`ಬ್ಯಾಂಕಾಕ್‌ನಲ್ಲಿ ನನ್ನ ಎದೆಹಾಲನ್ನು ನನ್ನ ಗಂಡ ಕದ್ದು ಕದ್ದು ಹೀರುತ್ತಿದ್ದ...`- ಪ್ರಖ್ಯಾತ ನಟನ ಬಗ್ಗೆ ಹೆಂಡತಿಯಿಂದಲೇ ಶಾಕಿಂಗ್ ಹೇಳಿಕೆ
ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅದ್ಭುತ ನಟ. ಇನ್ನು ಇವರ ಪತ್ನಿ ಅಚ್ಚರಿಯ ಹೇಳಿಕೆಯೊಂದನ್ನು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದು, ಅದನ್ನು ಓದಿದ ಜನರಿಗೆ ಶಾಕ್ ಮೇಲೆ ಶಾಕ್ ಆಗಿದೆ. ಅಷ್ಟಕ್ಕೂ ಅಂತಹದ್ದೇನನ್ನು ಬರೆದಿದ್ದಾರೆ? ಎಂದು ಮುಂದೆ ಈ ವರದಿಯಲ್ಲಿ ತಿಳಿಯೋಣ.
ನಟ ಆಯುಷ್ಮಾನ್ ಖುರಾನಾ ಪತ್ನಿ ತಾಹಿರಾ ಕಶ್ಯಪ್ 'ದಿ 7 ಸಿನ್ಸ್ ಆಫ್ ಬೀಯಿಂಗ್ ಎ ಮದರ್' ಎಂಬ ಪುಸ್ತಕವನ್ನು ಬರೆದಿದ್ದಾರೆ. ಈ ಪುಸ್ತಕದಲ್ಲಿ ವರ್ಷಗಳಷ್ಟು ಹಿಂದೆ ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ್ದಾಗ, ಅಲ್ಲಿ ಅವರ ಪತಿ ಎದೆಹಾಲು ಸೇವಿಸಿದ ಬಗ್ಗೆ ಬರೆದುಕೊಂಡಿದ್ದಾರೆ.
ಇನ್ನು ಆಯುಷ್ಮಾನ್ ಹೀಗೆ ಮಾಡಲು ಕಾರಣ ಏನೆಂಬುದನ್ನು ಸಹ, ತಾಹಿರಾ ತನ್ನ ಪುಸ್ತಕದಲ್ಲಿ ಬಹಿರಂಗಪಡಿಸಿದ್ದಾರೆ.
ಒಂದೊಮ್ಮೆ ತಾಹಿರಾ ತನ್ನ ಪತಿ ಆಯುಷ್ಮಾನ್ ಖರಾನಾ ಜೊತೆ ಬ್ಯಾಂಕಾಕ್‌ಗೆ ಮೂರು ದಿನಗಳ ಪ್ರವಾಸಕ್ಕೆ ಹೇಗೆ ಹೋಗಬೇಕೆಂದು ಸಿದ್ಧತೆ ನಡೆಸಿದ್ದರು. ಆ ಸಂದರ್ಭದಲ್ಲಿ ಅವರ ಮಗುವಿಗೆ 7 ತಿಂಗಳಷ್ಟೇ ಆಗಿತ್ತು. ಹೀಗಾಗಿ ಮಗುವನ್ನು ತನ್ನ ಪೋಷಕರ ಬಳಿ ಬಿಟ್ಟು ತೆರಳುವ ನಿರ್ಧಾರ ಮಾಡಿದ್ದರು. ಅಷ್ಟೇ ಅಲ್ಲದೆ, ಮಗುವಿಗೆ ಬೇಕಾಗುವ ಎದೆಹಾಲನ್ನು ಸಂಗ್ರಹಿಸಿ ಪ್ರವಾಸಕ್ಕೆಂದು ತೆರಳಿದ್ದರು.
