ಮೂವರು ನಾಯಕರ ಜೊತೆ ಡೇಟಿಂಗ್.. ಈಗ ಹಾರ್ದಿಕ್ ಪಾಂಡ್ಯ ಜೊತೆ ಹೊಸ ಸಂಬಂಧ!?.. ಯಾರಿವಳು..?

Sun, 21 Jul 2024-6:25 pm,

ಹೌದು.. ಇತ್ತೀಚಿನ ದಿನಗಳಲ್ಲಿ ಡೇಟಿಂಗ್ ಮಾಡಿದಷ್ಟೇ ವೇಗವಾಗಿ.. ಬೇರ್ಪಟ್ಟು ಬೇರೆಯವರ ಜೊತೆ ಕಮಿಟ್‌ ಆಗುತ್ತಿದ್ದಾರೆ.. ಟಾಲಿವುಡ್ ನ ಚೆಲುವೆಯೊಬ್ಬರು ಇದುವರೆಗೆ ಮೂರು ಜನರೊಂದಿಗೆ ಡೇಟ್ ಮಾಡಿದ್ದಾರೆ. ಇದೀಗ ನಾಲ್ಕನೆಯ ವ್ಯಕ್ತಿ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.  

ನಾಲ್ಕನೇ ವ್ಯಕ್ತಿ ಬೇರೆ ಯಾರೂ ಅಲ್ಲ, ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ..  ಪಾಂಡ್ಯ ಇತ್ತೀಚೆಗೆ ತಮ್ಮ ವಿಚ್ಛೇದನದ ಸುದ್ದಿಯಿಂದ ಸೆನ್ಸೇಷನ್ ಆಗಿದ್ದಾರೆ. ಇನ್ನು ಆ ಸುಂದರಿ ಬೇರೆ ಯಾರೂ ಅಲ್ಲ ಬಿಟೌನ್‌ ನಟಿ ಅನನ್ಯಪಾಂಡೆ.. ಚಂಕಿ ಪಾಂಡೆಯ ಮಗಳಾಗಿ ಚಿತ್ರರಂಗಕ್ಕೆ ಕಾಲಿಟ್ಟ ಈ ಚೆಲುವೆ ತನ್ನ ಗ್ಲಾಮರ್ ಹಾಗೂ ನಟನೆಯಿಂದ ಇಂಡಸ್ಟ್ರಿಯಲ್ಲಿ ವಿಶೇಷ ಮನ್ನಣೆ ಪಡೆದಿದ್ದಾಳೆ.  

ಈ ಚೆಲುವೆ ಈಗಾಗಲೇ ಶಾಹಿದ್ ಕಪೂರ್ ಅವರ ಕಿರಿಯ ಸಹೋದರ ಇಶಾನ್ ಖಟ್ಟರ್, ಕಾರ್ತಿಕ್ ಆರ್ಯನ್ ಮತ್ತು ಆದಿತ್ಯ ರಾಯ್ ಕಪೂರ್ ಅವರೊಂದಿಗೆ ಡೇಟಿಂಗ್ ಮಾಡಿದ್ದರೆ ಎಂಬ ವದಂತಿಗಳಿವೆ. ಆದರೆ ಇವೂ ಯಾವು ಅಧಿಕೃತವಲ್ಲ..  

ಈಗ ಹಾರ್ದಿಕ್ ಪಾಂಡ್ಯ ಹೊಸ ಬಾಯ್ ಫ್ರೆಂಡ್ ಆಗಿ ಅವರ ಲಿಸ್ಟ್ ಗೆ ಸೇರಿಕೊಂಡಿದ್ದಾರೆ ಎಂಬ ಮಾತು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.. ಇತ್ತೀಚಿಗೆ ನಡೆದ ಅನಂತ್ ಅಂಬಾನಿ ಮದುವೆಯಲ್ಲಿ.. ಇವರಿಬ್ಬರು ಜೊತೆಯಾಗಿ ಹೆಜ್ಜೆ ಹಾಕಿದ್ದರು. ಈಗ ಇಬ್ಬರೂ ಒಬ್ಬರನ್ನೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ.  

ಹೀಗಾಗಿ, ಇಬ್ಬರ ನಡುವೆ ರಹಸ್ಯ ಸಂಬಂಧವಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಆದರ ಇದರ ನಿಜಾಂಶ ಗೊತ್ತಿಲ್ಲ.. ಈ ಗಾಸಿಪ್ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ..  

ZEENEWS TRENDING STORIES

By continuing to use the site, you agree to the use of cookies. You can find out more by Tapping this link