ನಿಮ್ಮ ಬಿಳಿ ಕೂದಲಿನಿಂದ ತ್ವರಿತ ಪರಿಹಾರಕ್ಕಾಗಿ ಬ್ಲಾಕ್ ಟೀ ಒಮ್ಮೆ ಟ್ರೈ ಮಾಡಿ
ಕಲುಷಿತ ವಾತಾವರಣ, ಕಳಪೆ ಆಹಾರ ಪದ್ದತಿ, ಒತ್ತಡದ ಜೀವನದಿಂದಾಗಿ ಪ್ರಸ್ತುತ ಅತಿ ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗುತ್ತದೆ.
ಬಿಳಿ ಕೂದಲಿನ ಸಮಸ್ಯೆಗೆ ಹೇರ್ ಡೈ ಒಂದೇ ಪರಿಹಾರವಲ್ಲ. ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳಿಂದಲೂ ಕೂಡ ಇದರಿಂದ ಪರಿಹಾರ ಪಡೆಯಬಹುದು.
ಸಾಮಾನ್ಯವಾಗಿ ಆರೋಗ್ಯ ವೃದ್ಧಿಗಾಗಿ ಬ್ಲಾಕ್ ಟೀ ಕುಡಿಯುತ್ತಾರೆ. ಆದರೆ, ಇದೇ ಬ್ಲಾಕ್ ಟೀ ಬಳಸಿ ಬಿಳಿ ಕೂದಲಿನಿಂದಲೂ ಪರಿಹಾರ ಪಡೆಯಬಹುದು.
ಬ್ಲಾಕ್ ಟೀಗೆ ಸ್ವಲ್ಪ ಅಲೋವೇರಾ ಜೆಲ್, ಕಾಫಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ, ಅರ್ಧ ಗಂಟೆ ಬಿಟ್ಟು ಹೇರ್ ವಾಶ್ ಮಾಡಿದ್ರೆ ಸಾಕು ಬಿಳಿ ಕೂದಲನ್ನು ನೈಸರ್ಗಿಕವಾಗಿ ಕಪ್ಪಾಗಿಸಬಹುದು.
ಕೂದಲಿಗೆ ನಿಯಮಿತವಾಗಿ ಈ ರೀತಿ ಬ್ಲಾಕ್ ಟೀ ಬಳಸುವುದರಿಂದ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುವುದರ ಜೊತೆಗೆ ಕಾಂತಿಯುತವೂ ಆಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.