ಕೋಳಿ ರಮ್ಯಾ ಅಲ್ಲ, ಬಿಗ್ ಬಾಸ್ ಶಿಶಿರ್ ಜೀವನದ ಮೊದಲ ಹಿರೋಯಿನ್ ಇವರೇ!ಮದುವೆಯ ಫೋಟೋ ಇಲ್ಲಿದೆ
ಬಿಗ್ ಬಾಸ್ ಸೀಸನ್ 11 ರ ಫಿನಾಲೆ ತಲುಪುವ ಸಾಧ್ಯತೆ ಇರುವ ಸ್ಪರ್ಧಿಗಳ ಸಾಲಿನಲ್ಲಿ ಕೇಳಿ ಬರುವ ಹೆಸರು ಶಿಶಿರ್ ಶಾಸ್ತ್ರಿ. ಸದ್ಯದ ಮಟ್ಟಿಗೆ ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.
ಆದರೆ ಐಶ್ವರ್ಯಾ ಜೊತೆ ಸ್ವಲ್ಪ ಹೆಚ್ಚು ಸಲುಗೆ ಇದ್ದಂತೆ ತೋರುತ್ತದೆ. ಇಬ್ಬರ ನಡುವೆ ಒಳ್ಳೆಯ ಸ್ನೇಹವಿದೆ. ಇಬ್ಬರೂ ಬಿಗ್ ಬಾಸ್ ಮನೆಯ ಪ್ರೇಮಿಗಳು ಎಂಬಂತೆಯೇ ತಮಾಷೆ ಮಾಡುತ್ತಾ ಇರುತ್ತಾರೆ.
ಶಿಶಿರ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗಿನಿಂದ ಅವರ ಮದುವೆ ಸುದ್ದಿ ಭಾರೀ ಸದ್ದು ಮಾಡಿತ್ತು. ಕೋಳಿ ರಮ್ಯಾ ಜೊತೆಗೆ ಮದುವೆಯಾಗಿದ್ದ ಶಿಶಿರ್ ಈಗ ವಿಚ್ಚೇದಿತ ಎನ್ನಲಾಗಿದೆ.
ಶಿಶಿರ್, ಪರಿಪೂರ್ಣ ನಟನಾಗಿ ಎಂಟ್ರಿಯಾಗಿದ್ದು, 'ಸೊಸೆ ತಂದ ಸೌಭಾಗ್ಯ'ಧಾರಾವಾಹಿ ಮೂಲಕ. ಆ ಧಾರಾವಾಹಿ ಮೂಲಕ ಸಿಕ್ಕಾಪಟ್ಟೆ ಅಭಿಮಾನಿಗಳನ್ನೂ ಹೊಂದುವಲ್ಲಿ ಯಶಸ್ವಿಯಾದರು.
ಅಂದು ಶಿಶಿರ್ ನಾಯಕಿಯಾಗಿ ಮಿಂಚಿದ್ದು ಇಂದು ಭಾಗ್ಯ ಲಕ್ಷ್ಮಿ ಧಾರವಾಹಿಯಲ್ಲಿ ಭಾಗ್ಯ ಆಗಿ ಮನೆ ಮಾತಾಗಿರುವ ಸುಷ್ಮಾ. ಇವರಿಬ್ಬರ ಜೋಡಿ ಭಾರೀ ಜನಪ್ರಿಯವಾಗಿತ್ತು.
ಶಿಶಿರ್ ಬಿಗ್ ಬಾಸ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಹಾಗೆ ಅವರ ಧಾರಾವಾಹಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಧಾರಾವಾಹಿಯಲ್ಲಿ ಶಿಶಿರ್ ಮದುವೆಯ ವಿಡಿಯೋ ವೈರಲ್ ಆಗುತ್ತಿದೆ.