Black Pepper Benefits: ಈ ಆರೋಗ್ಯ ಪ್ರಯೋಜನಗಳಿಗಾಗಿ ಮಹಿಳೆಯರು ತಿನ್ನಲೇಬೇಕು ಕರಿಮೆಣಸು
ಆಹಾರದ ರುಚಿಯನ್ನು ಹೆಚ್ಚಿಸುವ ಕರಿಮೆಣಸನ್ನು ಆರೋಗ್ಯದ ಗಣಿ ಎಂತಲೂ ಕರೆಯಲಾಗುತ್ತದೆ. ಅದರಲ್ಲೂ, ನಿಯಮಿತವಾಗಿ ಕರಿಮೆಣಸಿನ ಬಳಕೆಯು ಮಹಿಳೆಯರಿಗೆ ವರದಾನವಿದ್ದಂತೆ ಎಂದು ಬಣ್ಣಿಸಲಾಗುತ್ತದೆ. ಹಾಗಿದ್ದರೆ, ಕರಿಮೆಣಸಿನ ಬಳಕೆಯಿಂದ ಮಹಿಳೆಯರಿಗೆ ಸಿಗುವ ಐದು ಪ್ರಮುಖ ಆರೋಗ್ಯ ಪ್ರಯೋಜನಗಳು ಯಾವುವು ಎಂದು ನೋಡುವುದಾದರೆ...
ಅಧಿಕ ರಕ್ತದೊತ್ತಡ ಸಮಸ್ಯೆ ಬಳಲುತ್ತಿರುವ ಮಹಿಳೆಯರು ಕರಿಮೆಣಸಿನ ಬಳಕೆಯಿಂದ ಪರಿಹಾರ ಪಡೆಯಬಹುದು. ಇದಕ್ಕಾಗಿ, ಅರ್ಧಲೋಟ ನೀರಿನಲ್ಲಿ ಸ್ವಲ್ಪ ಕರಿಮೆಣಸಿನ ಪುಡಿಯನ್ನು ಬೆರೆಸಿ ಕುಡಿಯುವುದು ಉತ್ತಮ.
ನಿಂಬೆಜ್ಯೂಸ್ ನಲ್ಲಿ ಕರಿಮೆಣಸಿನ ಪುಡಿ ಮತ್ತು ಕಪ್ಪು ಉಪ್ಪನ್ನು ಬೆರೆಸಿ ಕುಡಿಯುವುದರಿಂದ ಗ್ಯಾಸ್, ಅಸಿಡಿಟಿ ಸಮಸ್ಯೆಯಿಂದ ಕ್ಷಣಾರ್ಧದಲ್ಲಿ ಮುಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ.
ಎಳ್ಳೆಣ್ಣೆಯನ್ನು ಬಿಸಿ ಮಾಡಿ ಅದರಲ್ಲಿ ಕರಿಮೆಣಸನ್ನು ಹಾಕಿ ತಣ್ಣಗಾದ ಬಳಿಕ ಈ ಎಣ್ಣೆಯಿಂದ ಸಂಧಿವಾತ ಪೀಡಿತ ಜಾಗದಲ್ಲಿ ಮಸಾಜ್ ಮಾಡುವುದರಿಂದ ನೋವಿನಿಂದ ಮುಕ್ತಿ ಪಡೆಯಬಹುದು.
ಕರಿ ಮೆಣಸಿನಲ್ಲಿ ವಿಟಮಿನ್ ಸಿ, ವಿಟಮಿನ್ ಎ, ಫ್ಲೇವನಾಯ್ಡ್ಗಳು, ಕ್ಯಾರೋಟಿನ್ಗಳು ಮತ್ತು ಇತರ ಆಂಟಿ-ಆಕ್ಸಿಡೆಂಟ್ಗಳು ಕಂಡು ಬರುತ್ತವೆ. ಇದು ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವ ಸ್ತನ ಕ್ಯಾನ್ಸರ್ ಸಮಸ್ಯೆಯಿಂದ ಪರಿಹಾರ ನೀಡುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ.
ನಿಯಮಿತವಾಗಿ ಕರಿಮೆಣಸಿನ ಬಳಕೆಯು ದೇಹದಲ್ಲಿ ಸಿರೊಟೋನಿನ್ ಹಾರ್ಮೋನ್ ಉತ್ಪಾದಿಸುತ್ತದೆ. ಇದು ಖಿನ್ನತೆಯನ್ನು ದೂರಮಾಡಲು ಸಹಾಯಕವಾಗಿದೆ ಎಂದು ಹೇಳಲಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.