ಚಳಿಗಾಲದಲ್ಲಿ ಮಾತ್ರ ಸಿಗುವ ಈ ಕಪ್ಪು ಹಣ್ಣು ಬ್ಲಡ್ ಶುಗರ್ ರೋಗಿಗಳಿಗೆ ಸಂಜೀವಿನಿ ! ಸೇವಿಸಿದ ತಕ್ಷಣ ನಾರ್ಮಲ್ ಆಗುವುದು ರಕ್ತದ ಸಕ್ಕರೆ

Fri, 06 Dec 2024-2:31 pm,

ಮಧುಮೇಹವು ದೀರ್ಘಕಾಲದ ಆರೋಗ್ಯ ಸ್ಥಿತಿಯಾಗಿದ್ದು, ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ ಅನ್ನು ಉತ್ಪಾದಿಸಲು ಸಾಧ್ಯವಾಗದಿದ್ದಾಗ ಅಥವಾ ದೇಹವು ಇನ್ಸುಲಿನ್ ಅನ್ನು ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗದಿದ್ದಾಗ ಸಂಭವಿಸುತ್ತದೆ.

ರಕ್ತದಲ್ಲಿ ಹೆಚ್ಚಾಗುವ ಗ್ಲುಕೋಸ್ ಮಟ್ಟ ದೇಹಕ್ಕೆ ಹಾನಿ ಮತ್ತು ವಿವಿಧ ಅಂಗಗಳು ಮತ್ತು ಅಂಗಾಂಶಗಳ ವೈಫಲ್ಯಕ್ಕೆ ಕಾರಣವಾಗುತ್ತದೆ. 

ಮಧುಮೆಹದಲ್ಲಿ ಮೂರು ವಿಧ. ಟೈಪ್ ೧, ಟೈಪ್ ೨ ಮತ್ತು ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಮಧುಮೇಹ. ಮಧುಮೇಹದಲ್ಲಿ ಒಂದು ದಿನವೂ ತಪ್ಪದೇ ಔಷಧಿ ಸೇವಿಸುತ್ತಲೇ ಇರಬೇಕಾಗುತ್ತದೆ.

ಔಷಧಿಯ ಬದಲು ಕೆಲವೊಂದು ಹಣ್ಣು, ತರಕಾರಿ, ಸೊಪ್ಪು ಹೀಗೆ  ನೈಸರ್ಗಿಕವಾಗಿ ಸಿಗುವ ಪದಾರ್ಥಗಳನ್ನು ಸೇವಿಸುವ ಮೂಲಕವೂ ಬ್ಲಡ್ ಶುಗರ್ ಅನ್ನು ನಿಯಂತ್ರಣ ಮಾಡಬಹುದು.   

ಚಳಿಗಾಲದಲ್ಲಿ ಮಾತ್ರವೇ ಸಿಗುವ ಈ ಕಪ್ಪು  ಹಣ್ಣು ಬ್ಲಡ್ ಶುಗರ್ ರೋಗಿಗಳಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಈ ಹಣ್ಣನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮತ್ತ ನಿಯಂತ್ರಣಕ್ಕೆ ಬರುತ್ತದೆ.   

ಮಧುಮೇಹ ರೋಗಿಗಳು ಕಪ್ಪು ದ್ರಾಕ್ಷಿಯನ್ನು ಸೇವಿಸಬೇಕು. ಈ ಹಣ್ಣಿನ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆಯಿರುವುದರಿಂದ  ಇದು ನಿಧಾನವಾಗಿ ಜೀರ್ಣವಾಗುತ್ತವೆ. ಹಾಗಾಗಿ ಇದು ರಕ್ತದಲ್ಲಿನ ಸಕ್ಕರೆಯ ಮಟ್ಟ ಏರಿಕೆಯಾಗದಂತೆ ತಡೆಯುತ್ತದೆ.    

ಕಪ್ಪು ದ್ರಾಕ್ಷಿಯಲ್ಲಿ ಆಂಥೋಸಯಾನಿನ್ ಮತ್ತು ರೆಸ್ವೆರಾಟ್ರೊಲ್ ಸೇರಿದಂತೆ ಉತ್ಕರ್ಷಣ ನಿರೋಧಕಗಳು ಅಧಿಕವಾಗಿವೆ. ಈ ಸಂಯುಕ್ತಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.   

ಇದರೊಂದಿಗೆ ಕಪ್ಪು ದ್ರಾಕ್ಷಿ ಹೃದಯದ ಆರೋಗ್ಯವನ್ನು ಸುಧಾರಿಸಲು ಮತ್ತು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಸಮರ್ಥವಾಗಿ ತಡೆಯುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದುಗಳನ್ನು ಆಧರಿಸಿ ಬರೆಯಲಾಗಿದೆ. ಇದನ್ನು ಅಳವಡಿಸಿಕೊಳ್ಳುವ ಮುನ್ನ ತಜ್ಞರನ್ನು ಸಂಪರ್ಕಿಸಿ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link