Bigg Boss 11: ಬಿಗ್‌ಬಾಸ್‌ ಮನೆಯಿಂದ ಹೊರಬರುತ್ತಿದ್ದಂತೆ ಕಿಚ್ಚನ ಭೇಟಿ ಮಾಡಲು ಬಂದ ದರ್ಶನ್‌ ಅಭಿಮಾನಿ!! ಫೋಟೋ ವೈರಲ್‌

Sun, 27 Oct 2024-1:26 pm,

Biggboss 11 Elimination: ಬಿಗ್‌ಬಾಸ್‌ 11 ಶುರುವಾಗಿ ಈಗಾಗಾಲೇ ನಾಲ್ಕು ವಾರ ಕಳೆದಿದೆ, ನಾಲ್ಕು ವಾರದಲ್ಲಿ ಮೂರು ಸ್ಪರ್ಧಿಗಳು ಎಲಿಮಿನೇಟ್‌ ಆಗಿದ್ದು, ಸದ್ಯ ಈ ವಾರ ಯಾರು ಎಲಿಮಿನೇಟ್‌ ಆಗಲಿದ್ದಾರೆ ಎನ್ನುವ ಕುತೂಹಲದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.  

ಬಿಗ್‌ ಬಾಸ್‌ನ ಮೆನಯಿಂದ ಮೊದಲನೆ ವಾರ ಯಮುನಾ ಶ್ರೀಧರ್‌ ಔಟ್‌ ಆಗಿದ್ದರು.  

ಇನ್ನೂ, ಎರಡನೇ ವಾರ ಬಿಗ್‌ಬಾಸ್‌ ಮನೆಯಲ್ಲಿ ಯಾವುದೇ ಎಲಿಮಿನೇಷನ್‌ ಇಲ್ಲದ ಕಾರಣ ಸ್ಪರ್ಧಿಗಳು ನಿಟ್ಟುಸಿರು ಬಿಟ್ಟಿದ್ದರು.   

ಆದರೆ, ಮೂರನೇ ವಾರ ಅನಿರೀಕ್ಷಿತ ತಿರುವುಗಳ ಕಾರಣದಿಂದ ರಂಜಿತ್‌ ಹಾಗೂ ಲಾಯರ್‌ ಜಗದೀಶ್‌ ಇಬ್ಬರು ಒಡೆದಾಡಿಕೊಂಡು ಮನೆಯಿಂದ ಹೊರಬಿದ್ದಿದ್ದರು.  

ಇದೀಗ ನಾಲ್ಕನೇ ವಾರ ಬಿಗ್‌ಬಾಸ್‌ ಎಲಿಮಿನೇಷನ್‌ ಅಂತವನ್ನು ತಲುಪಿದೆ. ಈ ವಾರ ಯಾರು ಎಲಿಮಿನೇಟ್‌ ಆಗಲಿದ್ದಾರೆ ಎನ್ನುವ ಕುತೂಹಲದಿಂದ ಎಲ್ಲರು ಇಂದಿನ ಸಂಚಿಕೆಗಾಗಿ ಎದುರು ನೋಡುತ್ತಿದ್ದಾರೆ.  

ಈ ವಾರ ಯಾರು ಎಲಿಮಿನೇಟ್‌ ಆಗಲಿದ್ದಾರೆ ಎನ್ನುವ ಚರ್ಚೆಯ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್‌ ಆಗುತ್ತಿದೆ.   

ಈ ಫೋಟೋದಲ್ಲಿ ಧರ್ಮ ಕೀರ್ತಿರಾಜ್‌ ಹಾಗೂ ಕಿಚ್ಚಸುದೀಪ್‌ ಜೊತೆಯಲ್ಲಿ ಕಾಣಿಸಿಕೊಂಡಿದ್ದು, ಧರ್ಮ ಕೀರ್ತಿರಾಜ್‌ ಮನೆಯಿಂದ ಹೊರಬಂದು ಕಿಚ್ಚ ಅವರನ್ನು ಮೀಟ್‌ ಮಾಡೋಕೆ ಹೋಗಿದ್ದಾರೆ ಎನ್ನು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.  

ಆದರೆ, ವೈರಲ್‌ ಆಗುತ್ತಿರುವ ಈ ಫೋಟೋ ಇತ್ತೀಚಿನದ್ದಲ್ಲ ಹೊರತಾಗಿ ಹಳೆಯ ಫೋಟೋ. ಈ ಫೋಟೋದಲ್ಲಿ ಧರ್ಮ ಕೀರ್ತಿರಾಜ್‌ ಕಿಚ್ಚನ ಜೊತೆ ಕಾಣಿಸಿಕೊಂಡಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link