ಆದರೆ ಚೆಕ್ ಇನ್ ಮಾಡುವ ಮೊದಲು, ತಾಹಿರಾಗೆ ಆಕೆಯ ಪೋಷಕರಿಂದ ಕರೆ ಬಂದಿತ್ತು. ಅಲ್ಲಿಂದ ಅವರು, "ಮಗು ಚೆನ್ನಾಗಿದೆ ಆದರೆ ಹಾಲು ಖಾಲಿಯಾಗಿದೆ" ಎಂದು ಹೇಳಿದ್ದರು. ಇದನ್ನು ಕೇಳಿದ ತಾಹಿರಾ ಅಚ್ಚರಿಗೊಂಡಿದ್ದರು. ಆದರೆ ಬೇರೆ ಆಯ್ಕೆ ಇಲ್ಲದ ಕಾರಣ, ಬ್ಯಾಂಕಾಕ್‌ಗೆ ತೆರಳಿದ್ದರು. ಅಲ್ಲಿಯೂ ಸಹ ತನ್ನ ಮಗುವಿಗಾಗಿ ಸಂಗ್ರಹಿಸಿಟ್ಟ ಎದೆಹಾಲು ಖಾಲಿಯಾಗುತ್ತಿತ್ತು.
ಆಗ ತಾಹಿರಾಗೆ ಸ್ಪಷ್ಟವಾಗಿ ತಿಳಿದುಬಂದಿದ್ದು ಏನೆಂದರೆ, ಆ ಎದೆಹಾಲನ್ನು ಆಯುಷ್ಮಾನ್ ತನ್ನ ಪ್ರೊಟೀನ್ ಶೇಕ್ ಜೊತೆ ಬೆರೆಸಿ ಕುಡಿಯುತ್ತಿದ್ದ ಎಂಬುದು. "ನನ್ನ ಹುಡುಗ (ಆಯುಷ್ಮಾನ್) ಮಲಗುವ ಕೋಣೆಯಲ್ಲಿ ಪ್ರೋಟೀನ್ ಶೇಕ್‌ನೊಂದಿಗೆ ವಿಶ್ರಾಂತಿ ಪಡೆಯುತ್ತಿದ್ದ. ಎದೆಹಾಲು ಮಾಯವಾಗುವ ವಿಚಿತ್ರ ಪ್ರಕರಣದ ಬಗ್ಗೆ ನಾನು ಅವರನ್ನು ಪ್ರಶ್ನಿಸಿದೆ. ಆತ ಮುಗುಳ್ನಕ್ಕು... ತನ್ನ ಮೀಸೆಯಲ್ಲಿ ಅಂಟಿದ್ದ ಹಾಲನ್ನು ಸ್ವಚ್ಛಗೊಳಿಸುತ್ತಾ...ಇದು ಪರಿಪೂರ್ಣವಾಗಿದೆ, ಅತ್ಯಂತ ಪೌಷ್ಟಿಕವಾಗಿದೆ, ಪ್ರೋಟೀನ್ ಶೇಕ್‌ನೊಂದಿಗೆ ಚೆನ್ನಾಗಿ ಮಿಶ್ರಣವಾಗುತ್ತದೆ ಎಂದು ಹೇಳಿದ್ದ" ಎನ್ನುತ್ತಾ ತಮ್ಮ ಪುಸ್ತಕದಲ್ಲಿ ತಾಹಿರಾ ಬರೆದುಕೊಂಡಿದ್ದಾರೆ.
ಇದಾದ ಬಳಿಕ ತನ್ನ ಎದೆಹಾಲಿನ ಬಾಟಲಿಗಳನ್ನು ಆತನಿಂದ ಬಚ್ಚಿಟ್ಟಿದ್ದೇನೆ ಎಂದು ತಾಹಿರಾ ಹೇಳಿದ್ದಾರೆ.
ತಾಹಿರಾ ಮತ್ತು ಆಯುಷ್ಮಾನ್ 2008 ರಲ್ಲಿ ವಿವಾಹವಾದರು. ಇದಕ್ಕೂ ಮುನ್ನ ಅವರು ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ್ದರು. ಇಬ್ಬರಿಗೂ ವಿರಾಜವೀರ್ ಮತ್ತು ವರುಷ್ಕಾ ಎಂಬ ಇಬ್ಬರು ಮಕ್ಕಳಿದ್ದಾರೆ.