100 ವರ್ಷಗಳ ಬಳಿಕ ಅತಿದೊಡ್ಡ ಅಮಾವಾಸ್ಯೆ: ಈ 5 ರಾಶಿಯ ಜನರಿಗೆ ಇದು ಅಮೃತಕಾಲ-ಸಿಕ್ಕೇಸಿಗುತ್ತೆ ಸರ್ಕಾರಿ ನೌಕರಿ

Mon, 11 Dec 2023-6:49 pm,

ಶುಕ್ರನ ಸಂಕ್ರಮಣದಿಂದ ರೂಪುಗೊಂಡ ಮಾಳವ್ಯ ರಾಜಯೋಗವು ಕೆಲ ರಾಶಿಯ ಜನರಿಗೆ ಭರ್ಜರಿ ಲಾಭವನ್ನು ನೀಡಲಿದೆ. ಈ ರಾಜಯೋಗವು ಕಾರ್ತಿಕ ಅಮಾವಾಸ್ಯೆಯಂದೇ ರೂಪುಗೊಳ್ಳುತ್ತಿರುವುದು ವಿಶೇಷ. ಅಂದಹಾಗೆ ಈ ಶುಭಯೋಗವು ಯಾವ ರಾಶಿಯ ಜನರಿಗೆ ಶುಭವನ್ನುಂಟು ಮಾಡಲಿದೆ ಎಂಬುದನ್ನು ಮುಂದೆ ತಿಳಿಯೋಣ.

ಮೇಷ ರಾಶಿ: ಕಾರ್ತಿಕ ಅಮಾವಾಸ್ಯೆಯಂದೇ ರೂಪುಗೊಳ್ಳುವ ಮಾಳವ್ಯ ರಾಜಯೋಗ ಮೇಷ ರಾಶಿಯ ಜನರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ಸಮಯದಲ್ಲಿ ಆರ್ಥಿಕ ಲಾಭಗಳು ಕಂಡುಬರುತ್ತವೆ. ಯಾವುದೇ ಕೆಲಸವಾಗಲಿ ಅದರಲ್ಲಿ ಯಶಸ್ಸು ಇರಲಿದೆ. ಆರೋಗ್ಯವೂ ಚೆನ್ನಾಗಿರುತ್ತದೆ. ವ್ಯಾಪಾರಸ್ಥರಿಗೆ ಸಮಾಜದಲ್ಲಿ ಪ್ರಗತಿ ಮತ್ತು ಒಳ್ಳೆಯ ಹೆಸರು ಬರುತ್ತದೆ.

ಮಿಥುನ ರಾಶಿ: ಮಾಳವ್ಯ ರಾಜಯೋಗವು ಮಿಥುನ ರಾಶಿಯವರಿಗೆ ಅನೇಕ ಲಾಭಗಳನ್ನು ತರುತ್ತದೆ. ಈ ಸಮಯದಲ್ಲಿ ಬಯಸಿದ ಕೆಲಸ ಸಿಗುತ್ತದೆ. ಅದರಲ್ಲೂ ಸರ್ಕಾರಿ ನೌಕರಿ ಪ್ರಾಪ್ತಿಯಾಗುವ ಮಹಾಸೂಚನೆ ಇದೆ.

ಕನ್ಯಾ ರಾಶಿ: ಈ ರಾಶಿಯವರಿಗೆ ಪ್ರಯಾಣದಿಂದ ಲಾಭ ಸಿಗುತ್ತದೆ. ವ್ಯಾಪಾರಿಗಳು ಅದ್ಭುತ ಲಾಭವನ್ನು ಪಡೆಯುತ್ತಾರೆ. ವೈವಾಹಿಕ ಜೀವನವೂ ಉತ್ತಮವಾಗಿರುತ್ತದೆ.

ತುಲಾ: ತುಲಾ ರಾಶಿಯ ಉದ್ಯೋಗಿಗಳಿಗೆ ಬಡ್ತಿ ದೊರೆಯುತ್ತದೆ. ಕಚೇರಿಯಲ್ಲಿ ಗೌರವ ಸಿಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಇದು ಉತ್ತಮ ಸಮಯ.

ಮಕರ ರಾಶಿ: ಕಾರ್ತಿಕ ಅಮಾವಾಸ್ಯೆಯಂದೇ ರೂಪುಗೊಳ್ಳುವ ಮಾಳವ್ಯ ರಾಜಯೋಗ ಈ ರಾಶಿಯ ಜನರಿಗೆ ಪ್ರಗತಿಯನ್ನು ನೀಡುತ್ತದೆ. ನ್ಯಾಯಾಲಯದ ಪ್ರಕರಣಗಳಲ್ಲಿ ತೀರ್ಪು ನಿಮ್ಮಕಡೆ ಇರಲಿದೆ. ಮುಟ್ಟಿದ್ದೆಲ್ಲಾ ಚಿನ್ನವಾಗುವ ಈ ಸಮಯ ಅಮೃತ ಕಾಲವಾಗಿ ಶುಭವನ್ನುಂಟು ಮಾಡಲಿದೆ.

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link