ಚಳಿಗಾಲದಲ್ಲಿ ಕೆಮ್ಮು ನಿವಾರಣೆಗೆ ಕರಿಮೆಣಸು ಮದ್ದು, ಇದರಲ್ಲಿ ಬೆರೆಸಿ ತಿಂದ್ರೆ ಕ್ಷಣಾರ್ಧದಲ್ಲಿ ಪರಿಹಾರ ಸಿಗುತ್ತದೆ !
ಕರಿಮೆಣಸು ಕೆಮ್ಮು ಮತ್ತು ಶೀತಕ್ಕೆ ಉತ್ತಮ ಮನೆಮದ್ದು. ಚಳಿಗಾದಲ್ಲಿ ಈ 5 ರೀತಿಯಲ್ಲಿ ಬಳಸಿದರೆ ತ್ವರಿತ ಪರಿಹಾರ ಸಿಗುವುದು.
ಚಳಿಗಾಲದಲ್ಲಿ ಕೆಮ್ಮು ಮತ್ತು ಶೀತದ ಸಮಸ್ಯೆ ಸಾಮಾನ್ಯವಾಗಿದೆ. ಕೆಮ್ಮಿನಿಂದಾಗಿ, ಗಂಟಲು ನೋವು, ಮಾತನಾಡಲು ತೊಂದರೆ ಮತ್ತು ತಿನ್ನಲು ಕಷ್ಟವಾಗುತ್ತದೆ. ಕೆಮ್ಮಿನ ತ್ವರಿತ ಪರಿಹಾರಕ್ಕಾಗಿ ಈ ಮನೆಮದ್ದು ಬಳಸಬಹುದು.
ಕರಿಮೆಣಸು ಸೇವಿಸುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ. ಕರಿಮೆಣಸು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದನ್ನು ಸೇವಿಸುವುದರಿಂದ ಗಂಟಲಿನ ಸೋಂಕು ಬೇಗ ಗುಣವಾಗುತ್ತದೆ.
ಕೆಮ್ಮಿನ ಸಮಸ್ಯೆಯನ್ನು ಹೋಗಲಾಡಿಸಲು ಕಷಾಯವನ್ನು ಸೇವಿಸುವುದು ಪ್ರಯೋಜನಕಾರಿ. ನೀರನ್ನು ಕುದಿಸಿ. ಅದಕ್ಕೆ ಏಲಕ್ಕಿ ಪುಡಿ, ಚಿಟಿಕೆ ಅರಿಶಿನ, ಕರಿಮೆಣಸಿನ ಪುಡಿ, ಶುಂಠಿ ಮತ್ತು ತುಳಸಿ ಸೇರಿಸಿ. ಚೆನ್ನಾಗಿ ಕುದಿಯಲು ಬಿಡಿ. ಬಳಿಕ ಕಷಾಯವನ್ನು ಫಿಲ್ಟರ್ ಮಾಡಿ ಕುಡಿಯಿರಿ.
ಕರಿಮೆಣಸು ಸೇವಿಸುವುದರಿಂದ ಕೆಮ್ಮಿನ ಸಮಸ್ಯೆ ನಿವಾರಣೆಯಾಗುತ್ತದೆ. ಇದನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ ಮತ್ತು ಸೋಂಕಿನಿಂದ ಪರಿಹಾರ ಸಿಗುತ್ತದೆ. ಕರಿಮೆಣಸಿನ ಪುಡಿಯನ್ನು ದಿನಕ್ಕೆರಡು ಬಾರಿ ಉಗುರುಬೆಚ್ಚಗಿನ ನೀರಿಗೆ ಬೆರೆಸಿ ಸೇವಿಸಿದರೆ ಕೆಮ್ಮಿನಿಂದ ಮುಕ್ತಿ ಸಿಗುತ್ತದೆ.
ಶೀತ ಮತ್ತು ಕೆಮ್ಮಿನ ಸಮಸ್ಯೆಯನ್ನು ಹೋಗಲಾಡಿಸಲು ಹಾಲು ಮತ್ತು ಕರಿಮೆಣಸು ಸೇವಿಸಿ. ಒಂದು ಲೋಟ ಹಾಲನ್ನು ಬಿಸಿ ಮಾಡಿ. ಅದರಲ್ಲಿ ಒಂದು ಚಿಟಿಕೆ ಕರಿಮೆಣಸಿನ ಪುಡಿಯನ್ನು ಸೇರಿಸಿ. ರಾತ್ರಿ ಮಲಗುವ ಮುನ್ನ ಸೇವಿಸಿ. ಗಂಟಲು ನೋವು ಶಮನವಾಗುತ್ತದೆ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.
ಕರಿಮೆಣಸು ಮತ್ತು ಜೇನುತುಪ್ಪ ಎರಡರಲ್ಲೂ ಬ್ಯಾಕ್ಟೀರಿಯಾ ವಿರೋಧಿ ಗುಣಗಳಿವೆ. ಒಣ ಕೆಮ್ಮಿನಿಂದ ಪರಿಹಾರ ಬೇಕಾದರೆ ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಕರಿಮೆಣಸಿನ ಪುಡಿ ಮತ್ತು ಜೇನುತುಪ್ಪ ಬೆರೆಸಿ ಕುಡಿಯಿರಿ. ಅರ್ಧ ಘಂಟೆಯವರೆಗೆ ಬೇರೆ ಏನನ್ನೂ ಸೇವಿಸಬೇಡಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