ಟೀಯಲ್ಲಿ ಈ ಎಲೆ ಬೆರೆಸಿ ಸ್ಪ್ರೇ ಮಾಡಿದ್ರೆ ಸಾಕು ಗಾಢ ಕಪ್ಪಾದ ಮೊಣಕಾಲುದ್ದ ಕೂದಲು ನಿಮ್ಮದಾಗುತ್ತೆ!
ಒಂದೇ ಒಂದು ಸ್ಪ್ರೇ ನಿಮ್ಮ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಿ ಬೇರುಗಳಿಂದ ಕೂದಲನ್ನು ಕಪ್ಪಾಗಿಸುತ್ತದೆ.
ಬ್ಲಾಕ್ ಟೀ ಹಾಗೂ ಕರಿಬೇವಿನ ಎಲೆಗಳ ಬಳಕೆಯಿಂದ ಬಿಳಿ ಕೂದಲನ್ನು ಬೇರುಗಳಿಂದಲೂ ಕಪ್ಪಾಗಿಸಬಹುದು. ಅಷ್ಟೇ ಅಲ್ಲ, ಕೂದಲುದುರುವಿಕೆ ಕಡಿಮೆಯಾಗಿ ಮೊಣಕಾಲುದ್ದದವರೆಗೆ ಕೂದಲನ್ನೂ ಹೊಂದಬಹುದು.
ವಾಸ್ತವವಾಗಿ ಬ್ಲಾಕ್ ಟೀ ಹಾಗೂ ಕರಿಬೇವಿನ ಎಲೆಗಳೆರಡೂ ಸಹ ಕೂದಲನ್ನು ಕಪ್ಪಾಗಿಸಲು ಸಹಾಯ ಮಾಡುವ ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸಿ ಬೇರುಗಳಿಂದ ಗಾಢ ಕಪ್ಪು ಕೂದಲು ಹೊಂದಲು ಪ್ರಯೋಜನಕಾರಿ ಆಗಿವೆ.
ಮೊದಲಿಗೆ ಬ್ಲಾಕ್ ಟೀ ತಯಾರಿಸಿಕೊಳ್ಳಿ. ಇದರಲ್ಲಿ ಕರಿಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಅದು ತಣ್ಣಗಾದ ಬಳಿಕ ಬ್ಲಾಕ್ ಟೀ ಶೋಧಿಸಿ ಗಾಜಿನ ಬಾಟಲಿಯಲ್ಲಿ ಸಂಗ್ರಹಿಸಿ.
ತಯಾರಿಸಿಟ್ಟ ಬ್ಲಾಕ್ ಟೀಯನ್ನು ಸ್ಪ್ರೇ ಬಾಟಲಿಯಲ್ಲಿ ಹಾಕಿ ಕೂದಲಿನ ಬುಡದಿಂದ ಈ ಸ್ಪ್ರೇ ಅನ್ವಯಿಸಿ 2 ಗಂಟೆಗಳ ಬಳಿಕ ಹೇರ್ ವಾಶ್ ಮಾಡಿ. ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ ಬುಡದಿಂದಲೂ ಕೂದಲು ಕಪ್ಪಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.