ಮಧುಮೇಹಕ್ಕೆ ಸಂಜೀವಿನಿ ಈ ಪುಟ್ಟ ಹಣ್ಣು... ಒಮ್ಮೆ ತಿಂದರೆ 30 ದಿನ ಕಾಲ ಬ್ಲಡ್ ಶುಗರ್ ಏರುಪೇರಾಗದೇ ಕಂಟ್ರೋಲ್‌ನಲ್ಲಿರುತ್ತದೆ!
Health Benefits Of Falsa Fruit: ಬೇಸಿಗೆ ಕಾಲದಲ್ಲಿ ಸಿಗುವ ಈ ಹಣ್ಣನ್ನು ಸೇವಿಸಿದರೆ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು. ಫಾಲ್ಸಾ ಹಣ್ಣು, ಚೂರಿ ಹಣ್ಣು ಎಂದು ಇದನ್ನು ಕರೆಯುತ್ತಾರೆ.
ಫಾಲ್ಸಾ ಅಥವಾ ಚೂರಿ ಹಣ್ಣು ಮೆಗ್ನೀಸಿಯಮ್, ಪೊಟ್ಯಾಸಿಯಮ್, ಸೋಡಿಯಂ, ರಂಜಕ, ಕ್ಯಾಲ್ಸಿಯಂ, ವಿಟಮಿನ್ ಎ ಮತ್ತು ವಿಟಮಿನ್ ಸಿ ಮುಂತಾದ ಅನೇಕ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ.
ಫಾಲ್ಸಾ ಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಏನೆಲ್ಲ ಪ್ರಯೋಜನಗಳು ಸಿಗುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
ಫಾಲ್ಸಾ ಹಣ್ಣು ತಿನ್ನುವುದರಿಂದ ದೇಹದಲ್ಲಿ ಪೋಷಕಾಂಶಗಳ ಕೊರತೆ ಎದುರಾಗುವುದಿಲ್ಲ. ಇದು ಸೋಂಕನ್ನು ತಡೆಯುತ್ತದೆ. ಪುರುಷರಲ್ಲಿ ಕಡಿಮೆ ವೀರ್ಯದ ಸಮಸ್ಯೆ ಸಹ ಗುಣವಾಗುತ್ತದೆ.
ಫಾಲ್ಸಾ ಹಣ್ಣಿನ ಸೇವನೆಯಿಂದ ದೇಹಕ್ಕೆ ಹಲವು ರೀತಿಯ ಅದ್ಭುತ ಪ್ರಯೋಜನಗಳು ಸಿಗುತ್ತವೆ. ಫಾಲ್ಸಾ ಜ್ಯೂಸ್ ದೇಹಕ್ಕೆ ಟಾನಿಕ್ ಆಗಿ ಕೆಲಸ ಮಾಡುತ್ತದೆ. ಪಿತ್ತರಸ ಸಮಸ್ಯೆ ನಿವಾರಣೆಯಾಗುತ್ತದೆ.
ವಿಟಮಿನ್ ಸಿ ಮತ್ತು ಖನಿಜಗಳಿಂದ ಸಮೃದ್ಧವಾಗಿರುವ ಫಾಲ್ಸಾ ಸೇವನೆ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಫಾಲ್ಸಾ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಫಾಲ್ಸಾ ಹಣ್ಣಿನ ಗ್ಲೈಸೆಮಿಕ್ ಇಂಡೆಕ್ಸ್ ಅತ್ಯಂತ ಕಡಿಮೆಯಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಪಾಲಿಫಿನಾಲ್ ಆಂಟಿಆಕ್ಸಿಡೆಂಟ್ ಫಾಲ್ಸಾ ಹಣ್ಣಿನಲ್ಲಿ ಇರುವ ಕಾರಣ ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.
ಮಧುಮೇಹಿಗಳು ಫಾಲ್ಸಾ ಹಣ್ಣನ್ನು ಜ್ಯೂಸ್ ಮಾಡಿ ಕುಡಿಯಬಹುದು. ಆದರೆ ಇದಕ್ಕೆ ಸಕ್ಕರೆ ಸೇರಿಸಬೇಡಿ.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.