2020-21ನೇ ಹಣಕಾಸು ವರ್ಷದಲ್ಲಿ ಬಿಜೆಪಿಗೆ ಹರಿದುಬಂದ ದೇಣಿಗೆ ಮೊತ್ತ ಎಷ್ಟು ಗೊತ್ತಾ..?
ಕೇಂದ್ರ ಚುನಾವಣಾ ಆಯೋಗದ ವೆಬ್‍ಸೈಟ್‍ನಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ 2020-21ನೇ ಹಣಕಾಸು ವರ್ಷದಲ್ಲಿ ಬಿಜೆಪಿ-ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳಿಗೆ ಕೋಟ್ಯಂತರ ರೂ. ದೇಣಿಗೆ ರೂಪದಲ್ಲಿ ಹರಿದುಬಂದಿದೆ. ಈ ವರ್ಷವೂ ಕೇಸರಿ ಪಕ್ಷಕ್ಕೆ ಅತಿಹೆಚ್ಚಿನ ದೇಣಿಗೆ ಹರಿದುಬಂದಿದೆ.
ಚುನಾವಣಾ ಆಯೋಗದ ವೆಬ್‍ಸೈಟ್‍ನಲ್ಲಿ ಪ್ರಕಟಿಸಿರುವ ಪಕ್ಷಗಳ ದೇಣಿಗೆ ವರದಿಯ ಪ್ರಕಾರ, ಬಿಜೆಪಿಗೆ ವಿವಿಧ ಸಂಸ್ಥೆಗಳು, ಟ್ರಸ್ಟ್ ಗಳು, ವ್ಯಕ್ತಿಗಳಿಂದ ದೊರೆತಿರುವ ಒಟ್ಟು ದೇಣಿಗೆಯ ಮೊತ್ತ 4,77,54,50,077 ರೂ. ಆಗಿದೆ.
ಕಾಂಗ್ರೆಸ್ ಪಕ್ಷಕ್ಕೆ ವಿವಿಧ ಸಂಸ್ಥೆಗಳು, ವ್ಯಕ್ತಿಗಳಿಂದ ಒಟ್ಟು 74,50,49,731 ರೂ. ದೇಣಿಗೆ ಹರಿದುಬಂದಿದೆ. ಚುನಾವಣಾ ಕಾಯ್ದೆ ಪ್ರಕಾರ 20 ಸಾವಿರ ರೂ. ಮೀರಿ ದೇಣಿಗೆ ಪಡೆದಲ್ಲಿ ಆ ಕುರಿತು ರಾಜಕೀಯ ಪಕ್ಷಗಳು ಕಡ್ಡಾಯವಾಗಿ ವರದಿ ಸಲ್ಲಿಸಬೇಕು.
ಬಿಜೆಪಿಯು ಮಾ.14ರಂದು ಚುನಾವಣಾ ಸಮಿತಿಗೆ 2020-21ನೇ ಹಣಕಾಸು ವರ್ಷಕ್ಕೆ ಸಂಬಂಧಿಸಿದ ದೇಣಿಗೆ ಸ್ವೀಕೃತಿ ವರದಿ ಸಲ್ಲಿಸಿದೆ.