದು ಕೂಡಾ ಕಷ್ಟ ಎಂದೇ ಹೇಳಲಾಗುತ್ತಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link