ಕಾಳು ಮೆಣಸಿನ ಪುಡಿಯನ್ನು ಇದರ ಜೊತೆ ಬೆರೆಸಿ ಊಟಕ್ಕೂ ಮುನ್ನ ಸೇವಿಸಿ!ಹೈ ಬ್ಲಡ್ ಶುಗರ್ ಕೂಡಾ ನಾರ್ಮಲ್ ಆಗುವುದು
ಅಡಿಗೆಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ವಿವಿಧ ಮಸಾಲೆಗಳಲ್ಲಿ,ಕರಿಮೆಣಸು ಕೂಡಾ ಒಂದು. ನಮ್ಮ ಆರೋಗ್ಯ ಸುಧಾರಿಸುವಲ್ಲಿ ಕರಿಮೆಣಸು ಮುಖ್ಯ ಪಾತ್ರ ವಹಿಸುತ್ತದೆ.
ಮಧುಮೇಹಿಗಳಿಗೆ ಕರಿಮೆಣಸು ದಿವ್ಯೌಷಧ ಎಂದರೆ ತಪ್ಪಲ್ಲ. ಕರಿಮೆಣಸು ಸೇವಿಸಿದ ಕೆಲವೇ ಸಮಯದಲ್ಲಿ ಬ್ಲಡ್ ಶುಗರ್ ಕಂಟ್ರೋಲ್ ಆಗುತ್ತದೆ.
ರಕ್ತದಲ್ಲಿನ ಗ್ಲೂಕೋಸ್ ಚಯಾಪಚಯಕ್ಕೆ ಇದು ಸಹಾಯ ಮಾಡುತ್ತದೆ.ಇನ್ಸುಲಿನ್ ಸೂಕ್ಷ್ಮತೆಗೆ ಬಂದಾಗ, ಕರಿಮೆಣಸು ಸೇವಿಸಿದರೆ ಪವಾಡದ ರೀತಿಯಲ್ಲಿ ಕೆಲಸ ಮಾಡುತ್ತದೆ.
ಕರಿಮೆಣಸು ಹೈಡ್ರೋಕ್ಲೋರಿಕ್ ಆಮ್ಲವನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಇದು ಪ್ರೋಟೀನ್‌ಗಳನ್ನು ಒಡೆಯುವ ಮೂಲಕ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ಬ್ಲಡ್ ಶುಗರ್ ಅನ್ನು ಕೂಡಾ ನಿಯಂತ್ರಣದಲ್ಲಿ ಇಡುತ್ತದೆ.
ಬಿಸಿ ನೀರಿಗೆ ಒಂದು ಸಣ್ಣ ಚಮಚ ಕರಿಮೆಣಸಿನ ಪುಡಿ ಬೆರೆಸಿ ಕುಡಿದರೆ ಶುಗರ್ ಇರುವವರಿಗೆ ಭಾರೀ ಪ್ರಯೋಜನವಾಗುವುದು. ಖಾಲಿ ಹೊಟ್ಟೆಯಲ್ಲಿ ಅಂದರೆ ಆಹಾರ ಸೇವನೆಗೆ ಮುನ್ನ ಈ ನೀರನ್ನು ಸೇವಿಸಿದರೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಬರೀ ಕರಿಮೆಣಸು ಸೇವಿಸುವುದು ಕಷ್ಟ ಎಂದೆನಿಸಿದರೆ ಸ್ವಲ್ಪ ಜೀರಿಗೆ ಪುಡಿ ಮತ್ತು ಒಂದೆರಡು ಚಮಚ ನಿಂಬೆ ರಸ ಕೂಡಾ ಬೆರೆಸಬಹುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