Black Coffee Benefits: ತೂಕ ಇಳಿಕೆಯಷ್ಟೇ ಅಲ್ಲ, ಮಧುಮೇಹಕ್ಕೂ ದಿವ್ಯೌಷಧ ಬ್ಲಾಕ್ ಕಾಫಿ

Thu, 23 May 2024-11:21 am,

ಕಾಫಿ ಮನಸ್ಥಿತಿಯನ್ನು ಸುಧಾರಿಸಿ ಅರಿವಿನ ಕಾರ್ಯವನ್ನು ಚುರುಕುಗೊಳಿಸುತ್ತದೆ. ಆದರೆ, ಸಾಮಾನ್ಯ ಕಾಫಿಗಿಂತಲೂ ಬ್ಲಾಕ್ ಕಾಫಿ ಆರೋಗ್ಯಕ್ಕೆ ವರದಾನವಾಗಿದ್ದು, ನಿತ್ಯ ಬ್ಲಾಕ್ ಕಾಫಿ ಕುಡಿಯುವುದರಿಂಡ್ ತೂಕ ಇಳಿಕೆ, ಮಧುಮೇಹ ನಿಯಂತ್ರಣ ಸೇರಿದಂತೆ ಹಲವು ಪ್ರಯೋಜನಗಳನ್ನು ಪಡೆಯಬಹುದು. ಬ್ಲಾಕ್ ಕಾಫಿ ಪ್ರಯೋಜನಗಳೆಂದರೆ... 

ಪ್ರತಿದಿನ ಬ್ಲಾಕ್ ಕಾಫಿ ಕುಡಿಯುವುದರಿಂದ ಇದು  ಚಯಾಪಚಯವನ್ನು ವೇಗಗೊಳಿಸುವುದರ ಜೊತೆಗೆ ಹಸಿವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಬಹುದು. 

ಬ್ಲಾಕ್ ಕಾಫಿ ಕುಡಿಯುವುದರಿಂದ ಇದು ನರವೈಜ್ಞಾನಿಕ ವ್ಯವಸ್ಥೆಯನ್ನು ಉತ್ತೇಜಿಸಿ ನೊರ್‌ಪೈನ್ಫ್ರಿನ್ ಮತ್ತು ಡೋಪಮೈನ್‌ನಂತಹ "ಸಂತೋಷದ ರಾಸಾಯನಿಕಗಳ" ನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಮನಸ್ಸು ಸಂತೋಷವಾಗಿರುತ್ತದೆ. 

ಬ್ಲಾಕ್ ಕಾಫಿ ಕುಡಿಯುವ ಅಭ್ಯಾಸ ಇರುವವರಲ್ಲಿ ಮಧುಮೇಹದ ಅಪಾಯ ಬಹಳ ಕಡಿಮೆ ಎಂದು ಕೆಲವು ಅಧ್ಯಯನಗಳಿಂದ ತಿಳಿದುಬಂದಿದೆ. 

ಮೊದಲೇ ತಿಳಿಸಿದಂತೆ ಬ್ಲಾಕ್ ಕಾಫಿ ಮೆದುಳಿನಲ್ಲಿ ಸಿರೊಟೋನಿನ್ ಮತ್ತು ಡೋಪಮೈನ್ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಒಂಟಿತನ, ಖಿನ್ನತೆಯಂತಹ ಸಮಸ್ಯೆಗಳನ್ನು ಶಮಗೊಳಿಸಬಹುದು ಎಂದು ಹೇಳಲಾಗುತ್ತದೆ. 

ಪ್ರತಿದಿನ ಬ್ಲಾಕ್ ಕಾಫಿ ಕುಡಿಯುವುದರಿಂದ ಇದು ಆಲ್ಝೈಮರ್ಸ್, ಬುದ್ಧಿಮಾಂದ್ಯತೆಯಂತಹ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅಷ್ಟೇ ಅಲ್ಲ, ಮೆಮೋರಿ ಪವರ್ ಅನ್ನು ಹೆಚ್ಚಿಸುತ್ತದೆ. 

ಬ್ಲಾಕ್ ಕಾಫಿ ಕುಡಿಯುವುದರಿಂದ ರಕ್ತದಲ್ಲಿನ ಅಪಾಯಕಾರಿ ಪಿತ್ತಜನಕಾಂಗದ ಕಿಣ್ವಗಳ ಮಟ್ಟವನ್ನು ನಿಯಂತ್ರಿಸಬಹುದು. ಇದು ಯಕೃತ್ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿ ಎಂದು ಹಲವು ಅಧ್ಯಯನಗಳಿಂದ ತಿಳಿದುಬಂದಿದೆ. 

ಒತ್ತಡವನ್ನು ನಿವಾರಿಸಲು ಬ್ಲಾಕ್ ಕಾಫಿ ಅದ್ಭುತ ಪಾನೀಯವಾಗಿದೆ. ಒಂದು ಕಪ್ ಬ್ಲಾಕ್ ಕಾಫಿ ಸವಿಯುವುದರಿಂದ ತ್ವರಿತವಾಗಿ ಒತ್ತಡ ಕಡಿಮೆಯಾಗುತ್ತದೆ. 

ನಿತ್ಯ ಬ್ಲಾಕ್ ಕಾಫಿ ಕುಡಿಯುವವರಲ್ಲಿ ಯಕೃತ್ತು, ಕೊಲೊನ್ ಮತ್ತು ಸ್ತನ ಕ್ಯಾನ್ಸರ್‌ನಂತಹ ಅಪಾಯ ಕಡಿಮೆ ಎಂದು ಹೇಳಲಾಗುತ್ತದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link