Kareena Kapoor: ಹೈಸ್ಕೂಲಲ್ಲೇ ಪ್ರೆಗ್ನೆಂಟ್ ಆಗಿದ್ರಂತೆ ಬಾಲಿವುಡ್ ಬೇಬೋ ಕರೀನಾ ಕಪೂರ್…?!

Sat, 24 Sep 2022-4:12 pm,

ಬಾಲಿವುಡ್ ನಲ್ಲಿ ಜೀರೋ ಸೈಜ್ ಟ್ರೆಂಡಿಂಗ್ ಶುರುಮಾಡಿದ್ದು ಇದೇ ಕರೀನಾ ಕಪೂರ್. ಅನೇಕ ಏರಿಳಿತಗಳನ್ನು ಕಂಡಿರುವ ಕರೀನಾ, ತಮ್ಮ ಸಿನಿ ಜರ್ನಿ ಶುರುಮಾಡಿದ್ದು ಪ್ಲಾಪ್ ಸಿನಿಮಾಗಳಿಂದ. ಮೊದ ಮೊದಲು ಬಂದ ಆಫರ್ ಗಳಲ್ಲಿ ತಾಯಿ ಬಬಿತಾ ಮಾಡುತ್ತಿದ್ದ ಹಸ್ತಕ್ಷೇಪದಿಂದ ಕಳೆದುಕೊಳ್ಳುತ್ತಿದ್ದರು.

ಇನ್ನು ಕರೀನಾ ಕಪೂರ್ ತಮ್ಮ ಕೆಲಸದ ಜೊತೆಗೆ ಕೆಲ ಗಾಸಿಪ್ ಗಳಿಂದಲೂ ಫೇಮಸ್ ಆಗಿದ್ದಾರೆ. ಅದರಲ್ಲಿ ಒಂದು ಆಕೆ 9ನೇ ತರಗತಿಯಲ್ಲಿರುವಾಗ ಗರ್ಭಿಣಿಯಾಗಿದ್ದರು. ಹೀಗಾಗಿ ಅವರನ್ನು ತಾಯಿ ಬಬಿತಾ ಬೋರ್ಡಿಂಗ್ ಸ್ಕೂಲ್ಗೆ ಹಾಕಿದರು ಎಂಬುದು. ಹೌದು ಈ ಒಂದು ವದಂತಿ ಬಾಲಿವುಡ್ ಅಂಗಣದಲ್ಲಿ ಭಾರೀ ಚರ್ಚೆಯಲ್ಲಿತ್ತು.

ಕರೀನಾ ಕಪೂರ್ 14ನೇ ವಯಸ್ಸಿನಲ್ಲಿರುವಾಗ ಒಬ್ಬ ಹುಡುಗನನ್ನು ಪ್ರೀತಿಸುತ್ತಿದ್ದರಂತೆ. ಆತನಿಗಾಗಿ ಬಾವಿವುಡ್ ಬೇಬೋ ಏನು ಬೇಕಾದರೂ ಮಾಡುವ ಮಟ್ಟಕ್ಕೆ ತಲುಪಿದ್ದರಂತೆ. ಈ ವಿಚಾರ ತಿಳಿದ ಅವರ ತಾಯಿ ಬಬಿತಾ ಮಗಳಿಗೆ ಬುದ್ದಿ ಮಾತು ಹೇಳಿ ಆಕೆಯನ್ನು ಬೋರ್ಡಿಂಗ್ ಸ್ಕೂಲ್ ಗೆ ಸೇರಿಸಿದ್ದರಂತೆ. ಈ ಪ್ರೀತಿಯ ಬಗ್ಗೆ ಕರೀನಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಈ ವಿವಾದಕ್ಕೆ ಮಸಾಲೆ ಸುರಿದಿದ್ದ ಕೆಲವರು, ಕರೀನಾ ಕಪೂರ್ ಪ್ರೆಗ್ನೆಂಟ್ ಆಗಿದ್ದರು ಎಂದು ಹೇಳಿದ್ದರಂತೆ.

ಕರೀನಾ ಕಪೂರ್ ಬಾಲಿವುಡ್ ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಸೈಫ್ ಅಲಿ ಖಾನ್ ಅವರ ಜೊತೆ ಸುಖೀ ದಾಂಪತ್ಯ ಜೀವನ ನಡೆಸುತ್ತಿರುವ ಇವರು ಇಬ್ಬರು ಮುದ್ದಾದ ಗಂಡು ಮಕ್ಕಳ ತಾಯಿಯಾಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link