Biggest debtors in india: ಅತಿ ಹೆಚ್ಚು ಸಾಲ ಹೊಂದಿರುವ ಟಾಪ್ 5 ಸಂಸ್ಥೆಗಳು
ಭಾರತದಲ್ಲಿ ಅತಿಹೆಚ್ಚು ಸಾಲ ಹೊಂದಿರುವ ಟಾಪ್ ಸಂಸ್ಥೆಗಳ ಪೈಕಿ ರಿಲಾಯನ್ಸ್ ಇಂಡಸ್ಟ್ರೀಸ್ ಮೊದಲನೇ ಸ್ಥಾನದಲ್ಲಿದೆ. ಮುಖೇಶ್ ಅಂಬಾನಿ ಒಡೆತನದ ಈ ಸಂಸ್ಥೆ ಒಟ್ಟು 3.13 ಲಕ್ಷ ಕೋಟಿ ರೂ. ಸಾಲವನ್ನು ಹೊಂದಿದೆ.
2ನೇ ಸ್ಥಾನದಲ್ಲಿ ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಶನ್ (NTPC) ಇದ್ದು, ಒಟ್ಟು 2.20 ಲಕ್ಷ ಕೋಟಿ ರೂ. ಸಾಲವನ್ನು ಹೊಂದಿದೆ.
3ನೇ ಸ್ಥಾನದಲ್ಲಿ ವೊಡಾಫೋನ್ ಐಡಿಯಾ ಇದ್ದು, ಒಟ್ಟು 2.01 ಲಕ್ಷ ಕೋಟಿ ರೂ. ಸಾಲವನ್ನು ಹೊಂದಿದೆ. VI 5G ನೆಟ್ವರ್ಕ್ ಅಳವಡಿಕೆಗೆ ಸಾಕಷ್ಟು ಹೂಡಿಕೆ ಮಾಡಿದೆ.
ಪ್ರಸಿದ್ಧ ಟೆಲಿಕಾಂ ಕಂಪನಿ ಭಾರ್ತಿ ಏರ್ಟೆಲ್ ಸಹ 5G ನೆಟ್ವರ್ಕ್ ಅಳವಡಿಕೆಗೆ ಸಾಕಷ್ಟು ಹೂಡಿಕೆ ಮಾಡಿದ್ದು, 1.65 ಲಕ್ಷ ಕೋಟಿ ರೂ. ಸಾಲವನ್ನು ಹೊಂದಿದೆ.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೆಶನ್ (IOC) ಒಟ್ಟು 1.40 ಲಕ್ಷ ಕೋಟಿ ರೂ. ಮೊತ್ತದ ಸಾಲವನ್ನು ಹೊಂದಿದೆ.