Billionaire Alumni:ವಿಶ್ವಕ್ಕೆ ಅತಿ ಹೆಚ್ಚು ಬಿಲಿಯನೇರ್ ಗಳನ್ನು ನೀಡಿದ ಟಾಪ್ ಐದು ವಿಶ್ವವಿದ್ಯಾಲಯಗಳು
1. ಹಾರ್ವರ್ಡ್ ಯುನಿವರ್ಸಿಟಿ (Harward University) - ಜಗತ್ತಿಗೆ ಅತಿ ಹೆಚ್ಚು Billionaire Alumni ನೀಡಿದ ವಿಶ್ವವಿದ್ಯಾಲಯ ಅಂದರೆ ಅದು ಹಾರ್ವರ್ಡ್ ಯುನಿವರ್ಸಿಟಿ. ಅಲ್ಲಿಂದ ಒಟ್ಟು 29 ಬಿಲಿಯನೇರ್ ಗಳು ಹೊರಹೊಮ್ಮಿದ್ದಾರೆ. ಇವುಗಳಲ್ಲಿ ಅತಿ ದೊಡ್ಡ ಎರಡು ಹೆಸರುಗಳೆಂದರೆ ಮಾರ್ಕ್ ಝಕರ್ಬರ್ಗ್ ಹಾಗೂ ಬಿಲ್ ಗೇಟ್ಸ್. ಈ ಇಬ್ಬರೂ ಕೂಡ ತಮ್ಮ ವ್ಯಾಸಂಗವನ್ನು ಪೂರ್ಣಗೊಳಿಸಿಲ್ಲ.
2. ಪೆನ್ಸಿಲ್ವೇನಿಯಾ ಯೂನಿವರ್ಸಿಟಿ (University Of Pennsylvenia) - ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಹೆಸರು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ವಿಶ್ವವಿದ್ಯಾನಿಲಯದಿಂದ ಒಟ್ಟು 28 ವಿದ್ಯಾರ್ಥಿಗಳು ಕೋಟ್ಯಾಧಿಪತಿಗಳಾಗಿ ಹೊರಹೊಮ್ಮಿದ್ದಾರೆ.
3.ಸ್ಟ್ಯಾನ್ಫೋರ್ಡ್ ಯುನಿವರ್ಸಿಟಿ (Stanford University) - 28 ಬಿಲಿಯನೇರ್ ಅಲುಮಿನಿಗಳೊಂದಿಗೆ ಸ್ಟ್ಯಾನ್‌ಫೋರ್ಡ್ ಮೂರನೇ ಸ್ಥಾನದಲ್ಲಿದೆ. ಇದನ್ನು ವಿಶ್ವದ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
4. ಯೇಲ್ ಯುನಿವರ್ಸಿಟಿ (Yale University) - ಅತಿ ಹೆಚ್ಚು ಬಿಲಿಯನೇರ್‌ಗಳನ್ನು ನೀಡಿರುವ ವಿಶ್ವವಿದ್ಯಾನಿಲಯದಲ್ಲಿ ಯೇಲ್ ವಿಶ್ವವಿದ್ಯಾಲಯವು ನಾಲ್ಕನೇ ಸ್ಥಾನದಲ್ಲಿದೆ. ಈ ವಿಶ್ವವಿದ್ಯಾಲಯದಿಂದ ಒಟ್ಟು 21 ಬಿಲಿಯನೇರ್ ಅಲುಮಿನಿಗಳು ಹೊರಹೊಮ್ಮಿದ್ದಾರೆ.
5. ಮುಂಬೈ ಯುನಿವರ್ಸಿಟಿ (Mumbai University) - ಈ ಪಟ್ಟಿಯಲ್ಲಿ ಮುಂಬೈ ವಿಶ್ವವಿದ್ಯಾಲಯ ಐದನೇ ಸ್ಥಾನದಲಿದೆ. ತನ್ನ ಇತಿಹಾಸದಲ್ಲಿ ಈ ವಿಶ್ವವಿದ್ಯಾಲಯ ಒಟ್ಟು 20 ಬಿಲಿಯನೇರ್ ಅಲುಮಿನಿಗಳನ್ನು ನೀಡಿದೆ.