ನಾಗರಹೊಳೆಯ ದಮ್ಮನಕಟ್ಟೆ ರೇಂಜ್ ನಲ್ಲಿ ಪ್ರವಾಸಿಗರಿಗೆ ಬ್ಲಾಕ್ ಪ್ಯಾಂಥರ್ ದರ್ಶನ
ಕರ್ನಾಟಕದಲ್ಲಿಯೇ ಸಫಾರಿ ಪ್ರಿಯರಿಗೆ ದಮ್ಮನಕಟ್ಟೆ ರೇಂಜ್ ಮೊದಲ ಸ್ಥಾನ ಪಡೆದಿದೆ. ಇದೀಗ ಹಲವು ದಿನಗಳ ಬಳಿಕ ನಾಗರಹೊಳೆಯ ದಮ್ಮನಕಟ್ಟೆಯಲ್ಲಿ ಬ್ಲಾಕ್ ಪ್ಯಾಂಥರ್ ಕಾಣಿಸಿಕೊಂಡಿದೆ.
ದಮ್ಮನಕಟ್ಟೆಯಲ್ಲಿ ದರ್ಶನ ಕೊಟ್ಟ ಬ್ಲಾಕ್ ಪ್ಯಾಂಥರ್. ಹಲವು ದಿನಗಳ ಬಳಿಕ ಸಫಾರಿ ಪ್ರಿಯರಿಗೆ ಬ್ಲಾಕ್ ಪ್ಯಾಂಥರ್ ದರ್ಶನ.
ನಾಗರಹೊಳೆಯ ದಮ್ಮನಕಟ್ಟೆ ರೇಂಜ್ ನಲ್ಲಿ ಪ್ರಖ್ಯಾತಿ ಹೊಂದಿರುವ ಬ್ಲಾಕ್ ಪ್ಯಾಂಥರ್.
ಈ ಹಿಂದೆ ಚಿರತೆ ಜೊತೆಗೆ ಒಟ್ಟೋಟ್ಟಾಗಿ ಕಾಣಿಸಿಕೊಳ್ಳುತ್ತಿದ್ದ ಬ್ಲಾಕ್ ಪ್ಯಾಂಥರ್. ಕಳೆದ ಹಲವು ದಿನಗಳಿಂದ ಕಂಡಿರಲಿಲ್ಲ.
ನಾಗರಹೊಳೆಯಲ್ಲಿ ಸಫಾರಿ ವೇಳೆ ಬ್ಲಾಕ್ ಪ್ಯಾಂಥರ್ ಕಾಣದೆ ಸಫಾರಿ ಪ್ರಿಯರು ಬೇಸರಗೊಂಡಿದ್ದರು. ಇದೀಗಾ ಮತ್ತೇ ಬ್ಲಾಕ್ ಪ್ಯಾಂಥರ್ ಕಂಡು ಪ್ರವಾಸಿಗರು ಸಂತಸ ವ್ಯಕ್ತಪಡಿಸಿದ್ದಾರೆ.