ನಾಲಗೆಗೆ ಕಹಿಯಾಗಿದ್ದರೂ ಆರೋಗ್ಯಕ್ಕೆ ಐದು ಸೂಪರ್ ಫುಡ್ ..!

Thu, 04 Mar 2021-5:35 pm,

 ಹಾಗಲ ಕಾಯಿ ಅನೇಕ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಫೈಬರ್, ವಿಟಮಿನ್ ಎ, ವಿಟಮಿನ್ ಸಿ ಜೊತೆಗೆ ಆಂಟಿಆಕ್ಸಿಡೆಂಟ್‌ಗಳು ಇವೆ.  ಈ ತರಕಾರಿಯಲ್ಲಿ ಕ್ಯಾಲೊರಿಗಳು ತುಂಬಾ ಕಡಿಮೆ ಪ್ರಮಾಣದಲ್ಲಿವೆ. ಹಾಗಾಗಿ ನೀವು ದೇಹ ತೂಕ ಕಡಿಮೆ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ನಿಮ್ಮ ಡಯಟ್ ನಲ್ಲಿ ಹಾಗಲಕಾಯಿಯನ್ನು ಖಂಡಿತವಾಗಿಯೂ ಸೇರಿಸಿ. ಅಲ್ಲದೆ ಮಧುಮೇಹ ರೋಗಕ್ಕೆ ಹಾಗಲಕಾಯಿ ರಾಮಬಾಣ.  ಮನೆಯಲ್ಲಿ ಹಾಗಲಕಾಯಿಯ ಪಲ್ಯವೊ , ಗೊಜ್ಜೋ ಮಾಡಿದರೆ ರುಚಿಗಲ್ಲದಿದ್ದರೂ ಆರೋಗ್ಯದ ದೃಷ್ಟಿಯಿಂದ ತಿನ್ನಿ.  

ಮೆಂತ್ಯ ಬೀಜಗಳನ್ನು ಹಾಗೇ ತಿನ್ನುವುದು ಅಷ್ಟು ಸುಲಭವಲ್ಲ. ಮೆಂತೆ ಕಾಳು ಬಹಳ ಕಹಿಯಾಗಿರುತ್ತದೆ. ಆದರೆ ಮೆಂತ್ಯ ಬೀಜಗಳಲ್ಲಿ ಮಿನರಲ್ಸ್, ವಿಟಮಿನ್ ಗಳು ಫೈಬರ್ ಹೇರಳವಾಗಿರುತ್ತವೆ. ಮಲಬದ್ದತೆ ನಿವಾರಿಸಲು ಮೆಂತೆ ಕಾಳು ಸಹಕಾರಿ. ಅಲ್ಲದೆ ರಕ್ತದಲ್ಲಿ ಇನ್ಸುಲಿನ್ ಉತ್ಪಾದನೆಯನ್ನು ಮೆಂತೆ ಕಾಳು ಹೆಚ್ಚಿಸುತ್ತದೆ.  ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಕೂಡಾ ಇದು ಸಹ ಸಹಾಯ ಮಾಡುತ್ತದೆ.  

ಕಾಫಿ ಕೂಡಾ ಆಂಟಿ ಆಕ್ಸಿಡೆಂಟ್ ಗುಣವನ್ನು ಹೊಂದಿದೆ. ಕಾಫಿ ಹೃದ್ರೋಗ ಮತ್ತು ಮಧುಮೇಹದಂತಹ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಪ್ರತಿದಿನ 1 ಕಪ್ ಕಾಫಿ ಕುಡಿಯುವುದರಿಂದ ಮಧುಮೇಹ, ಕ್ಯಾನ್ಸರ್ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಅನೇಕ ಸಂಶೋಧನೆಗಳು ಮತ್ತು ಅಧ್ಯಯನಗಳು ಬಹಿರಂಗಪಡಿಸಿವೆ. ಹಾಗಂತ ದಿನವಿಡೀ ಕಾಫಿ ಕುಡಿಯುತ್ತಿರುವುದು ಕೂಡಾ ಒಳ್ಳೆಯದಲ್ಲ. ನೆನಪಿಡಿ,. ಕಾಫಿಯ ಕಹಿ ರುಚಿ ಪ್ರಯೋಜನಕಾರಿ. ಅದರಲ್ಲಿ ಹಾಲು, ಸಕ್ಕರೆ ಅಥವಾ ಕೆನೆ ಬೆರೆಸಿ ಅದರ ರುಚಿಯನ್ನು ಬದಲಾಯಿಸಲು ಪ್ರಯತ್ನಿಸಬೇಡಿ.

ಈ ದಿನಗಳಲ್ಲಿ, ಗ್ರೀನ್ ಟೀ ಯಲ್ಲಿರುವ ಕ್ಯಾಟೆಚಿನ್‌ಗಳು ಮತ್ತು ಪಾಲಿಫಿನಾಲ್‌ಗಳ ಕಾರಣದಿಂದಾಗಿ, ಇದರ ರುಚಿ ನೈಸರ್ಗಿಕವಾಗಿ ಸ್ವಲ್ಪ ಕಹಿಯಾಗಿರುತ್ತದೆ. ಗ್ರೀನ್ ಟೀ ದೇಹ ತೂಕ ಕಡಿಮೆ ಮಾಡಲು ಸಹಕಾರಿ. ಗ್ರೀನ್ ಟಿಯಲ್ಲಿ ಕಂಡುಬರುವ ಆಂಟಿ ಆಕ್ಸಿಡೆಂಟ್ ಗಳು  ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ ಮತ್ತು ಹೃದಯಾಘಾತದ ಅಪಾಯವನ್ನು ತಡೆಯುತ್ತದೆ. ಆದರೆ ಅಧಿಕ ಪ್ರಮಾಣದಲ್ಲಿ ಗ್ರೀನ್ ಟಿ ಸೇವನೆ ಕೂಡಾ ಒಳ್ಳೆಯದಲ್ಲ. 

ಆಪಲ್ ಸೈಡರ್ ವಿನೆಗರ್ ಅಂದರೆ ಆಪಲ್ ವಿನೆಗರ್ ನಲ್ಲಿ ಆಂಟಿಮೈಕ್ರೊಬಿಯಲ್ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳಿವೆ. ಅದು ದೇಹ ತೂಕ ಕಡಿಮೆ ಮಾಡಲು  ಸಹಾಯ ಮಾಡುತ್ತದೆ, ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಆದರೆ ನೆನಪಿರಲಿ, ಆಪಲ್ ವಿನೆಗರ್ ಸೇವನೆ ಒಳ್ಳೆಯದಲ್ಲ. ಗಮನಿಸಿ: ಯಾವುದೇ ಪರಿಹಾರವನ್ನು ಕಾರ್ಯಗತ ಮಾಡುವ ಮೊದಲು  ಯಾವಾಗಲೂ ತಜ್ಞ ಅಥವಾ ವೈದ್ಯರ ಸಲಹೆಯನ್ನು ಪಡೆಯಿರಿ.  

 

ZEENEWS TRENDING STORIES

By continuing to use the site, you agree to the use of cookies. You can find out more by Tapping this link