ತನಗಿಂತ 10 ವರ್ಷ ಚಿಕ್ಕವನ ಜೊತೆ ಕೃತಿ ಸನೋನ್ ಡೇಟಿಂಗ್, ವಿಶ್ವದ ಈ ಶ್ರೀಮಂತ ಉದ್ಯಮಿಯ ಪುತ್ರ.. ಯಾರು ಗೊತ್ತಾ?
ಬಾಲಿವುಡ್‌ನ ಹಾಟ್ ಮತ್ತು ಬ್ಯೂಟಿಫುಲ್ ನಟಿ ಕೃತಿ ಸನೋನ್ ತನಗಿಂತ 10 ವರ್ಷ ಕಿರಿಯ ಉದ್ಯಮಿ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗಿದೆ. ಆತನ ಜೊತೆಯೇ ಲಂಡನ್‌ನಲ್ಲಿ ಸುತ್ತಾಡಿದ್ದು ಎಂದೂ ಹೇಳಲಾಗುತ್ತಿದೆ.
ನಟಿ ಕೃತಿ ಸನೋನ್ ಖ್ಯಾತ ಉದ್ಯಮಿ ಕಬೀರ್ ಬಹಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕಬೀರ್ ಬ್ರಿಟನ್ ನಿವಾಸಿ.
ಕೃತಿಗಿಂತ ಕಬೀರ್ ಸುಮಾರು ಹತ್ತು ವರ್ಷ ಚಿಕ್ಕವರೆಂದು ಹೇಳಲಾಗುತ್ತದೆ. ಇಷ್ಟೇ ಅಲ್ಲ, ಕಬೀರ್ ತಂದೆ ಇಂಗ್ಲೆಂಡಿನ ಖ್ಯಾತ ಉದ್ಯಮಿ.
ಕಬೀರ್ ಬಹಿಯಾ ಕ್ರಿಕೆಟಿಗ ಧೋನಿ ಪತ್ನಿ ಸಾಕ್ಷಿ ಅವರ ಸಂಬಂಧಿ. ಲಂಡನ್‌ನ ಶ್ರೀಮಂತ ಕುಟುಂಬದಲ್ಲಿ 1999 ರಲ್ಲಿ ಕಬೀರ್ ಬಹಿಯಾ ಜನಿಸಿದರು.
ಕಬೀರ್ ಬಾಹಿಯಾ ಹೆಸರಾಂತ ಬೋರ್ಡಿಂಗ್ ಶಾಲೆಯಾದ ಮಿಲ್‌ಫೀಲ್ಡ್‌ನಲ್ಲಿ ತಮ್ಮ ಶಾಲಾ ಶಿಕ್ಷಣ ಪೂರ್ಣಗೊಳಿಸಿದರು. ಅವರ ತಂದೆ ಕುಲ್ಜಿಂದರ್ ಬಹಿಯಾ ಯುಕೆ ಮೂಲದ ಟ್ರಾವೆಲ್ ಏಜೆನ್ಸಿ ಸೌಥಾಲ್ ಟ್ರಾವೆಲ್ ಅನ್ನು ನಡೆಸುತ್ತಿದ್ದಾರೆ.
2019 ರಲ್ಲಿ ಪ್ರಕಟವಾದ ಸಂಡೇ ಟೈಮ್ಸ್ ಶ್ರೀಮಂತರ ಪಟ್ಟಿಯ ಪ್ರಕಾರ, ಬಹಿಯಾ ಕುಟುಂಬದ ನಿವ್ವಳ ಮೌಲ್ಯವು £427 ಮಿಲಿಯನ್ ಆಗಿತ್ತು. ಇದೀಗ 33 ವರ್ಷದ ಕೃತಿ ಸನೋನ್ ತಮಗಿಂತ 9 ವರ್ಷ ಕಿರಿಯ ಉದ್ಯಮಿ ಕಬೀರ್ ಬಾಹಿಯಾ ಜೊತೆ ಡೇಟಿಂಗ್ ಮಾಡುವ ವದಂತಿ ಹಬ್ಬಿದ್ದು, ಈ ಬಗ್ಗೆ ಇಬ್ಬರೂ ಮೌನ ಮುರಿದಿಲ್ಲ.