ಸ್ಟಾರ್‌ ನಟಿಯ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ..! ಸತ್ತು 3 ದಿನವಾದ್ರೂ ಯಾರ ಗಮನಕ್ಕೂ ಬರಲಿಲ್ಲ..

Fri, 08 Nov 2024-4:45 pm,

50ರ ದಶಕದಲ್ಲಿ ಜನಮನವನ್ನು ಆಳಿದ ಹಿಂದಿ ಚಿತ್ರರಂಗದ ಸುಂದರ ನಟಿ ನಳಿನಿ ಜಯವಂತ್. ಇವರ ಸೌಂದರ್ಯವು ಆ ಯುಗದ ಅತ್ಯಂತ ಜನಪ್ರಿಯ ನಟಿಯನ್ನಾಗಿ ಮಾಡಿತು. ಬಾಲಿವುಡ್‌ ಚಿತ್ರರಂಗದ ಅತ್ಯಂತ ಬ್ಯೂಟಿಫುಲ್‌ ನಟಿ ಎಂಬ ಬಿರುದು ಪಡೆದ ಈ ನಟಿ ಇದ್ದಕ್ಕಿದ್ದಂತೆ ಕಣ್ಮರೆಯಾದಳು.. ಹೆಚ್ಚಿನ ಮಾಹಿತಿ ಇಲ್ಲಿದೆ..  

ದುರದೃಷ್ಟವಶಾತ್, ಅವರ ಸಾವು ಯಾರ ಗಮನಕ್ಕೂ ಬರಲಿಲ್ಲ. ನಳಿನಿ ಜಯವಂತ್ ಅವರು 'ಬೆಹೆನ್' ಮತ್ತು 'ಅನೋಖಾ ಪ್ಯಾರ್' ರಂತಹ ಹಿಟ್‌ ಚಲನಚಿತ್ರಗಳೊಂದಿಗೆ ಸಿನಿ ಜರ್ನಿ ಪ್ರಾರಂಭಿಸಿದರು. ಟಾಪ್ ನಟರು ಮತ್ತು ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದ ಈಕೆ ಆ ಕಾಲದ ಟಾಪ್ ನಟಿಯರಲ್ಲಿ ಒಬ್ಬರು.   

ಹಲವು ಚಿತ್ರಗಳಲ್ಲಿ ಅವರ ನಟನೆ ಮೆಚ್ಚುಗೆಗೆ ಪಾತ್ರವಾಯಿತು. 1950 ರ ದಶಕದಲ್ಲಿ, ಫಿಲ್ಮ್‌ಫೇರ್ ಸೌಂದರ್ಯ ಸಮೀಕ್ಷೆಯನ್ನು ನಡೆಸಿತು, ಅದರಲ್ಲಿ ನಳಿನಿ ಮೊದಲ ಸ್ಥಾನ ಪಡೆದರು. ಸೌಂದರ್ಯದ ವಿಷಯದಲ್ಲಿ ಮಧುಬಾಲಾಳನ್ನೂ ಸೋಲಿಸಿದ್ದರು..  

ಮಹಾರಾಷ್ಟ್ರದಲ್ಲಿ ಜನಿಸಿದ ನಿಲಿನಿ ಜಯವಂತ್‌, ಬಾಲ್ಯದಿಂದಲೂ ನೃತ್ಯ ಮತ್ತು ಸಂಗೀತದಲ್ಲಿ ತುಂಬಾ ಒಲವು ಹೊಂದಿದ್ದರು. ಹಾಗಾಗಿ ಕಥಕ್ ಮತ್ತು ಶಾಸ್ತ್ರೀಯ ಸಂಗೀತವನ್ನೂ ಕಲಿತರು. ರಾಧಿಕ್ ಚಿಮನ್‌ಲಾಲ್ ಅವರ ಮಗ ವೀರೇಂದ್ರ ದೇಸಾಯಿ 1945 ರಲ್ಲಿ ನಳಿನಿಯನ್ನು ವಿರೋಧದ ನಡುವೆಯೂ ವಿವಾಹವಾದರು. ಹೀಗಾಗಿ ಇಬ್ಬರೂ ಮಲಾಡ್‌ನಲ್ಲಿ ಬಾಡಿಗೆ ಕೋಣೆಯಲ್ಲಿ ವಾಸಿಸುತ್ತಿದ್ದರು. ಕ್ರಮೇಣ ನಳಿನಿಗೆ ಸಿನಿಮಾ ಆಫರ್‌ಗಳು ಸಿಗಲಿಲ್ಲ..    

ಈ ಎಲ್ಲಾ ಕಾರಣಗಳು ಇಬ್ಬರ ನಡುವಿನ ಜಗಳಕ್ಕೆ ಕಾರಣವಾಯತು.. ಇಬ್ಬರೂ ಇನ್ನು ಮುಂದೆ ಒಟ್ಟಿಗೆ ಬದುಕುವುದು ಕಷ್ಟ ಎಂದು ನಿರ್ಧರಿಸಿ, ಮದುವೆಯಾದ ಮೂರು ವರ್ಷಕ್ಕೆ ಬೇರೆಯಾದರು. ಅನಂತರ ನಳಿನಿ, ನಟ ಪ್ರಭು ದಯಾಳ್ ಅವರನ್ನು ವಿವಾಹವಾದರು. ಪ್ರಭು ದಯಾಳ್ ಹಿಂದಿ ಚಲನಚಿತ್ರಗಳಲ್ಲಿ ಪ್ರಸಿದ್ಧ ನಟರಾಗಿದ್ದರು. ಆದರೆ ಚಿತ್ರರಂಗಕ್ಕೆ ಹೊಸ ನಟಿಯರ ಪ್ರವೇಶದೊಂದಿಗೆ ನಳಿನಿ ವೃತ್ತಿಜೀವನವು ಅಧೋಗತಿಗೆ ಹೋಗಲಾರಂಭಿಸಿತು.  

1950 ಮತ್ತು 1960 ರ ದಶಕದ ಅಂತ್ಯದ ವೇಳೆಗೆ, ಸಿನಿಮಾ ಆಫರ್‌ಗಳು ಕಡಿಮೆಯಾದವು. ಇದರಿಂದಾಗಿ ಕ್ರಮೇಣ ಜನಮನದಿಂದ ಹಿಂದೆ ಸರಿದರು. 1983 ರಲ್ಲಿ, ಅವರು ನಾಸ್ತಿಕ್ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅವರ ತಾಯಿಯ ಪಾತ್ರವನ್ನು ನಿರ್ವಹಿಸಿದರು. ಆದರೆ ಇವರ ನಟನೆಯನ್ನು ಜನ ಮೆಚ್ಚದ ಕಾರಣ ಚಿತ್ರ ಜಗತ್ತಿಗೆ ಗುಡ್ ಬೈ ಹೇಳಿದರು.    

ನಳಿನಿ ಜಯವಂತ್ ಅವರು 22 ಡಿಸೆಂಬರ್ 2010 ರಂದು ತಮ್ಮ 84ನೇ ವಯಸ್ಸಿನಲ್ಲಿ ಮುಂಬೈನ ಚೆಂಬೂರಿನ ಯೂನಿಯನ್ ಪಾರ್ಕ್‌ನಲ್ಲಿರುವ ತಮ್ಮ ಬಂಗಲೆಯಲ್ಲಿ ನಿಧನರಾದರು. 2001ರಲ್ಲಿ ಪತಿ ಪ್ರಭು ದಯಾಳ್‌ನ ಮರಣದ ನಂತರ ನಟಿ ಸಮಾಜ, ಬಂಧು ಬಳಗದಿಂದ ದೂರವಿದ್ದರು ಎನ್ನಲಾಗಿದೆ. ಹೀಗಾಗಿ ಆಕೆಯ ಸಾವು 3 ದಿನಗಳ ನಂತರ ಬೆಳಕಿಗೆ ಬಂತು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link