ಬೋಲ್ಡ್ ಸೀನ್ ಶೂಟಿಂಗ್ ವೇಳೆ ಡೈರೆಕ್ಟರ್ ಕಟ್ ಹೇಳಿದ್ರೂ ಆ ನಟ ಮಾಡುತ್ತಲೇ ಇದ್ದ..! ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟಿ
ಕ್ಯಾಮೆರಾ, ಶೂಟಿಂಗ್, ಸಿನಮಾ.. ಈ ಮಾಯಾನಗರಿ ನಾವು ಅಂದುಕೊಂಡಷ್ಟು ಕೆಟ್ಟದ್ದೂ ಅಲ್ಲ, ಒಳ್ಳೆಯದೂ ಅಲ್ಲ.. ಅನೇಕ ಬಾರಿ ಈ ಉದ್ಯಮದಲ್ಲಿ ನಟಿಯರು ಹೆಸರು ಮಾಡಬೇಕು ಅಂದ್ರೆ, ಬಹಳಷ್ಟು ಸಹಿಸಿಕೊಳ್ಳಬೇಕು ಮತ್ತು ಕೆಟ್ಟ ದಿನಗಳನ್ನ ಕೆಟ್ಟವರನ್ನ ಎದರಿಸಬೇಕು.. ಸಧ್ಯ ನಟಿ ಸಯಾನಿ ಗುಪ್ತಾ ಹಂಚಿಕೊಂಡಿರುವ ವಿಚಾರವೊಂದು ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದೆ..
ಒಮ್ಮೆ ಚಿತ್ರವೊಂದರ ಶೂಟಿಂಗ್ ಸಮಯದಲ್ಲಿ ನಡೆದ ಪ್ರಸಂಗವೊಂದರ ಕುರಿತು ನಟಿ ಸಯಾನಿ ಗುಪ್ತಾ ಹೇಳಿದ್ದಾರೆ. ಕಿಸ್ಸಿಂಗ್ ಸೀನ್ ಚಿತ್ರೀಕರಿಸುವೆ ವೇಳೆ, ಶಾಟ್ ಮುಗಿದು, ನಿರ್ದೇಶಕರು ಕಟ್ ಹೇಳಿದರೂ ಆ ನಟ ಮಾತ್ರ ಕಿಸ್ ಮಾಡುವುದನ್ನು ನಿಲ್ಲಿಸಲಿಲ್ಲ.. ಆ ಭಯಾನಕ ಸಂಗತಿಯನ್ನು ನಾನು ಇಂದಿಗೂ ಮರೆಯಲ್ಲ ಅಂತ ಹೇಳಿಕೊಂಡಿದ್ದಾರೆ...
'ರೇಡಿಯೋ ನಶಾ'ಗೆ ನೀಡಿದ ಸಂದರ್ಶನದಲ್ಲಿ ಸಯಾನಿ ಗುಪ್ತಾ ಈ ವಿಚಾರವನ್ನು ರಿವೀಲ್ ಮಾಡಿದ್ದಾರೆ.. ಕಾಲ ಬದಲಾದ ನಂತರ ಹಲವು ಸುಧಾರಣೆಯಾಗುತ್ತಿವೆ, ಈಗ ಒಂದು ಇಂಟಿಮೇಟ್ ಸೀನ್ ಅಥವಾ ಬೋಲ್ಡ್ ಸೀನ್ ಶೂಟಿಂಗ್ ಮಾಡುವಾಗ ಸೆಟ್‌ನಲ್ಲಿ ಇಂಟಿಮೆಸಿ ಕೋಆರ್ಡಿನೇಟರ್ ಮತ್ತು ಡೈರೆಕ್ಟರ್ ಇರುತ್ತಾರೆ. ಇಂತಹ ಸೀನ್‌ಗಳನ್ನು ಅತ್ಯಂತ ವೃತ್ತಿಪರವಾಗಿ ಚಿತ್ರೀಕರಿಸಲಾಗುತ್ತದೆ.
ನಾನು 2013ರಲ್ಲಿ ಮಾರ್ಗರಿಟಾ ವಿತ್ ಎ ಸ್ಟ್ರಾ ಚಿತ್ರದಲ್ಲಿ ನಟಿಸಿದ್ದೆ. ಕೆಲವರ ಪ್ರಕಾರ ಇಂಟಿಮೇಟ್ ಸೀನ್ ಗಳನ್ನು ತುಂಬಾ ಟೆಕ್ನಿಕಲ್ ಆಗಿ ಮಾಡಿರುವುದರಿಂದ ಮಾಡಲು ಸುಲಭವಾಯಿತು ಎನ್ನುತ್ತಾರೆ. ಆದರೆ ಇದರ ನೆಪದಲ್ಲಿ ಕೆಲವರು ಇದರ ಲಾಭವನ್ನೂ ಪಡೆಯುತ್ತಾರೆ.. ಎಂದರು..
ನಟಿ, 'ನಾನು ಆ ಮುಖವನ್ನೂ ನೋಡಿದ್ದೇನೆ. ಒಮ್ಮೆ ಒಬ್ಬ ನಟ ಕಟ್ ಹೇಳಿದ ಮೇಲೂ ಮುತ್ತು ಕೊಡುತ್ತಲೇ ಇದ್ದ.. ಇದರಿಂದ ನನಗೆ ಸಿಟ್ಟು ಬಂತು. ಕೆಲವೊಮ್ಮೆ ಈ ವಿಷಯಗಳು ತುಂಬಾ ಚಿಕ್ಕದಾಗಿ ಕಾಣಿಸಿದರೂ ಅವುಗಳು ತುಂಬಾ ಅಸಭ್ಯ ವರ್ತನೆಯಾಗಿತ್ತು.
"ಮಾರ್ಗರಿಟಾ ವಿತ್ ಎ ಸ್ಟ್ರಾ" ಸಿನಿಮಾದಲ್ಲಿ ಗೋವಾದಲ್ಲಿ ಶೂಟ್ ಆದ ಒಂದು ದೃಶ್ಯ ಇರಲಿದೆ. ನಾನು ಚಿಕ್ಕ ಡ್ರೆಸ್ ಹಾಕಿಕೊಂಡು ಬೀಚ್ ನಲ್ಲಿ ಮಲಗಿದ್ದೆ. ಚಿತ್ರೀಕರಣದ ವೇಳೆ ನನಗೆ ತುಂಬಾ ಅನಾನುಕೂಲವಾಗಿತ್ತು. ಅಲ್ಲಿ 70ಕ್ಕೂ ಹೆಚ್ಚು ಜನ ನಿಂತಿದ್ದರು. ಸುರಕ್ಷತೆಯೂ ಇತ್ತು..