Bollywood Actress: `ತಂದೆಯ ವಯಸ್ಸಿನ ವ್ಯಕ್ತಿ ರಾತ್ರಿ 3 ಗಂಟೆಗೆ ಕರೆ ಮಾಡಿ ಮನೆಗೆ ಕರೆದ, ಮತ್ತು..!`

Mon, 22 Apr 2024-6:34 pm,

ಇಂದು, ನಾವು ಹೇಳಲು ಹೊರಟಿರುವ ಪ್ರಸಿದ್ಧ ತಾರೆ ಬೇರೆ ಯಾರೂ ಅಲ್ಲ ಬಿಗ್ ಬಾಸ್ OTT 2 ಮತ್ತು ಮನರಂಜನಾ ಉದ್ಯಮದ ಬಬ್ಲಿ ಮನಿಶಾ ರಾಣಿ ಕುರಿತು. ಇತ್ತೀಚೆಗಷ್ಟೇ ತನ್ನ ಆರಂಭದ ಪ್ರಯಾಣದ ಸಾಕಷ್ಟು ಸಂಗತಿಗಳ ಕುರಿತು ಮಾತನಾಡಿರುವ ಮನೀಶಾ, ಕಾಸ್ಟಿಂಗ್ ಕೌಚ್ ಬಗ್ಗೆ ಕೂಡ ಮಾತನಾಡಿದ್ದಾರೆ.  

ಹೆಸರಾಂತ ಮಾಧ್ಯಮ ಸಂಸ್ಥೆಯ ಜೊತೆಗಿನ ಸಂವಾದದ ವೇಳೆ ಮನಿಷಾ ರಾಣಿ ಹಲವು ಸಂಚಲನ ಮೂಡಿಸುವ ಹೇಳಿಕೆ ನೀಡಿದ್ದಾರೆ. ಇದುವರೆಗಿನ ತನ್ನ  ಪಯಣ ಅಷ್ಟೇನೂ ಸುಲಭವಲ್ಲ ಎಂದು ಮನೀಶಾ ಹೀಲಿದ್ದಾರೆ. ಅವರು ಬಿಗ್ ಬಾಸ್ ಪ್ರವೇಶಿಸಲು ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಯಿತು ಎಂದಿದ್ದಾರೆ. ಬಿಗ್ ಬಾಸ್ ನೆಪದಲ್ಲಿ ವ್ಯಕ್ತಿಯೊಬ್ಬ ತನ್ನನ್ನು ದಾರಿತಪ್ಪಿಸಲು ಪ್ರಯತ್ನಿಸಿದ್ದಾನೆ ಎಂದು ಮನೀಶಾ ಹೇಳಿದ್ದಾಳೆ, ಆದರೂ ಆ ವ್ಯಕ್ತಿ ತಂಡದವರಾಗಿರಲಿಲ್ಲ.  

ತಾನು ಬಿಗ್ ಬಾಸ್‌ಗೆ ಬರಲು 3-4 ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ ಮತ್ತು ಕಲರ್ಸ್ ತಂಡದ ಜನರ ಮೊಬೈಲ್ ನಂಬರ್ ಅನ್ನು ನಾನು ಎಲ್ಲರ ಬಳಿ ಕೇಳುತ್ತಿದ್ದೆ ಎಂದು ನಟಿ ಹೇಳಿದರು. ಆದಾಗ್ಯೂ, ಆ ಸಮಯದಲ್ಲಿ, ಮನೀಶಾಗೆ ಓರ್ವ ಯುವಕನ ನಂಬರ್ ಸಿಕ್ಕಿದೆ ಮತ್ತು ಮನೀಶಾ ತನ್ನ ಕೆಲವು ವೀಡಿಯೊಗಳನ್ನು ಆತನಿಗೆ ಕಳುಹಿಸಿದ್ದಾಳೆ, ಅದನ್ನು ನೋಡಿದ ನಂತರ ಆತ ನೀನು ಖಂಡಿತವಾಗಿ ಆಯ್ಕೆಯಾಗುತ್ತಿ ಎಂಬ ವಿಶ್ವಾಸ ನೀಡಿದ್ದಾನೆ.  

