ವಿಚ್ಛೇದನದ ಬಳಿಕ ʻಮಗಳೇ...ʼ ಎಂದವಳನ್ನೇ ಎರಡನೇ ಮದುವೆಯಾದ ನಟ ಸೈಫ್ ಅಲಿ ಖಾನ್! ಇಬ್ಬರ ನಡುವಿನ ವಯಸ್ಸಿನ ಅಂತರ ತಿಳಿದರೆ ಶಾಕ್ ಆಗ್ತೀರಿ!
ಸೈಫ್ ಅಲಿ ಖಾನ್ 2 ಬಾರಿ ಮದುವೆಯಾಗಿದ್ದಾರೆ. 2 ಮಕ್ಕಳ ತಂದೆಯಾಗಿದ್ದಾರೆ. ಅಮೃತಾ ಸಿಂಗ್ ಜೊತೆಗೆ ಸೈಫ್ ಮೊದಲ ಮದುವೆ ಆದರು. ಅಮೃತಾ ಸಿಂಗ್ ವಯಸ್ಸಿನಲ್ಲಿ ಸೈಫ್ ಅಲಿ ಖಾನ್ ಗಿಂತ ದೊಡ್ಡವರಾಗಿದ್ದರು.
ಸೈಫ್ ಅಲಿ ಖಾನ್ 20 ವರ್ಷದವರಿದ್ದಾಗಲೇ ಅಮೃತಾ ಅವರ ಸೌಂದರ್ಯಕ್ಕೆ ಮನಸೋತರು ಎಂದು ಹೇಳಲಾಗುತ್ತದೆ. ರಾಹುಲ್ ರುವೈಲ್ ಚಿತ್ರದ ಸೆಟ್‌ನಲ್ಲಿ ಅಮೃತಾ ಅವರನ್ನು ಮೊದಲ ಬಾರಿ ಭೇಟಿಯಾದರು.
ಸೈಫ್ ಹಾಗೂ ಅಮೃತಾ ಸಿಂಗ್ ನಡುವೆ 12 ವರ್ಷ ವಯಸ್ಸಿನ ಅಂತರವಿತ್ತು. ಆದರೂ ಇವರಿಬ್ಬರು ಮದುವೆಯಾದರು. ಸೈಫ್ ಅಕ್ಟೋಬರ್ 1991 ರಲ್ಲಿ ಅಮೃತಾ ಜೊತೆ ವಿವಾಹವಾದರು.
ಸುಮಾರು 13 ವರ್ಷಗಳ ದಾಂಪತ್ಯದ ಬಳಿಕ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿತು. ಸೈಫ್ ಅಲಿ ಖಾನ್ 2004 ರಲ್ಲಿ ಅಮೃತಾ ಸಿಂಗ್ ಅವರಿಗೆ ವಿಚ್ಛೇದನ ನೀಡಿದರು.
ಬಳಿಕ ಕರೀನಾ ಕಪೂರ್ ಜೊತೆ ಸೈಫ್ ಅಲಿ ಖಾನ್ ಸ್ನೇಹ ಬೆಳೆಯಿತು. ವರದಿಗಳ ಪ್ರಕಾರ, ಇಬ್ಬರೂ 2008ರಲ್ಲಿ ತಶನ್ ಸೆಟ್‌ನಲ್ಲಿ ಲವ್ ಮಾಡಲು ಆರಂಭಿಸಿದರು.
2012 ಅಕ್ಟೋಬರ್ 16 ರಂದು ಸೈಫ್ ಮತ್ತು ಕರೀನಾ ಮದುವೆಯಾದರು. ಕರೀನಾ ಕಪೂರ್ ಸೈಫ್ ಅಲಿ ಖಾನ್ 2 ನೇ ಪತ್ನಿಯಾದರು. ಕರೀನಾ ಮತ್ತು ಸೈಫ್ ನಡುವೆ 10 ವರ್ಷಗಳ ವಯಸ್ಸಿನ ಅಂತರವಿದೆ.
ಸೈಫ್ ಅಲಿ ಖಾನ್ ಗಿಂತ ಕರೀನಾ ಕಪೂರ್ 10 ವರ್ಷ ಚಿಕ್ಕವರಾಗಿದ್ದಾರೆ. 2016ರಲ್ಲಿ ಕರೀನಾ ಕಪೂರ್ ಖಾನ್, ತೈಮೂರ್‌ಗೆ ಜನ್ಮ ನೀಡಿದರು. ಬಳಿಕ 2021 ರಲ್ಲಿ ಎರಡನೇ ಮಗ ಜಹಾಂಗೀರ್ ಜನಿಸಿದರು.
ಕೆಲವು ವರದಿಗಳ ಪ್ರಕಾರ, ಕರೀನಾ ಕಪೂರ್ ಸೈಫ್ ಅಲಿ ಖಾನ್ ಮೊದಲ ಮದುವೆಗೆ ಹೋಗಿದ್ದರಂತೆ. ಆಗ ಕರೀನಾ ವಿಶ್ ಮಾಡಿದ್ದರಂತೆ, ಇದಕ್ಕೆ ಸೈಫ್ 'ಥ್ಯಾಂಕ್ಯೂ ಬೇಟಾ' ಎಂದಿದ್ದರಂತೆ. (ಇದು ಊಹಾಪೋಹಗಳಾಗಿದ್ದು, ಅಧಿಕೃತವಲ್ಲ)