ರಿಯಾಲಿಟಿ ಶೋನ ಇತಿಹಾಸದಲ್ಲೆ ಇದೇ ಮೊದಲ ಭಾರಿಗೆ ಬಿಗ್‌ಬಾಸ್‌ ಮನೆಯಿಂದ ಹೊರಬಿದ್ದ ಸ್ಪೆಷಲ್‌ ಸ್ಪರ್ಧಿ! ಸಾರ್ವಜನಿಕರ ಬೇಡಿಕೆ ಮೇರೆಗೆ ಎಲಿಮಿನೇಷನ್‌?

Tue, 15 Oct 2024-2:48 pm,

Biggboss 18: ಬಿಗ್‌ಬಾಸ್‌ ಕಾರ್ಯಕ್ರಮ ಟಿಆರ್‌ಪಿಯಲ್ಲಿ ನಂಬರ್‌ ಒನ್‌ ಆಗುವುದು ಅಷ್ಟೆ ಅಲ್ಲದೆ, ಕನ್ನಡ, ತೆಲುಗು ಹಾಗೂ ತಮಿಳು ಸೇರಿದಂತೆ ಹಿಂದಿಯಲ್ಲಿಯೂ ಕೂಡ ಸಂಚಲನ ಸೃಷ್ಟಿಸುತ್ತಿದೆ. ಅದರಲ್ಲೂ ಸಲ್ಮಾನ್‌ ಖಾನ್‌ ನಡೆಸಿಕೊಡುತ್ತಿರುವ ಬಿಗ್‌ಬಾಸ್‌ ಸೀಸನ್‌ 18 ಅಂತೂ ದಿನಕ್ಕೊಂದು ಕಾರನ ಮೂಲಕ ಸುದ್ದಿಯಲ್ಲಿರುತ್ತದೆ.   

ಬಿಗ್‌ಬಾಸ್‌ ಸೀಸನ್‌ 18ಕ್ಕೆ ಕಳೆದ ವಾರವಷ್ಟೆ ಚಾಲನೆ ಸಿಕ್ಕಿತ್ತು, ಮೆನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳ ಪೈಕಿ ಮನೆಯ ಒಳಗೆ ಕತ್ತೆಯನ್ನು ಸಹ ಸ್ಪೆಷಲ್‌ ಅತಥಿಯಾಗಿ ಮೆನಯೊಳಗೆ ಕಳುಹಿಸಿಕೊಡಲಾಗಿತ್ತು.   

ಈ ರೀತಿ ಬಿಗ್‌ಬಾಸ್‌ ಮನೆಯೊಳಗೆ ಕತ್ತೆಯನ್ನು ಕಳುಹಿಸುತ್ತಿದ್ದಂತೆ, ಬಿಗ್‌ಬಾಸ್‌ ಸೀಸನ್‌ 18 ತೀವ್ರ ಟೀಕೆಗೆ ಗುರಿಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಜನ ಕತ್ತೆಯನ್ನು ಬಿಗ್‌ಬಾಸ್‌ ಮನೆಯೊಳಗೆ ಕಳುಹಿಸಿದ ಕಾರಣಕ್ಕೆ ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು, ಪ್ರಾಣಿಗೆ ಹಿಂಸೆ ನೀಡಲಾಗುತ್ತಿದೆ ಎಂದು ಗುಡುಗಿದ್ದರು.   

ಕತ್ತೆಯನ್ನು ಮನೆಯೊಳಗೆ ಕರೆತಂದ ಕಾರಣಕ್ಕೆ ಬಿಗ್‌ಬಾಸ್‌ 18 ಕಾರ್ಯಕ್ರಮ ಟೀಕೆಗೆ ಗುರಿಯಾಗಿತ್ತು, ಇದೇ ಕಾರನದಿಂದಾಗಿ ಬಿಗ್‌ ಬಾಸ್‌ ಕಾರ್ಯಕ್ರಮದ ಆಯೋಜಕರು, ಇದೀಗ ಕತ್ತೆಯನ್ನು ಮನೆಯಿಂದ ಹೊರತರುವ ನಿರ್ಧಾರಕ್ಕೆ ಬಂದಿದ್ದಾರೆ.   

ಹೀಗೆ ಬಿಗ್‌ಬಾಸ್‌ ವಿರುದ್ಧ ಟೀಕೆಗಳು ಕೇಳಿಬರುತ್ತಿದ್ದಂತೆ ಕೂಡಲೆ ಎಚ್ಚೆತ್ತುಕೊಂಡ ಬಿಗ್‌ಬಾಸ್‌ ಮ್ಯಾನೇಜ್‌ಮೆಂಟ್‌ ಇದೀಗ ಮನೆಯಿಂದ ಕತ್ತೆಯನ್ನು ಹೊರತಂದಿದೆ. ಇದೇ ಕಾರಣದಿಂದ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಟ್ಟಿದ್ದ ಸ್ಪೆಷಲ್‌ ಸ್ಪರ್ಧಿ ಇದೀಗ ಒಂದೆ ವಾರದಲ್ಲಿ ಎಲಿಮಿನೇಟ್‌ ಆಗಿ ಮನೆಯಿಂದ ಹೊರಬಂದಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link