Bollywood Actors : ಇವ್ರೆ ನೋಡಿ ಅಂತರರಾಷ್ಟ್ರೀಯ ಟಾಕ್ ಶೋಗಳಲ್ಲಿ ʼಸೈ ಎನಿಸಿಕೊಂಡ ಬಾಲಿವುಡ್ ಸ್ಟಾರ್ಸ್..!
ಅಂತರರಾಷ್ಟ್ರೀಯ ಟಾಕ್ ಶೋಗಳಲ್ಲಿ ʼಸೈ ಎನಿಸಿಕೊಂಡ ಬಾಲಿವುಡ್ ಸ್ಟಾರ್ಸ್
ಕಿಂಗ್ ಖಾನ್ ಶಾರುಖ್ ಖಾನ್ ಸಪ್ತಸಾಗರದಾಚೆಗೂ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.ʼಡೇವಿಡ್ ಲೆಟರ್‌ಮ್ಯಾನ್ ಶೋʼಭಾಗಿಯಾಗಿ ವಿದೇಶಿ ಜನರ ಮನಸ್ಸು ಗೆದ್ದಿದ್ದಾರೆ.
ಪ್ರಿಯಾಂಕಾ ಚೋಪ್ರಾ ಅವರು ಓಪ್ರಾ ವಿನ್‌ಫ್ರೇ ಶೋ ನಲ್ಲಿ ತಮ್ಮ ಜೀವನ ಪ್ರಯಾಣದ ಬಗ್ಗೆ ಸಂದರ್ಶನ ನೀಡಿದ್ದಾರೆ
ದೀಪಿಕಾ ಪಡುಕೋಣೆ ʼದಿ ಎಲ್ಲೆನ್ ಡಿಜೆನೆರೆಸ್ ಶೋ, ಜಿಮ್ಮಿ ಕಿಮ್ಮೆಲ್ ಲೈವ್ ಮತ್ತು ದಿ ಲೇಟ್ ಲೇಟ್ ಶೋ ವಿತ್ ಜೇಮ್ಸ್ ಕಾರ್ಡನ್ ಸೇರಿದಂತೆ ಅಂತರಾಷ್ಟ್ರೀಯ ಟಾಕ್ ಶೋಗಳಲ್ಲಿ ತಮ್ಮ ಜೀವನದ ಯಶಸ್ಸಿನ ಬಗ್ಗೆ ಸಂದರ್ಶನ ನೀಡಿದ್ದಾರೆ.
ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಓಪ್ರಾ ವಿನ್‌ಫ್ರೇ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಟಾಕ್ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತದ ಬಗ್ಗೆ ಪಾಶ್ಚಿಮಾತ್ಯ ದೇಶಗಳು ಹೊಂದಿದ್ದ ಕೆಲವು ತಪ್ಪು ಕಲ್ಪನೆಗಳನ್ನು ತೆರೆ ಎಳೆದು ಇಲ್ಲಿನ ಸಂಪ್ರಾದಯ ಬಗ್ಗೆ ವಿವರಿಸಿದ್ದಾರೆ.
2009 ರಲ್ಲಿ, ಅಭಿಷೇಕ್ ಬಚ್ಚನ್ ಅವರ ಪತ್ನಿ ಐಶ್ವರ್ಯಾ ರೈ ಅವರೊಂದಿಗೆ ಓಪ್ರಾ ವಿನ್ಫ್ರೇ ಶೋನಲ್ಲಿ ಭಾಗಿಯಾಗಿದ್ದರು.
ಕ್ರಿಸ್ಟೋಫರ್ ಪ್ಲಮ್ಮರ್ ಜೊತೆಗೆ ಕೆನಡಾದ ಪ್ರಶಸ್ತಿ-ವಿಜೇತ ದೂರದರ್ಶನ ಟಾಕ್ ಶೋ ಜಾರ್ಜ್ ಸ್ಟ್ರೌಂಬೌಲೋಪೌಲೋಸ್ ಟುನೈಟ್ (ಪ್ರಚಲಿತ ವಿದ್ಯಮಾನಗಳ ಕುರಿತು ಒಂದು ಟಾಕ್ ಶೋ) ಗೆ ಅನಿಲ್ ಕಪೂರ್ ಭಾಗಿಯಾಗಿದ್ದರು.