ಶಸ್ತ್ರಚಿಕಿತ್ಸೆಯಿಲ್ಲದೆ, ಅದು ಹೇಗೆ ಸಾಧ್ಯ..! ಕೊನೆಗೂ ಬದಲಾವಣೆಯ ರಹಸ್ಯ ರಿವೀಲ್ ಮಾಡಿದ ಕಾಜೋಲ್..
ಕಾಜೋಲ್ ಬಾಲಿವುಡ್‌ನ ಸ್ಟಾರ್ ನಟಿಯರಲ್ಲಿ ಒಬ್ಬರು. ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ನಟಿ, ಇದೀಗ ತಮ್ಮ ಸೌಂದರ್ಯ ಬದಲಾವಣೆ ಕುರಿತು ಮಾತನಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..
ಕಾಜೋಲ್ 'ಬೇಕೂದಿ' ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ‘ಬಾಜಿಗರ್’ ಸಿನಿಮಾ ಈ ಚೆಲುವೆಗೆ ಜನಪ್ರಿಯತೆಯನ್ನು ತಂದು ಕೊಟ್ಟಿತು. ಅದರ ನಂತರ ಕಾಜೋಲ್ ಹಿಂತಿರುಗಿ ನೋಡಲೇ ಇಲ್ಲ.
ಕಾಜೋಲ್ ತನ್ನ ನಟನೆಯಿಂದ ಅಭಿಮಾನಿಗಳ ಮನ ಗೆದ್ದರು. ಆದರೆ ನಟಿ ತನ್ನ ಕಪ್ಪು ಮೈಬಣ್ಣಕ್ಕಾಗಿ ಇನ್ನೂ ಟ್ರೋಲ್ ಆಗುತ್ತಿರುವುದು ವಿಪರ್ಯಾಸ. ಸಧ್ಯ ಈ ಬಗ್ಗೆ ನಟಿ ಟ್ರೋಲ್‌ಗಳಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ.
ಕಾಜೋಲ್ ಆಗಾಗ ಫೊಟೋ ಶೂಟ್ ಮಾಡಿಸಿ ಅವುಗಳನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಕೆಲವೊಮ್ಮೆ ಈ ಫೊಟೋಸ್ ಕೆಲ ನಟ್ಟಿಗರು ಕಪ್ಪಗಿದ್ದ ನಿಮ್ಮ ಮೈಬಣ್ಣ ಬೆಳ್ಳಗಾಗಿದ್ದು ಹೇಗೆ ಅಂತ ಕಾಮೆಂಟ್ ಮಾಡಿ ಪ್ರಶ್ನೆ ಕೇಳುತ್ತಿರುತ್ತಾರೆ..
ಸಂದರ್ಶನವೊಂದರಲ್ಲಿ ಕಾಜೋಲ್ ಟ್ರೋಲ್‌ಗಳಿಗೆ ಸ್ಪಷ್ಟ ಉತ್ತರ ನೀಡಿದ್ದಾರೆ. 'ಈಗ ಇವೆಲ್ಲಾ ಮಾಮೂಲು.. ನನಗೆ ಇದರ ಬಗ್ಗೆ ಚಿಂತೆಯಿಲ್ಲ...' ಅಂತ ಟ್ರೋಲಿಗರಿಗೆ ಮುಟ್ಟಿನೋಡಿಕೊಳ್ಳುವಂತೆ ಉತ್ತರಿಸಿದ್ದಾಳೆ..
ತ್ವಚೆ ಮತ್ತು ಮೈಬಣ್ಣದ ಬಗ್ಗೆ ಪ್ರಶ್ನೆ ಕೇಳುವವರಿಗೆ ಉತ್ತರಿಸಿದ ನಟಿ, ನಾನು ಯಾವುದೇ ಶಸ್ತ್ರಚಿಕಿತ್ಸೆಗೆ ಒಳಗಾಗಿಲ್ಲ. ಸೂರ್ಯನ ಬೆಳಕಿನಿಂದ ದೂರವಿದ್ದೇನೆ. ಆದ್ದರಿಂದ ಚರ್ಮವು ಟ್ಯಾನ್ ಆಗಿಲ್ಲ.. ಅಂತ ಸ್ಪಷ್ಟತೆ ನೀಡಿದ್ದಾರೆ ಕಾಜೋಲ್..
'ಚರ್ಮವನ್ನು ಬಿಳಿಮಾಡುವ ಶಸ್ತ್ರಚಿಕಿತ್ಸೆ ಇಲ್ಲ, ಹೋಮ್ ಸರ್ಜರಿಯಲ್ಲಿ ಮಾತ್ರ ಇರಿ...' ಅಷ್ಟೇ ಅಲ್ಲ, ಅಲ್ಲದೆ, ತಮ್ಮ ಫೋಟೋಗೆ ನಟಿ #sunblocked #spfunbeatable ಎಂಬ ಹ್ಯಾಶ್‌ಟ್ಯಾಗ್ ಬಳಸಿ ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ್ದಾರೆ..
ನಟಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆಗಾಗ ತಮ್ಮ ಹಾಗೂ ಕುಟುಂಬದ ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ..