ಹೊಟ್ಟೆ ಹುಣ್ಣಾಗುವಂತೆ ಎಲ್ಲರನ್ನು ನಕ್ಕು ನಲಿಸಿದ್ದ ಖ್ಯಾತ ಕಾಮಿಡಿ ನಟ ಸಾವು..ಕುಡಿತದ ಚಟಕ್ಕೆ ಬಲಿಯಾದ ತಾರೆ

Wed, 28 Aug 2024-9:33 am,

ಯೂಟ್ಯೂಬ್ ಚಾನೆಲ್ ಮೂಲಕ ಖ್ಯಾತಿ ಗಳಿಸಿ ಸಿನಿಮಾಗಳಲ್ಲಿ ನಟಿಸಿದ್ದ ಬಿಜಿಲಿ ರಮೇಶ್ ಅವರು ಸೋಮವಾರ(ಆಗಸ್ಟ್‌ 27) ದಂದು ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.

ಯೂಟ್ಯೂಬ್ ಚಾನೆಲ್‌ನ ಫ್ರಾಂಕ್ ಶೋ ಮೂಲಕ ಬಿಜಿಲಿ ರಮೇಶ್ ಜನರಲ್ಲಿ ಜನಪ್ರಿಯರಾದರು. ರಜನಿ ಕಟ್ಟಾ ಅಭಿಮಾನಿಯಾಗಿದ್ದ ಅವರ ಮಾತು ಮತ್ತು ಮುಖಭಾವಗಳಗೆ ಅಭಿಮಾನಿಗಳು ಫಿದಾ ಆಗಿದ್ದರು, ಅವರು ಮಾಡುತ್ತಿದ್ದ ಪ್ರತಿ ಸಣ್ಣ ಪುಟ್ಟ ವಿಷಯವನ್ನು ಸಹ ಅಭಿಮಾನಿಗಳು ಸಿಕ್ಕಾಪಟ್ಟೆ ಎಂಜಾಯ್‌ ಮಾಡುತ್ತಿದ್ದರು.  

ಈ ರೀತಿ ಯೂಟ್ಯೂಬ್‌ನಲ್ಲಿ ಫೇಮಸ್‌ ಆದ ಬಿಜಿಲಿ ರಮೇಶ್‌ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಪೊನ್ಮಗಳ್‌ ವಂದಾಳ್‌, ನಟಬೆ ಸುಭಾಪ್, ಆಕಾಶಯ್, ಕೋಮಲಿ ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಅಲಂಕರಿಸಿದರು ಈ ಕ್ಯಾತ ಕಾಮಿಡಿಯನ್‌.  

ಕೇವಲ ಸಿನಿಮಾಗಳಷ್ಟೆ ಅಲ್ಲದೆ ತಮಿಳಿನ ಪ್ರಖ್ಯಾತ ಕಾಮಿಡಿ ರಿಯಾಲಿಟಿ ಶೋನಲ್ಲಿಯೂ ಬಿಜಿಲಿ ರಮೇಶ್‌ ಕಾಣಿಸಿಕೊಂಡರು. ಈ ಶೋನ ಮೂಲಕ ಕೂಡ ಬಿಜಿಲಿ ರಮೇಶ್‌ ಹಲವಾರು ಅಭಿಮಾನಿಗಳನ್ನು ಸಂಪಾದಿಸರು. ಮೂಲೆ ಮೂಲೆಯಲ್ಲಿಯೂ ಹೆಸರು ಮಾಡಿದರು.  

ಎಲ್ಲವೂ ಚೆನ್ನಾಗಿಯೇ ಇತ್ತು ಆದರೆ ಕುಡಿತದ ಚಟಕ್ಕೆ ಬಿದ್ದು ಬಿಜಿಲಿ ರಮೇಶ್‌ ಇದೀಗ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.   

ನಟ ಬಿಜಿಲಿ ರಮೇಶ್ ಅವರು ಕಳೆದ ಕೆಲವು ದಿನಗಳಿಂದ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ತೀವ್ರ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್‌ 27 ರಂದು ಸಾವನ್ನಪ್ಪಿದ್ದಾರೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link