ಮನಿಶಾ ಹೇಳುವ ಪ್ರಕಾರ ಓರ್ವ 50 ವರ್ಷ ವಯಸ್ಸಿನ ಮುದಿ ವ್ಯಕ್ತಿ ಆಕೆಗೆ ಭರವಸೆ ನೀಡಿ ಮುಂಬೈಗೆ ಕರೆಸಿಕೊಂಡ. ಆಗ ಮನಿಶಾ ಬಿಹಾರದಿಂದ ಮುಂಬೈಗೆ ಬಂದಿದ್ದರೂ. ನಂತರ ಒಂದು ದಿನ ಮುಂಬೈನಲ್ಲಿ ಆ ವ್ಯಕ್ತಿ ರಾತ್ರಿ 3 ಗಂಟೆಗೆ ತನ್ನ ಮನೆಗೆ ಕರೆದರು ಎಂದು ಹೇಳುತ್ತಾಳೆ. ಆದರೆ, ಮನೆಗೆ ಹೋಗಲು ನಾನು ನಿರಾಕರಿಸಿದೆ ಮತ್ತು ಆತನ ಮೇಲೆ ಕೋಪದಿಂದ ಕಿರುಚಾಡಿದೆ ಎಂದಿದ್ದಾರೆ.   

ಆಗ 50 ವರ್ಷದ ವ್ಯಕ್ತಿ ಮನಿಷಾ ರಾಣಿಗೆ ಬೆದರಿಕೆ ಹಾಕಿ,  ನೀನು ನನ್ನ ಮನೆಗೆ ಬರಲು ನಿರಾಕರಿಸುತ್ತೀಯಾ? ನಾನು ಈ ಉದ್ಯಮದಲ್ಲಿ ನಿಮ್ಮನ್ನು ಬದುಕಲು ಬಿಡುವುದಿಲ್ಲ ಎಂದು ಹೇಳಿದ್ದಾನೆ. ಆಗ ನಾನು ಅವರ ನಂಬರ್ ಬ್ಲಾಕ್ ಮಾಡಿದೆ ಎಂದು ಮನೀಶಾ ತನ್ನ ಅಳಲು ತೋಡಿಕೊಂಡಿದ್ದಾರೆ. ನಾನು ಅಪರಿಚಿತರ ಸಲಹೆಯನ್ನು ನಂಬಿಡೆ ಮತ್ತು ಈ ಬಗ್ಗೆ ನಾನು ನನ್ನ ಕುಟುಂಬಕ್ಕೆ ಏನನ್ನೂ ಹೇಳಲಿಲ್ಲ ಎಂಬುದಕ್ಕೆ ವಿಷಾಧಿಸುತ್ತೇನೆ ಎಂದು ಮನಿಶಾ ಹೇಳಿದ್ದಾರೆ.  

ನಾನು ತುಂಬಾ ಮುಗ್ಧೆ ಮತ್ತು ಎಲ್ಲರ ಮಾತುಗಳಿಂದ ಪ್ರಭಾವಿತಳಾಗುತ್ತೇನೆ ಎಂದು ಮನೀಶಾ ರಾಣಿ ತಮ್ಮ ಬಗ್ಗೆ ಹೇಳಿಕೊಳ್ಳುತ್ತಾರೆ ಮತ್ತು ನಾನು ನನ್ನ ಈ ಅಭ್ಯಾಸದಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತೇನೆ ಎನ್ನುತ್ತಾರೆ.  

ಮನಿಶಾ ರಾಣಿ ಸಾಮಾಜಿಕ ಮಾಧ್ಯಮದ ತಾರೆ ಮತ್ತು Instagram ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ಅಭಿಮಾನಿ ಬಳಗವನ್ನು ಅವರು ಹೊಂದಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link