ರೋಮ್ಯಾನ್ಸ್, ಲಿಪ್ ಲಾಕ್ ಮಾಡಲು ರೆಡಿ, ರಿಲೇಷನ್ ಶಿಪ್ ನಲ್ಲಿರುವುದಕ್ಕೂ ಓಕೆ, ಆದರೆ ಮದುವೆ ಮಾತ್ರ ಬೇಡ ಎಂದಿದ್ದೇಕೆ ಈ ಸೆ*ಕ್ಸಿ, ಸುಂದರಿ?
ಇತ್ತೀಚಿಗೆ ಅದ್ಯಾಕೋ ಏನೋ ಜನಕ್ಕೆ ಮದುವೆ ಬಗ್ಗೆ ಕ್ರೇಜ್ ಕಮ್ಮಿಯಾಗುತ್ತಿದೆ. ಇಂಥವರ ಸಾಲಿನಲ್ಲಿ ಸೆಲಬ್ರಿಟಿಗಳೇನೂ ಕಮ್ಮಿ ಇಲ್ಲ. ಈ ಸ್ಟಾರ್ ನಟಿ ಕೂಡ ಮದುವೆ ಬೇಡ ಎಂದು ನಿರ್ಧರಿಸಿದ್ದಾರೆ. ಈ ಸ್ಟಾರ್ ನಟಿ, ಸೆ*ಕ್ಸಿ ನಟಿಯೂ ಅಷ್ಟೇ.
ಆಕೆ ರೋಮ್ಯಾನ್ಸ್, ಲಿಪ್ ಲಾಕ್ ಮಾಡಲು ರೆಡಿಯಂತೆ, ರಿಲೇಷನ್ ಶಿಪ್ ನಲ್ಲಿರುವುದಕ್ಕೂ ಅಭ್ಯಂತರ ಇಲ್ಲವಂತೆ, ಆದರೆ ಮದುವೆ ಮಾತ್ರ ಬೇಡವಂತೆ!
ಅವರೇ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗವನ್ನು ತನ್ನ ಸೆ*ಕ್ಸಿ ಮೈಮಾಟದಿಂದ ಚಿಂದಿ ಚಿತ್ರಾನ್ನ ಮಾಡುತ್ತಿರುವ ಶ್ರುತಿ ಹಸನ್. ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಅವರು ಅಗತ್ಯ ಬಿದ್ದರೆ ಇಷ್ಟ ಅದವರ ಜೊತೆ ಆತ್ಮಿಯದಿಂದ ಇದ್ದು ರೋಮ್ಯಾನ್ಸ್ ಮಾಡುತ್ತೇನೆ, ಆದರೆ ಮದುವೆ ಆಗುವುದಿಲ್ಲ. ಮದುವೆಯಾದ ಗಂಡ ಬಿಟ್ಟು ಹೋದರೆ ಅದನ್ನು ನನ್ನಿಂದ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಮದುವೆ ಎನ್ನುವುದು ಪ್ರೀತಿ ಮತ್ತು ವಿಶ್ವಾಸವನ್ನು ಆಧರಿಸಿರುತ್ತದೆ. ಇತ್ತೀಚಿಗೆ ಜಗತ್ತಿನಲ್ಲಿ ಪ್ರೀತಿ ಮತ್ತು ವಿಶ್ವಾಸ ಎರಡರ ಕೊರತೆ ಕೂಡ ಇದೆ. ನಾನು ಪ್ರೀತಿ ಮತ್ತು ನಂಬಿಕೆ ಇಲ್ಲದವರನ್ನು ಮದುವೆ ಆಗುವುದಕ್ಕೆ ಮತ್ತು ಅನಂತರ ಪ್ರೀತಿ ಮತ್ತು ನಂಬಿಕೆ ಸಿಗಲಿಲ್ಲ ಎಂದು ಅಳುತ್ತಾ ಕೂರುವುದಕ್ಕೆ ಎರಡಕ್ಕೂ ಸಿದ್ಧನಿಲ್ಲ ಅಂತಾ ಶ್ರುತಿ ಹಸನ್ ಹೇಳಿದ್ದಾರೆ.
ನೋಡಲು ಅಪ್ಸರೆಯಂತಿರುವ ಸುರಸುಂದರಿ ಶ್ರುತಿ ಹಸನ್ ನಟನೆಯಲ್ಲಿ ಮಾತ್ರವಲ್ಲ, ಮಾತಿನಲ್ಲೂ ಸಿಕ್ಕಾಪಟ್ಟೆ ಬೋಲ್ಡ್, ಸೆಕ್ಸ್ ಇರಲಿ ಮತ್ತೊಂದು ವಿಚಾರ ಇರಲಿ ಹೇಳಬೇಕೆನಿಸಿದ್ದನ್ನು ಅತ್ಯಂತ ಸ್ಪಷ್ಟದನಿಯಲ್ಲಿ ಹೇಳಿಬಿಡುತ್ತಾರೆ. ಮದುವೆ ವಿಷಯದಲ್ಲೂ ಅದು ನನಗೆ ಆಗಿಬರುವ ವಿಷಯವಲ್ಲ ಅಂತಾ ಹೇಳಿಬಿಟ್ಟಿದ್ದಾರೆ.