ಬಿಎಂಡಬ್ಲ್ಯೂ ಅವಳಿ ಅಡ್ವೆಂಚರ್ ಬೈಕ್`ಗಳ ಬಿಡುಗಡೆ -Photos

Wed, 18 Jul 2018-7:09 pm,

ಜರ್ಮನಿಯ ಐಷಾರಾಮಿ ಕಾರು ತಯಾರಕ ಕಂಪನಿ ಬಿಎಂಡಬ್ಲ್ಯು ಗ್ರೂಪ್ನ ಪ್ರೀಮಿಯಂ ಮೋಟರ್ ಸೈಕಲ್ ಭಾಗವಾಗಿರುವ ಬಿಎಂಡಬ್ಲ್ಯು ಮೋಟರ್ರಾಡ್ ಎರಡು ಹೊಸ ಬೈಕ್'ಗಳಾದ G310R ಮತ್ತು G310 GS ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. G310R ಬೈಕ್ ಬೆಲೆ 2.99 ಲಕ್ಷ ರೂ.ಗಳಾಗಿದ್ದರೆ, G310 GS ಬೈಕ್ ಬೆಲೆ 3.49 ಲಕ್ಷ ರೂ.ಗಳು.

ಬಿಎಂಡಬ್ಲ್ಯು ಜಿ 310 ಆರ್ ಮತ್ತು ಜಿ 310 ಜಿಎಸ್ ಬೈಕ್‌ಗಳು313 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಸಾಮರ್ಥ್ಯ ಹೊಂದಿದ್ದು, 28 ಎನ್​ಎಂ ತಿರುಗುಬಲದಲ್ಲಿ 33.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ವ್ಯವಸ್ಥೆಯಿದೆ. ಲಗೆಜ್ ಕ್ಯಾರಿಯರ್, ಟಾಪ್ ಬಾಕ್ಸ್, ಸೆಂಟರ್ ಸ್ಟ್ಯಾಂಡ್, ಜಿಪಿಎಸ್ ಸಪೋರ್ಟ್, ಜಿಪಿಎಸ್ ನ್ಯಾವಿಗೇಟರ್ ವ್ಯವಸ್ಥೆಯಿದೆ.

ಈ ಬೈಕ್‌ಗಳಲ್ಲಿ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಸ್ಟ್ಯಾಂಡರ್ಡ್ ಆಗಿ ದೊರಕಲಿದೆ. ಹಾಗೆಯೇ ಬೈಕಿನ ಮುಂಭಾಗದ ಚಕ್ರಗಳಲ್ಲಿ 4 ಪಿಸ್ಟನ್ ಕ್ಯಾಲಿಪರ್ ಜೊತೆ 300ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದ ಚಕ್ರಗಳಲ್ಲಿ 240ಎಂಎಂ ಡಿಸ್ಕ್ ಬ್ರೇಕ್ ಅಳವಡಿಸುವ ಮೂಲಕ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಜಿ310 ಜಿಎಸ್ ಬೈಕ್‌ಗಳು 2075 ಎಂಎಂ ಉದ್ದ, 880 ಎಂಎಂ ಅಗಲ 1230 ಎಂಎಂ ಎತ್ತರ ಮತ್ತು 1420 ಎಂಎಂ ಚಕ್ರಾಂತರವನ್ನು ಪಡೆದಿರುತ್ತದೆ. ಇನ್ನು 169.5 ಕೆ.ಜಿ ತೂಕವನ್ನು ಹೊಂದಿದೆ.

313 ಸಿ.ಸಿ ಎಂಜಿನ್ ಹೊಂದಿರುವ ಈ ಬೈಕ್'ಗಳು ಗಂಟೆಗೆ 143 ಕಿ.ಮೀ ಟಾಪ್ ಸ್ಪೀಡ್ ಅನ್ನು ಪಡೆದುಕೊಂಡಿದ್ದು, 12-ಲೀಟರ್ ಫ್ಯೂಲ್ ಟ್ಯಾಂಕ್ ಸಾಮರ್ಥ್ಯದೊಂದಿಗೆ ಪ್ರತಿ ಲೀಟರ್‌‌ಗೆ 30 ಕಿ.ಮಿ ಮೈಲೇಜ್ ನೀಡಲಿವೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link