ಈ ದಿನದಿಂದ ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭ : ಮೂರೂ ಧಾರಾವಾಹಿಗಳಿಗೆ ಬೀಳಲಿದೆ ತೆರೆ!ಎಲ್ಲವೂ ಜನಮನ್ನಣೆ ಗಳಿಸಿದ ಸೀರಿಯಲ್ ಗಳೇ
ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಷೋ ಬಿಗ್ ಬಾಸ್. ಬಿಗ್ ಬಾಸ್ ಸೀಸನ್ ಮುಗಿಯುತ್ತಿದ್ದಂತೆ ವೀಕ್ಷಕರು ಮುಂದಿನ ಸೀಸನ್ ಗಾಗಿ ಕಾಯುತ್ತಿರುತ್ತಾರೆ. ಇದೀಗ ಸೀಸನ್ 11ಕ್ಕೆ ಕ್ಷಣ ಗಣನೆ ಆರಂಭವಾಗಿದೆ.
ಬಿಗ್ ಬಾಸ್ ಸೀಸನ್ 11ಕ್ಕೆ ಎಲ್ಲಾ ರೀತಿಯ ತಯಾರಿ ನಡೆಯುತ್ತಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಸ್ಪರ್ಧಿಗಳನ್ನು ಕೂಡಾ ವಾಹಿನಿ ಬಹುತೇಕ ಫೈನಲ್ ಮಾಡಿದೆಯಂತೆ.
ಇನ್ನು ಬಿಗ್ ಆರಂಭವಾದರೆ ಈಗಾಗಲೇ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪ್ರಸಾರಕ್ಕೆ ತೆರೆ ಬೀಳುವುದಂತೂ ಸತ್ಯ. ಈ ಬಾರಿ ಕೂಡಾ ಮೂರೂ ಧಾರಾವಾಹಿಗಳು ಮುಕ್ತಾಯವಾಗಲಿದೆ ಎಂದು ಹೇಳಲಾಗುತ್ತಿದೆ.
ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕರಿಮಣಿ, ಅಂತರಪಟ ಮತ್ತು ಕೆಂಡಸಂಪಿಗೆ ಧಾರವಾಹಿಗೆ ವಾಹಿನಿ ಶೀಘ್ರದಲ್ಲೇ ಅಂತ್ಯ ಬರೆಯಲಿದೆ ಎಂದು ಹೇಳಲಾಗುತ್ತಿದೆ.
ವಾಹಿನಿಯ ಬೇರೆ ಧಾರಾವಹಿಗೈಗೆ ಹೋಲಿಸಿದರೆ ಈ ಮೂರೂ ಧಾರಾವಾಹಿಗಳಿ ಟಿಆರ್ ಪಿ ರೇಸ್ ನಲ್ಲಿ ಬಹಳ ಹಿಂದೆ ಇದೆ. ಈ ಕಾರಣದಿಂದ ಬಿಗ್ ಬಾಸ್ ಗಾಗಿ ಈ ಧಾರಾವಾಹಿಗಳನ್ನೇ ಮುಗಿಸುವಂತೆ ಹೇಳಲಾಗಿದೆಯಂತೆ.
ಕಣ್ಣು ಎಲ್ಲವೂ ಅಂದುಕೊಂಡಂತೆ ಆದರೆ ಅಕ್ಟೋಬರ್ ನಿಂದ ಬಿಗ್ ಬಾಸ್ ಆರಂಭವಾಗಲಿದೆ. ಅಂದರೆ ಇನ್ನೆರಡು ತಿಂಗಳಲ್ಲಿ ಈ ಧಾರಾವಾಹಿಗಳಿಗೂ ತೆರೆ ಬೀಳಲಿದೆ.