Mrunal Thakur: ದುಬಾರಿ ಜಾರ್ಜೆಟ್ ಸೀರೆಯಲ್ಲಿ ಕಂಗೊಳಿಸಿದ ʻಸೀತಾ ರಾಮಂʼ ಸುಂದರಿ: ಇದರ ಬೆಲೆಯೆಷ್ಟು ಗೊತ್ತೇ?

Tue, 30 Apr 2024-12:06 pm,

ಬಾಲಿವುಡ್‌ ನಟಿ ಮೃಣಾಲ್‌ ಠಾಕೂರ್‌ ಜಾರ್ಜೆಟ್ ಸೀರೆಯಲ್ಲಿ ಸ್ಲೀವ್ ಲೆಸ್ ಬ್ಲೌಸ್ ತೊಟ್ಟಿಕೊಂಡು ಚೆಂದದ ಗೊಂಬೆಯಂತೆ ಇತ್ತೀಚೆಗೆ ಕಾಣಸಿಕೊಂಡಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ನಟಿ ಮೃಣಾಲ್‌ ಠಾಕೂರ್ ಫೋಟೋಸ್‌ ವೈರಲ್‌ ಆಗಿದ್ದು, ಸಾರಿ ಲುಕ್ ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಹಾಗೆಯೇ ಈ ಪೋಸ್ಟ್‌ಗೆ ಏಳು ಲಕ್ಷಕ್ಕೂ ಹೆಚ್ಚು ಲೈಕ್ಸ್‌  ಹಾಗೂ ಕಾಮೆಂಟ್‌ಗಳ ಸುರಿಮಳೆ ಬಂದಿದೆ. 

ಬಹುಭಾಷಾ ನಟಿ ಮೃಣಾಲ್‌ ಠಾಕೂರ್ ಈ ಸೀರೆಯನ್ನು ಇತ್ತೀಚೆಗೆ ನಡೆದ ‘ಹಿರಾಮಂಡಿ: ದಿ ಡೈಮಂಡ್ ಬಜಾರ್’ ವೆಬ್ ಸೀರಿಸ್ ನ ಪ್ರೀರಿಲೀಸ್ ಶೋ ವೇಳೆ ಉಟ್ಟಿಕೊಂಡು ಎಲ್ಲರಗಮನ ಸೆಳೆದಿದ್ದಾರೆ.

ದಕ್ಷಿಣ ಚಿತ್ರರಂಗದ ನಟಿ ಮೃಣಾಲ್‌ ಠಾಕೂರ್ ಜಾರ್ಜೆಟ್ ಸೀರೆಯನ್ನು ವಿನ್ಯಾಸಕಿ ಮೃಣಾಲಿನಿ ರಾವ್ ಡಿಸೈನ್‌ ಮಾಡಿದ್ದಾರೆ. ಈ ಸೀರೆಯಲ್ಲಿ ಕಸೂತಿ ಕೆಲಸವೇ ಹೆಚ್ಚಾಗಿಯೇ ಇದೆ.

ಸೌತ್‌ ಸುಂದರಿ ನಟಿ ಮೃಣಾಲ್‌ ಠಾಕೂರ್ ತೊಟ್ಟಿಕೊಂಡಿದ್ದ ಸೀರೆಯು ದುಬಾರಿ ಬೆಲೆಯದ್ದಾಗಿದ್ದು, ವರದಿಗಳ ಪ್ರಕಾರ ಈ ಸೀರೆಯ ದರ 2 ಲಕ್ಷ 8 ಸಾವಿರ ರೂಪಾಯಿ  ಎನ್ನಾಗಿದೆ. 

ನಟಿ ಮೃಣಾಲ್‌ ಠಾಕೂರ್ ಸೀತಾ ರಾಮಂ ಚಿತ್ರದ ಯಶಸ್ಸಿನ ಬಳಿಕ ಯಾವ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದವರು, ಇತ್ತೀಚೆಗೆ ವಿಜಯ್ ದೇವರಕೊಂಡ ಜೊತೆ ‘ಫ್ಯಾಮಿಲಿ ಸ್ಟಾರ್’ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಆದರೆ ಈ ಸಿನಿಮಾಗೆ ಪ್ರೇಕ್ಷಕರಿಂದ ಅಷ್ಟಾಗಿ ಉತ್ತಮ ಪ್ರತಿಕ್ರಿಯೆ ಸಿಗಲಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link