Bigg Boss 11: ನನ್ನದೆ ರೂಲ್ಸ್‌ ಎಂದ ಸ್ಪರ್ಧಿಗೆ ತಕ್ಕ ಪಾಠ ಕಲಿಸಿದ ಬಿಗ್‌ಬಾಸ್‌? ಹೊರಗೆ ಹೋಗ್ತೀನಿ ಅಂತಿದ್ದ ಲಾಯರ್‌ ಜಗದೀಶ್‌ಗೆ ಸ್ಥಿತಿ ಏನಾಯ್ತು ?

Sat, 05 Oct 2024-1:50 pm,

Lawyer jagadish: ಬಿಗ್‌ ಬಾಸ್‌ ಶುರುವಾಗಿ ಇನ್ನೂ ಒಂದು ವಾರ ಸಹ ಪೂರ್ಣ ಗೊಂಡಿಲ್ಲ ಅಷ್ಟರಲ್ಲೆ ಮನೆಯಲ್ಲಿ, ಮನಸ್ಥಾಪ, ಕೋಪ, ಕೋಲಾಹಲ, ಜಗಳ, ಗದ್ದಲ ಎಲ್ಲವೂ ಶುರುವಾಗಿದೆ, ಅದರಲ್ಲಂತೂ ಲಾಯರ್‌ ಜಗದೀಶ್‌ ಅವರು ನಾನು ಮನೆಯಿಂದ ಹೊರ ಹೋಗಬೇಕು ಅಂತ ಪಟ್ಟುಹಿಡಿದಿದ್ದಾರೆ, ಬಿಗ್‌ಬಾಸ್‌ ಕೂಡ ಇದಕ್ಕೆ ತಕ್ಕ ಪಾಠ ಕಲಿಸಿದ್ದಾರೆ.   

ಬಿಗ್‌ಬಾಸ್‌ ಮನೆಯಲ್ಲಿ ಮೊದಲನೇ ವಾರ 10 ಜನ ನಾಮಿನೇಟ್‌ ಆಗಿದ್ದಾರೆ, ಈ ವಾರ ಮನೆಯಿಂದ ಯಾರು ಹೊರಹೋಗಲಿದ್ದಾರೆ ಎನ್ನುವ ಸುದ್ದಿ ಮಧ್ಯೆ ಲಾಯರ್‌ ಜಗದೀಶ್‌ ನಾನು ಮನೆಯಿಂದ ಹೊರಹೋಗಬೇಕು ಎನ್ನುತ್ತಿದ್ದಾರೆ.   

ಮೊದಲನೇ ವಾರ ಮನೆಯಲ್ಲಿ ಕ್ಯಾಪ್ಟನ್ಸಿ ಆಯ್ಕೆ ನಡೆದು ಮುಗಿದಿದೆ, ಈ ಪ್ರಕ್ರಿಯೆಯಲ್ಲಿ ಟಾಸ್ಕ್ಸ್‌ ಗೆದ್ದು ಅನುಷಾ ಅವರು ಕ್ಯಾಪ್ಟನ್‌ ಆಗಿದ್ದಾರೆ.  

ಹೀಗೆ ಅನುಷಾ ಕ್ಯಾಪ್ಟನ್‌ ಆಗುತ್ತಿದ್ದಂತೆ ಲಾಯರ್‌ ಜಗದೀಶ್‌ ನನಗೆ ಕ್ಯಾಪ್ಟನ್ಸಿ ಸಿಕ್ಕಿಲ್ಲ ನಾನು ಮನೆಗೆ ಹೋಗಬೇಕು ಅಂತಾ ಪಟ್ಟು ಹಿಡಿದಿದ್ದಾರೆ.  

ಹೀಗೆ ಪಟ್ಟು ಹಿಡಿದು ಕೂತಿದ್ದ ಲಾಯರ್‌ ಜಗದೀಶ್‌ ಅವರನ್ನು ಬಿಗ್‌ಬಾಸ್‌ ಕನ್‌ಫೆಶನ್‌ ರೂಮ್‌ಗೆ ಕರೆದಿದ್ದು, ಮನೆಗೆ ಹೋಗುವ ನಿರ್ಧಾರ ಯಾಕೆ ಎಂದು ಕೇಳಿದ್ದಾರೆ.   

ನಂತರ ಜಗದೀಶ್‌ ಅವರಿಗೆ ಬಿಗಗಬಾಸ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ, ಮನೆಯಲ್ಲಿ ಹಿರಿಯರಾಗಿರುವ ನೀವೆ ಹೀಗೆ ನಡೆದುಕೊಂಡರೆ ಇತರ ಸ್ಪರ್ಧಿಗಳಿಗೆ ಏನು ಹೇಳಬೇಕು ಎಂದಿದ್ದಾರೆ, ಹಾಗೂ ಬಿಗ್‌ಬಾಸ್‌ ಲಾಯರ್‌ ಜಗದೀಶ್‌ ಅವರಿಗೆ ಮನೆಯ ರೂಲ್ಸ್‌ ಕುರಿತು ತಿಳಿ ಹೇಳುತ್ತಾರೆ.  

ಇದರ ನಂತರ ಕನ್‌ಫೆಶನ್‌ ರೂಂನಿಂದ ಹೊರಬರುವ ಲಾಯರ್‌ ಜಗದೀಶ್‌ ನಾನು ಮನೆಗೆ ಹೋಗುವುದಿಲ್ಲ ಎನ್ನುತ್ತಾರೆ.  

ಮನೆಯಲ್ಲಿ ಲಾಯರ್‌ ಜಗದೀಶ್‌ ಅವರು ಅಸಭ್ಯ ಮಾತುಗಳನ್ನು ಸಹ ಆಡುತ್ತಿದ್ದು, ಮನೆಯಲ್ಲಿನ ಹಲವರಿಗೆ ಈ ವಿಷಯ ಬೇಸರ ಮೂಡಿಸಿದೆ. ಮನೆಯಲ್ಲಿನ ಹೆಣ್ಣು ಮಕ್ಕಳು ಈ ಕುರಿತು ಬಿಗ್‌ಬಾಸ್‌ ಅವರ ಬಳಿ ಹೇಳಿಕೊಂಡಿದ್ದು, ಬಿಗ್‌ಬಾಸ್‌ ಈ ಕುರಿತು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.  

ಇನ್ನೂ, ಶನಿವಾರ ಅಂದರೆ ಇವತ್ತು ವೀಕೆಂಡ್‌ ವಿತ್‌ ಸುದೀಪ ನಡೆಯಲಿದ್ದು, ಒಂದು ವಾರದಿಂದ ಲಾಯರ್‌ ಜಗದೀಶ್‌ ಅವರ ನಡುವಳಿಕೆಯನ್ನು ನೋಡಿರುವ ಕಿಚ್ಚ ಸುದೀಪ್‌ ಅವರು, ಸಿಂಹಾಗೆ ಕ್ಲಾಸ್‌ ತೆಗೆದುಕೊಳ್ಳುವುದು ಮಾತ್ರ ಖಚಿತ ಎಂದು ಪ್ರೇಕ್ಷಕರು ಅಂದಾಜಿಸಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link