ಬಿಗ್ ಬಾಸ್ ಮನೆಯಲ್ಲಿ ಹಾವು ಮುಂಗುಸಿಯಂತೆ ಕಚ್ಚಾಡಿಕೊಂಡಿದ್ದ ಧನರಾಜ್ ಮತ್ತು ಮೋಕ್ಷಿತಾಗೂ ನಡೆದಿತ್ತು ಮದುವೆ ಮಾತುಕತೆ !ಇಲ್ಲಿದೆ ಫೋಟೋಸ್
ಬಿಗ್ ಬಾಸ್ ಮುಕ್ತಾಯದ ಹಂತ ತಲುಪಿದೆ. ಇನ್ನೆರಡು ವಾರಗಳಲ್ಲಿ ಕಾರ್ಯಕ್ರಮದ ಫಿನಾಲೆ ನಡೆಯಲಿದೆ.
ಈ ಕಾರ್ಯಕ್ರಮ ಆರಂಭವಾದಾಗ ಧನರಾಜ್ ಮತ್ತು ಮೋಕ್ಷಿತಾ ಒಬ್ಬರನ್ನೊಬ್ಬರು ಕಂಡರೆ ಆಗುವುದಿಲ್ಲ ಎನ್ನುವಂತೆ ಇದ್ದರು. ನಾಮಿನೆಶನ್ ಇರಲಿ, ಕಳಪೆ ಇರಲಿ ಪರಸ್ಪರರ ಹೆಸರನ್ನೇ ತೆಗೆದುಕೊಳ್ಳುತ್ತಿದ್ದರು.
ಆದರೆ ಇದೀಗ ಇವರಿಬ್ಬರ ಬಗ್ಗೆ ಹೊಸ ಸುದ್ದಿಯೊಂದು ಹೊರ ಬಂದಿದೆ. ಅದುವೇ ಇವರಿಬ್ಬರ ಮದುವೆ ಮಾತುಕತೆಗೆ ಸಂಬಂಧಿಸಿದ್ದು.
ಮದುವೆ ಮಾತುಕತೆ ಎಂದರೆ ನಿಜವಾದ ಮದುವೆ ಅಲ್ಲ. ವೆಬ್ ಸೀರೀಸ್ ನಲ್ಲಿ ನಡೆದ ಮದುವೆ ಮಾತುಕತೆ. ಮಧುಮಗ ಎನ್ನುವ ವೆಬ್ ಸಿರೀಸ್ ನಲ್ಲಿ ಇವರಿಬ್ಬರೂ ಒಟ್ಟಿಗೆ ನಟಿಸಿದ್ದಾರೆ.
ಇದರ ಮೊದಲ ಎಪಿಸೋಡ್ ಯುಟ್ಯೂಬ್ ನಲ್ಲಿ ಅಪ್ಲೋಡ್ ಆಗಿದೆ. ಈ ಎಪಿಸೋಡ್ ನಲ್ಲಿ ಧನರಾಜ್ ಗೀತಾ (ಮೋಕ್ಷಿತಾ ) ಮನೆಗೆ ಮದುವೆ ಮಾತುಕತೆಗೆ ಬರುವ ಕತೆಯನ್ನು ಕಾಣಬಹುದು.
ಇದೀಗ ಈ ಎಪಿಸೋಡ್ ಯುಟ್ಯೂಬ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.
ಇದರ ಜೊತೆಗೆ ಇಬ್ಬರೂ ಜೊತೆಯಾಗಿ ನಟಿಸಿದ ಮೇಲೂ ಬಿಗ್ ಬಾಸ್ ಷೋ ನಲ್ಲಿ ಯಾಕೆ ಪರಿಚಯವೇ ಇಲ್ಲದಂತೆ ಇದ್ದರು ಎನ್ನುವುದು ಈಗ ವೀಕ್ಷಕರು ಎತ್ತುತ್ತಿರುವ ಪ್ರಶ್ನೆ.